Get Updates
Get notified of breaking news, exclusive insights, and must-see stories!

ಮೀನಿನ ಔಷಧಿಗಾಗಿ ಸೈಬ್ರಾಬಾದಿಗೆ ಬಂದ ಲಕ್ಷಾಂತರ ರೋಗಿಗಳು

ಹೈದರಾಬಾದ್‌ : ಇಂದು ಮುಂಗಾರಿನ ಆರಂಭದ ಮೃಗಶಿರ ಕಾರ್ತೆ. ಹೈದರಾಬಾದ್‌ನ ವಸ್ತು ಪ್ರದರ್ಶನ ಮೈದಾನದಲ್ಲಿ ಜನಜಾತ್ರೆ. ದೇಶ - ವಿದೇಶಗಳಿಂದ ಬಂದ ಲಕ್ಷಾಂತರ ಆಸ್ತಮಾ ರೋಗಿಗಳು ಸಾವಿರಾರು ಜನರಿದ್ದ ಸರತಿಯ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಹೈದರಾಬಾದ್‌ ಮೀನಿನ ಔಷಧಿ ಪಡೆದರು.

ತಲಾತಲಾಂತರದಿಂದ ಆಸ್ತಮಾಕ್ಕೆ ಮೀನಿನ ಔಷಧಿ ನೀಡುತ್ತಿರುವ ಬತ್ತಿನಿ ಸಹೋದರರು (ಗೌಡ ಕುಟುಂಬ) ಔಷಧಿ ನೀಡಲು ಆರಂಭಿಸಿದ ಕೇವಲ ಮೂರು ಗಂಟೆಗಳ ಅವಧಿಯಲ್ಲೇ ಸುಮಾರು 10 ಸಾವಿರ ರೋಗಿಗಳಿಗೆ ಮೀನಿನ ಔಷಧಿ ನೀಡಲಾಯಿತು.

ಮೂವತ್ತಕ್ಕೂ ಹೆಚ್ಚು ಕೌಂಟರ್‌ಗಳಲ್ಲಿ ಬತ್ತಿನಿ ಸಹೋದರರ ಕುಟುಂಬಕ್ಕೆ ಸೇರಿದ ಹರಿನಾಥ್‌ ಗೌಡ, ವಿಶ್ವನಾಥ ಗೌಡ ಮತ್ತು ಉಮಾ ಮಹೇಶ್ವರ ಗೌಡ ಎಂಬ ಮೂವರು ಸಹೋದರರು ಹಾಗೂ ಅವರ ಪತ್ನಿ, ಪುತ್ರರು ಹಾಗೂ ಕುಂಟುಂಬ ವರ್ಗದವರೆಲ್ಲರೂ ಉಚಿತವಾಗಿ ನೀಡಲಾಗುವ ಔಷಧಿ ನೀಡುವ ಕಾಯಕದಲ್ಲಿ ನಿರತರಾಗಿದ್ದರು. ಯಾವುದೇ ನೂಕು ನುಗ್ಗಲು, ಗೊಂದಲ ಉಂಟಾಗದಂತೆ ಹೈದರಾಬಾದ್‌ ಜಿಲ್ಲಾಡಳಿತ ಹಾಗೂ ಪೊಲೀಸರು ವಿಶೇಷ ಕ್ರಮಗಳನ್ನು ಕೈಗೊಂಡಿದ್ದರು.

ವಿಐಪಿಗಳಿಗಾಗಿಯೇ ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು. ಮೊದಲೇ ನೀಡಲಾಗಿದ್ದ ವಿವಿಐಪಿ ಪಾಸ್‌ ಹಿಡಿದು ಬಂದ ಗಣ್ಯರು ಕ್ಯೂ ಇಲ್ಲದ ವಿಶೇಷ ಭದ್ರತೆಯ ಕೌಂಟರ್‌ಗಳಲ್ಲಿ ಔಷಧಿ ನುಂಗಿಸಿದ ಮೀನನ್ನು ನುಂಗಿದರೆ, ನೀರುಳ್ಳ ಪ್ಲಾಸ್ಟಿಕ್‌ ಚೀಲದಲ್ಲಿ ಹಿಡಿದ ಮೀನಿನ ಸಂಗಡ ತಮ್ಮ ಸರದಿಗಾಗಿ ಲಕ್ಷಾಂತರ ಜನರು ಕ್ಯೂನಲ್ಲಿ ನಿಂತಿದ್ದರು. ಮಹಿಳೆಯರಿಗಾಗಿಯೇ ವಿಶೇಷ ಕೌಂಟರ್‌ಗಳನ್ನು ಮಾಡಲಾಗಿತ್ತು. ಕೆಲವು ಸ್ವಯಂ ಸೇವಾ ಸಂಸ್ಥೆಗಳು ಬಿಸಿಲಲ್ಲಿ ನಿಂತ ರೋಗಿಗಳಿಗೆ ನೀರು ಹಾಗೂ ಉಚಿತ ಆಹಾರದ ಪೊಟ್ಟಣಗಳನ್ನೂ ವಿತರಿಸಿದರು.

