ಮಾನಸಿಕವಾಗಿ ನೊಂದವರಿಗೆ ಶಿವಮೊಗ್ಗದಲ್ಲಿ ‘ಸಮಾಧಾನ್’
ಶಿವಮೊಗ್ಗ : ಮಾನಸಿಕ ಸಮಸ್ಯೆಗಳನ್ನು ಎದುರಿಸುವವರಿಗಾಗಿ ಶಿವಮೊಗ್ಗ ನಗರದ ಹೊರವಲಯದಲ್ಲಿ ಒಂದು ಮನೆ ರೆಡಿಯಾಗಿದೆ. ಮನೆ ಹೆಸರು ‘ಸಮಾಧಾನ್’. ಬೆಂಗಳೂರಿನಂತಹ ದೊಡ್ಡ ನಗರದ ಹೊರತಾಗಿ ರಾಜ್ಯದಲ್ಲಿ ಏಕೈಕ ಎನಿಸಿಕೊಂಡಿರುವ ಈ ಕೇಂದ್ರದಲ್ಲಿ ಮಾನಸಿಕ ತೊಂದರೆಗಳನ್ನೆದುರಿಸುವವರಿಗೆ ಚಿಕಿತ್ಸೆ ನೀಡಲಾಗುವುದು.
ಮಾನಸಿಕ ತೊಂದರೆ ಇರುವವರು ಹುಚ್ಚರಲ್ಲ. ದಿನನಿತ್ಯದ ವ್ಯವಹಾರಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ನಿರ್ವಹಿಸಿಕೊಂಡು ಹೋಗಬಲ್ಲ , ಆದರೆ ಖಿನ್ನತೆ ಮತ್ತು ಅನಾಸಕ್ತಿಯಿಂದ ಬಳಲುತ್ತಿರುವವರಿಗೆ ಈ ಸಮಾಧಾನ್ ಮನೆ ನೆಮ್ಮದಿ ನೀಡಲೆತ್ನಿಸುತ್ತದೆ ಎಂದು ಕೇಂದ್ರದ ಸಲಹಾಕಾರ ಮತ್ತು ಮಾನಸ ನರ್ಸಿಂಗ್ ಹೋಂನ ಖ್ಯಾತ ಮನಶ್ಯಾಸ್ತ್ರ ಜ್ಞ ಡಾ. ಅಶೋಕ್ ಪೈ ಹೇಳುತ್ತಾರೆ.
ಅನಾಸಕ್ತಿಯ ಸಮಸ್ಯೆ ಹೊಂದಿರುವವರಿಗೆ ಆಸ್ಪತ್ರೆಯಲ್ಲಿ ಅಥವಾ ಕ್ಲಿನಿಕ್‌ಗಳಲ್ಲಿ ಟ್ರೀಟ್‌ಮೆಂಟ್‌ನ ಅಗತ್ಯವಿರುವುದಿಲ್ಲ. ಹೊಸ ಪರಿಸರ ನಿರ್ಮಿಸಿಕೊಡುವುದೂ ಅವರಿಗೆ ಉಪಯುಕ್ತವಾಗುತ್ತದೆ. ಅಲ್ಲದೆ ಮಾನಸಿಕವಾಗಿ ಅಸ್ವಸ್ಥರಾದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಹೊಂದಿಕೊಂಡು ಬಾಳಬೇಕಾಗುತ್ತದೆ. ಚಿಕಿತ್ಸೆಯ ನಂತರ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಮುಖ್ಯ. ಇಂತಹ ಸಂದರ್ಭದಲ್ಲಿ ಸಮಾಧಾನ್ ನೆರವಾಗುತ್ತದೆ ಎಂದು ಪೈ ಹೇಳುತ್ತಾರೆ.
ಸಮಾಧಾನ್ ಎಂಬ ಮನೆಯಲ್ಲಿ ವಾಸಿಸುವವರು ಕೃಷಿ , ತೋಟಗಾರಿಕೆಯಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಊಟ ತಿಂಡಿ ನಿರ್ವಹಣಾ ಖರ್ಚು ವೆಚ್ಚಗಳು ಎಲ್ಲರಿಗೂ ಹಂಚಿ ಹೋಗುತ್ತದೆ.
ಸಮಾಧಾನ್ ಅನ್ನು ಜೂನ್ 9ರ ಶನಿವಾರದಂದು ಕೇಂದ್ರ ಸಚಿವ ಅನಂತ್ ಕುಮಾರ್ ಉದ್ಘಾಟಿಸುತ್ತಾರೆ. ಸದ್ಯಕ್ಕೆ 40 ಮಂದಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಸಮಾಧಾನಕ್ಕಿದೆ. ಸಂಪರ್ಕಿಸಲು ಇಚ್ಛಿಸುವವರು- ಮಾನಸ ನರ್ಸಿಂಗ್ ಹೋಂ, ಶಿವಮೊಗ್ಗ - ಫೋನ್ - 08182 - 73236 ವಿಳಾಸವನ್ನು ಸಂಪರ್ಕಿಸಬಹುದು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications