ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ- ಜಿಂಬಾಬ್ವೆ ಸೆಣಸಿನಲ್ಲಿಫ್ಲವರ್‌- ಹರ್ಭಜನ್‌ ಕೇಂದ್ರಬಿಂದು

By Staff
|
Google Oneindia Kannada News

ಬುಲಾವಾಯಾ : ಗೆಲ್ಲಲು ಛಲ ತಳೆದು ಮೈದಾನಕ್ಕಿಳಿಯಲಿರುವ ಭಾರತ ಹಾಗೂ ಜಿಂಬಾಬ್ವೆ ನಡುವಣ ಕ್ರಿಕೆಟ್‌ ಟೆಸ್ಟ್‌ ಗುರುವಾರದಿಂದ ಆರಂಭವಾಗುತ್ತಿದ್ದು , ಉಭಯ ತಂಡಗಳೂ ಗೆಲುವಿನ ವಿಶ್ವಾಸದಲ್ಲಿವೆ.

1986 ರ ನಂತರ ವಿದೇಶಗಳಲ್ಲಿ ಟೆಸ್ಟ್‌ ಸರಣಿ ಗೆಲ್ಲದಿರುವ ಕಳಂಕವನ್ನು ತೊಳೆದುಕೊಳ್ಳಲು ಜಾನ್‌ರೈಟ್‌ ಗಾರುಡಿಯಲ್ಲಿ ಹೊಸ ಹೊಳಪು ಪಡೆದಿರುವ ಭಾರತ ತಂಡ ಸಿದ್ಧವಾಗಿದ್ದರೆ, ಕಳೆದ ವರ್ಷ ಭಾರತದಲ್ಲಿ ನಡೆದ ಏಕೈಕ ಟೆಸ್ಟ್‌ನಲ್ಲುಂಡ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಉಮೇದಿನಲ್ಲಿ ಜಿಂಬಾಬ್ವೆ ತಂಡವಿದೆ.

ಬೆರಳು ಗಾಯದಿಂದ ನರಳುತ್ತಿದ್ದ ಭಾರತ ತಂಡದ ಉಪನಾಯಕ ರಾಹುಲ್‌ ದ್ರಾವಿಡ್‌ ಮೊದಲ ಟೆಸ್ಟ್‌ನಲ್ಲಿ ಆಡಲು ಸಜ್ಜಾಗಿರುವುದು ಹಾಗೂ ಎರಡು ಅಭ್ಯಾಸ ಪಂದ್ಯಗಳಲ್ಲಿ ನ ಉತ್ತಮ ಸಾಧನೆಯಿಂದಾಗಿ ತಂಡದ ನೈತಿಕ ಸ್ಥೆರ್ಯ ಇಮ್ಮಡಿಸಿದೆ. ಅಂದಹಾಗೆ, ಈ ಟೆಸ್ಟ್‌ನಲ್ಲಿ ಆಕರ್ಷಣೆ ಯಾರು ? ತೆಂಡೂಲ್ಕರ್‌, ದ್ರಾವಿಡ್‌, ಲಕ್ಷಣ್‌..

ಆ್ಯಂಡಿ ಫ್ಲವರ್‌- ಹರ್ಭಜನ್‌ ಉತ್ತಮ ಸಾಧನೆ ಮುಂದುವರಿಸಿಯಾರೆ ?
ಭಾರತದ ವಿರುದ್ಧ 5 ಟೆಸ್ಟ್‌ ಪಂದ್ಯಗಳನ್ನಾಡಿ 169.60 ಸರಾಸರಿಯಲ್ಲಿ 848 ರನ್‌ ಗಳಿಸಿರುವ ಆ್ಯಂಡಿ ಫ್ಲವರ್‌ ಪ್ರಸ್ತುತದ ಸರಣಿಯಲ್ಲೂ ಉತ್ತಮ ಸಾಧನೆ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಅವರ ಅತ್ಯಧಿಕ ಟೆಸ್ಟ್‌ ಸ್ಕೋರ್‌ 232 ರನ್‌ ಬಂದಿರುವುದು ಕೂಡ ಭಾರತದ ವಿರುದ್ಧವೇ. ಈ ನಿಟ್ಟಿನಲ್ಲಿ ಫ್ಲವರ್‌ ಮತ್ತೊಮ್ಮೆ ಭಾರತದ ವಿರುದ್ಧ ಅರಳಿದರೆ ಭಾರತ ಪ್ರಯಾಸಪಡಬೇಕಾಗುವುದರಲ್ಲಿ ಅನುಮಾನವಿಲ್ಲ .

ಭಾರತದ ಭರವಸೆಯ ಸ್ಪಿನ್ನರ್‌ ಹರ್ಭಜನ್‌ ಹಾಗೂ ಫ್ಲವರ್‌ ವಿರುದ್ಧದ ಸೆಣಸು ಕುತೂಹಲ ಕೆರಳಿಸಿದೆ. ಸ್ಪಿನ್ನರ್‌ಗಳ ವಿರುದ್ಧ ಅದರಲ್ಲೂ ಭಾರತದ ಸ್ಪಿನ್ನಿಗರ ವಿರುದ್ಧ ಫ್ಲವರ್‌ ದಾಖಲೆ ಉತ್ತಮವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯಗಳಲ್ಲಿ ಶ್ರೇಷ್ಠ ಸಾಧನೆ ಮೆರೆದಿರುವ ಹರ್ಭಜನ್‌ ಜಿಂಬಾಬ್ವೆ ವಿರುದ್ಧವೂ ಯಶಸ್ಸು ಗಳಿಸುವ ವಿಶ್ವಾಸದಲ್ಲಿದ್ದಾರೆ. 3 ಟೆಸ್ಟ್‌ಗಳಿಂದ 32 ವಿಕೆಟ್‌ ಕಬಳಿಸಿರುವ ಅವರು ಈ ಸರಣಿಯಲ್ಲಿ ತಮ್ಮ 50 ನೇ ವಿಕೆಟ್ಟನ್ನು ಕಾಣುವ ಆತುರದಲ್ಲಿದ್ದಾರೆ. ಸಿಎಫ್‌ಎಕ್ಸ್‌ ಅಕಾಡೆಮಿ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್‌ ಪಡೆದಿರುವ ಆತ್ಮ ವಿಶ್ವಾಸವೂ ಅವರ ಬೆನ್ನಿಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X