‘ವಿದ್ಯಾರ್ಥಿಗಳ ಇಂಟರ್ನೆಟ್ ಜಗತ್ತು’-2001 ಐಟಿ ಮೇಳದ ಆಕರ್ಷಣೆ
ಬೆಂಗಳೂರು : ನಾಲ್ಕನೇ ಬೆಂಗಳೂರು ಐಟಿ ಡಾಟ್ ಕಾಂ ಮೇಳಕ್ಕೆ ಸಿದ್ಧತೆಗಳು ನಡೆದಿವೆ. ಗುರುವಾರ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮೇಳದ ಸಿದ್ಧತೆಗಳಿಗೆ ಚಾಲನೆ ನೀಡಿ, ಮಾಹಿತಿ ತಂತ್ರಜ್ಞಾನವನ್ನು ಬೆಂಗಳೂರು ನಗರಕ್ಕೆ ಮಾತ್ರ ಮೀಸಲಾಗಿಡದೆ ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಇಂಗಿತವನ್ನು ಪುನರುಚ್ಚರಿಸಿದರು.
ಮೈಸೂರು ಹಾಗೂ ಮಂಗಳೂರಿನಲ್ಲಿ ಇನ್ಫೋಸಿಸ್ ಸಂಸ್ಥೆ ಇತ್ತೀಚೆಗೆ ತನ್ನ ಕೇಂದ್ರಗಳನ್ನು ತೆರೆದಿದೆ. ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಸಾಫ್ಟ್‌ವೇರ್ ಪಾರ್ಕ್‌ಗಳು ತಲೆಯೆತ್ತಲಿವೆ. ಗುಲ್ಬರ್ಗಾ ಹಾಗೂ ಹಾಸನ ನಗರಗಳನ್ನೂ ರಾಜ್ಯ ಸರ್ಕಾರ ಐಟಿ ವಿಷಯದಲ್ಲಿ ಕಡೆಗಣಿಸಿಲ್ಲ . ಇನ್ನು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಒದಗಿಸುವ ಯೋಜನೆ ಜಾರಿಗೆ ಬಂದಿದೆ. ಮೊದಲು 1000 ಶಾಲೆಗಳಿಗೆ ಈ ಪ್ರಯೋಜನ ದಕ್ಕಲಿದೆ. ಭೂಮಿ ಕಾರ್ಯಕ್ರಮದಡಿ ಆದಾಯ ಇಲಾಖೆ ಭೂ ದಾಖಲಾ ಪ್ರಮಾಣ ಪತ್ರಗಳನ್ನು ಸುಲಭವಾಗಿ ವಿತರಿಸುತ್ತಿದೆ. ಈ ಸವಲತ್ತನ್ನು 175 ತಾಲ್ಲೂಕುಗಳಿಗೂ ವಿಸ್ತರಿಸಲಾಗುವುದು ಎಂದು ಕೃಷ್ಣ ಹೇಳಿದರು.
ಕಳೆದ ಬಾರಿಯ ಬೆಂಗಳೂರು ಐಟಿ ಡಾಟ್ ಕಾಂ ಮೇಳದಲ್ಲಿ 376 ಕಂಪನಿಗಳ 60 ಸಾವಿರ ಉದ್ಯಮಶೀಲರು ಭಾಗವಹಿಸಿದ್ದರು. ಈ ಪೈಕಿ ಜಪಾನ್, ಇಂಗ್ಲೆಂಡ್, ಸಿಂಗಪೂರ್ ಮತ್ತು ಅಮೆರಿಕದಿಂದಲೂ ಹೆಚ್ಚು ಸಂಖ್ಯೆಯ ಪ್ರತಿನಿಧಿಗಳು ಮೇಳಕ್ಕೆ ಭೇಟಿ ಕೊಟ್ಟಿದ್ದರು. ಈ ವರ್ಷದ ಮೇಳದಲ್ಲಿ ವಿದ್ಯಾರ್ಥಿಗಳ ಇಂಟರ್ನೆಟ್ ಪ್ರಪಂಚವನ್ನು ಪ್ರದರ್ಶಿಸಲಾಗುವುದು. ಕಂಠೀರವ ಕ್ರೀಡಾಂಗಣದಲ್ಲಿ ಈ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಇದು ಮೇಳದ ಪ್ರಮುಖ ಆಕರ್ಷಣೆ. ಕಳೆದ ಬಾರಿ ಇಂಥಾ ಪ್ರದರ್ಶನಕ್ಕೆ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭೇಟಿ ಕೊಟ್ಟಿದ್ದರು. ಈ ಪೈಕಿ 70 ಪ್ರತಿಶತ ಮಕ್ಕಳು ಸರ್ಕಾರಿ ಶಾಲೆಗಳವರು ಎಂಬುದು ಗಮನಾರ್ಹ ಎಂದು ವಿವರಿಸಿದರು.
ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ವಿನಯ್ ಕೊಹ್ಲಿ, ಕಳೆದ ವರ್ಷ ಬೆಂಗಳೂರು ಎಸ್‌ಟಿಪಿಐ ಮುಖಾಂತರ 7800 ಕೋಟಿ ರುಪಾಯಿ ಮೌಲ್ಯದ ಸಾಫ್ಟ್‌ವೇರ್ ರಫ್ತು ಮಾಡಿತ್ತು . ಈ ವರ್ಷ 11 ಸಾವಿರ ಕೋಟಿ ರುಪಾಯಿ ಮೌಲ್ಯದ ಸಾಫ್ಟ್‌ವೇರ್ ರಫ್ತು ಮಾಡುವ ನಿರೀಕ್ಷೆಯಿದೆ ಎಂದರು.
ಕಾಲ್‌ಸೆಂಟರ್‌ಗಳು ಹೆಚ್ಚು ಉದ್ಯೋಗಾವಕಾಶವನ್ನು ಹೆಚ್ಚಿಸಲಿವೆ. 24/7, ಐಸೆವಾ ಮತ್ತು ಕಸ್ಟಮರ್‌ಅಸೆಟ್ಸ್ ಡಾಟ್ ಕಾಂನಂಥ ಮೈಕ್ರೋಸಾಫ್ಟ್, ಡೆಲ್, ಎಟಿ ಅಂಡ್ ಟಿ ಹಾಗೂ ಅಮೆರಿಕನ್ ಎಕ್ಸ್‌ಪ್ರೆಸ್‌ನಿಂದ ಪ್ರಮಾಣಿತ ಕಾಲ್‌ಸೆಂಟರ್‌ಗಳು ಕರ್ನಾಟಕದಲ್ಲಿವೆ ಎಂದು ರಾಜ್ಯ ಐಟಿ ಕಾರ್ಯದರ್ಶಿ ವಿವೇಕ್ ಕುಲಕರ್ಣಿ ತಿಳಿಸಿದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications