Get Updates
Get notified of breaking news, exclusive insights, and must-see stories!

ಜೂನ್‌ 10ರಂದು ರಾಜ್ಯಾದ್ಯಂತ ಪಿ.ಯು.ಸಿ. ಫಲಿತಾಂಶ

ಬೆಂಗಳೂರು : 2000-01ನೇ ಸಾಲಿನ ದ್ವಿತೀಯ ಪಿ.ಯು.ಸಿ ಫಲಿತಾಂಶ ಜೂನ್‌ 10ರಂದು ಭಾನುವಾರ ರಾಜ್ಯಾದ್ಯಂತ ಆಯಾ ಕಾಲೇಜುಗಳಲ್ಲಿ ಪ್ರಕಟವಾಗಲಿದೆ. ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಚ್‌. ವಿಶ್ವನಾಥ್‌ ಅವರು ಈ ವಿಷಯವನ್ನು ಪ್ರಕಟಿಸುವ ಮೂಲಕ ಇಷ್ಟು ದಿನ ಉಂಟಾಗಿದ್ದ ಗೊಂದಲಗಳಿಗೆ ಅಂತಿಮ ತೆರೆ ಎಳೆದಿದ್ದಾರೆ.

ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಹಾಗೂ ಗಣಕೀಕರಣ ಕಾರ್ಯ ಪೂರ್ಣಗೊಂಡಿದೆ. ಮಿಗಿಲಾಗಿ ಈಗಾಗಲೇ ರಾಜ್ಯದ ಕಾಲೇಜುಗಳಿಗೆ ಫಲಿತಾಂಶ ಪಟ್ಟಿ ಕಳುಹಿಸಿಕೊಡಲಾಗಿದೆ. ಹೀಗಾಗಿ ಜೂನ್‌ 10ರಂದು ಫಲಿತಾಂಶವನ್ನು ಖಂಡಿತಾ ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದರು.

ಎಸ್‌.ಎಸ್‌.ಎಲ್‌.ಸಿ. ಫಲಿತಾಂಶ ಪ್ರಕಟಣೆಯಲ್ಲಿ ಈ ವರ್ಷ ಉಂಟಾದ ಗೊಂದಲಗಳು ಪುನರಾವರ್ತನೆ ಆಗಬಾರದು ಎಂದು ಎಚ್ಚರಿಕೆ ವಹಿಸಿದ್ದರಿಂದ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾಯಿತು ಎಂದು ಅವರು ಸಮಜಾಯಿಷಿಯನ್ನೂ ನೀಡಿದರು. ಯಾವ ವೆಬ್‌ಸೈಟ್‌ನಲ್ಲಿ ಪಿಯು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂಬ ವಿವರಗಳನ್ನು ಮಾತ್ರ ಸಚಿವರು ನೀಡಲಿಲ್ಲ.

ಕಳೆದ ಏಪ್ರಿಲ್‌ ತಿಂಗಳಿನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಗಳ ಫಲಿತಾಂಶಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಬಹುತೇಕ ಒಂದು ವಾರದಿಂದಲೂ ಕಾಯುತ್ತಲೇ ಕುಳಿತಿದ್ದಾರೆ. ಈ ಸಂಬಂಧ ಪಿ.ಯು. ಮಂಡಳಿಯನ್ನು ವಿಚಾರಿಸಿದರೆ, ಉನ್ನತ ಅಧಿಕಾರಿಗಳೆನಿಸಿಕೊಂಡವರು ತಮಗೆ ತೋಚಿದ ದಿನವನ್ನು ಹೇಳುವ ಮೂಲಕ ಮತ್ತಷ್ಟು ಗೊಂದಲ ಹುಟ್ಟು ಹಾಕಿದ್ದರು.

ಸಿ.ಇ.ಟಿ. ಘಟಕದ ಮೇಲುಸ್ತುವಾರಿ ಹೊತ್ತಿರುವ ಹಾಗೂ ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕರಾದ ರಾಮಪ್ರಸಾದ್‌ ಅವರಂತೂ ಈ ಬಗ್ಗೆ ಅಧಿಕೃತವಾಗಿ ಯಾವುದೇ ಪ್ರಕಟಣೆಯನ್ನು ಹೊರಡಿಸಿಯೇ ಇರಲಿಲ್ಲ.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+