ಹಳದಿ ಔಷಧಿ : ಕಳೆದ 156 ವರ್ಷಗಳಿಂದ ಉಚಿತವಾಗಿಯೇ ಔಷಧಿ ನೀಡುತ್ತಿರುವ ಬತ್ತಿನಿ ಸೋದರರ ಖ್ಯಾತಿ ರಾಷ್ಟ್ರಾದ್ಯಂತ ಹಬ್ಬಿರುವ ಹಿನ್ನೆಲೆಯಲ್ಲಿ ಜೂನ್‌ 8ರಂದು ಇಲ್ಲಿಗೆ ಬರುವ ರೋಗಿಗಳ ಸಂಖ್ಯೆಯೂ ವರ್ಷೇವರ್ಷೇ ಏರುತ್ತಲೇ ಇದೆ. ಸುಮಾರು 2ರಿಂದ ಎರಡೂವರೆ ಸೆಂಟಿ ಮೀಟರ್‌ ಉದ್ದದ ಜೀವಂತ ಮೀನಿಗೆ, ಈ ಕುಟುಂಬದವರು ಮೊದಲೇ ತಯಾರಿಸಿದ ಹಳದಿ ಬಣ್ಣದ ಔಷಧಿಯನ್ನು ನುಂಗಿಸಿ, ನಂತರ, ರೋಗಿಯ ಬಾಯಿ ತೆರೆಸಿ ಹಾಕುತ್ತಾರೆ.

ಜೀವಸಹೀತ ಇರುವ ಮೀನು ರೋಗಿಯ ಗಂಟಲಲ್ಲಿ ಇಳಿದು ಕಫತೆಗೆಯುವ ಮೂಲಕ ರೋಗಿ ಪೂರ್ಣ ಗುಣಮುಖವಾಗುವಂತೆ ಮಾಡುತ್ತದೆ ಎಂಬುದು ನಂಬಿಕೆ. ಈ ಔಷಧಿಯನ್ನು ಸತತ ಮೂರು ವರ್ಷಗಳ ಕಾಲ ತೆಗೆದುಕೊಂಡರೆ, ಆಸ್ತಮಾ ನಿಶ್ಶೇಷವಾಗಿ ಹೋಗುತ್ತದೆ ಎಂಬುದು ಹಲವರ ಅನುಭವದ ನುಡಿ.

ನನಗೆ 20 ವರ್ಷದಿಂದಲೂ ಆಸ್ತಮಾ ಇದೆ. ಕಳೆದ ವರ್ಷ ಮೀನಿನ ಔಷಧಿ ನುಂಗಿದ ನಂತರ ಚಳಿಗಾಲದಲ್ಲಿ ಕೂಡ ನನಗೆ ತೀವ್ರ ತೊಂದರೆ ಆಗಲಿಲ್ಲ. ಒಂದೆರಡು ಬಾರಿ ಮಾತ್ರ ತೊಂದರೆ ಆಯಿತು. ಅದಕ್ಕಾಗಿ ಈ ವರ್ಷವೂ ಬಂದೆ ಎಂಬುದು ಪಾಟ್ನಾದಲ್ಲಿ ಎಂಜಿನಿಯರ್‌ ಆಗಿರುವ ಕುಮಾರ್‌ ಹೇಳಿಕೆ.

ನಾನು ಕಳೆದ ವರ್ಷ ಮೀನು ನುಂಗಿದೆ. ಆ ದಿನದಿಂದ ಈ ವರೆಗೆ ಒಂದು ದಿನವೂ ನಾನು ರೋಗದಿಂದ ನರಳಲಿಲ್ಲ. ಹೀಗಾಗೇ ಈ ವರ್ಷವೂ ಬಂದೆ ಎಂದು ಹೇಳುವವರ ಸಂಖ್ಯೆ ಸಾವಿರಾರು. ಹರಿನಾಥ ಗೌಡ್‌ ಅವರ ಪ್ರಕಾರ ಈಗಾಗಲೇ ಔಷಧಿ ಪಡೆಯಲು ಉತ್ತರ ಭಾರತ, ದಕ್ಷಿಣ ಭಾರತವೇ ಅಲ್ಲದೆ ನೆರೆಯ ರಾಷ್ಟ್ರಗಳಿಂದ ಒಟ್ಟು ಮೂರು ಲಕ್ಷದಷ್ಟು ಜನರು ಹೈದರಾಬಾದಿಗೆ ಬಂದಿದ್ದಾರೆ. ಈ ಔಷಧಿ ಪಡೆದ ಬಳಿಕ ಮೂರು ನಿರ್ದಿಷ್ಠ ದಿನಗಳಲ್ಲಿ (ಕಾರ್ತಿ ದಿನ) ಪಡೆಯಲು ಹಳದಿ ಔಷಧವನ್ನೂ ರೋಗಿಗಳಗೆ ನೀಡಲಾಯಿತು.

1000 ಪೊಲೀಸರು : ಈ ಕಾರ್ಯ ಸುಗಮವಾಗಿ ಸಾಗಲೆಂದು ಸುಮಾರು 1000 ಪೊಲೀಸರನ್ನು ನಿಯೋಜಿಸಲಾಗಿತ್ತು. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಅವರ ಸಚಿವ ಸಂಪುಟದ ಹಲವು ಸಚಿವರು ಔಷಧಿ ನೀಡುವ ಸ್ಥಳಕ್ಕೆ ಆಗಮಿಸಿ, ಖುದ್ದು ಪರಿಶೀಲನೆ ನಡೆಸಿದರು.

(ಐಎಎನ್‌ಎಸ್‌/ಇಂಡಿಯಾ ಇನ್‌ಫೋ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+