ಅಮೆರಿಕಾ ವೀಸಾ ಪ್ರಕ್ರಿಯೆ ಈಗ ಮತ್ತಷ್ಟು ಸರಳ
ನವದೆಹಲಿ : ಅಮೆರಿಕ ರಾಯಭಾರ ಕಚೇರಿ ವೀಸಾ ನೀಡುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಣಗೊಳಿಸಿದೆ. ಬುಧವಾರದಿಂದಲೇ ಇದು ಜಾರಿಗೂ ಬಂದಿದೆ. ಹೀಗಾಗಿ ವೀಸಾ ಅಂಗೀಕಾರವಾಗಬೇಕಾಗಿರುವ ಅರ್ಜಿದಾರರು ತಮ್ಮ ಪಾಸ್ಪೋರ್ಟ್ ಪಡೆಯಲು ದೂತಾವಾಸಕ್ಕೆ ಅಲೆಯುವ ಅಗತ್ಯ ಇಲ್ಲ.
ಈಗ ಕಚೇರಿಯಿಂದಲೇ ಕೊರಿಯರ್ ಮೂಲಕ ಅರ್ಜಿದಾರರ ವಿಳಾಸಕ್ಕೆ ಪಾಸ್ಪೋರ್ಟ್ ಕಳುಹಿಸಿಕೊಡಲಾಗುವುದು. ಆದರೆ, ಇದಕ್ಕೆ 300 ರುಪಾಯಿಗಳ ಹೆಚ್ಚುವರಿ ಶುಲ್ಕವನ್ನು ಮಾತ್ರ ತೆರಬೇಕು ಎಂದು ರಾಯಭಾರ ಕಚೇರಿಯ ವಕ್ತಾರರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ತಮ್ಮ ಪಾಸ್ಪೋರ್ಟ್ಗಳನ್ನು ಹಿಂದಕ್ಕೆ ಪಡೆಯಲು ವೀಸಾಕ್ಕೆ ಅರ್ಜಿಸಲ್ಲಿಸಿದವರು ಪದೇಪದೇ ಕಚೇರಿಯ ಬಾಗಿಲಿಗೆ ಅಲೆಯುವುದನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಉತ್ತರ ಭಾರತದ ವಿಳಾಸ ಹೊಂದಿರುವ ಯಾವುದೇ ಅರ್ಜಿದಾರರು ಬಯಸಿದಲ್ಲಿ , ಅವರು ಸೂಚಿಸಿದ ವಿಳಾಸಕ್ಕೆ ವೀಸಾ ಜತೆಯಲ್ಲಿ ಪಾಸ್ಪೋರ್ಟ್ ತಲುಪಿಸಲಾಗುವುದು. ಈ ನೂತನ ಪದ್ಧತಿಯಿಂದ ಅರ್ಜಿದಾರರಿಗೆ ಸಾಕಷ್ಟು ಸಮಯ ಉಳಿಯಲಿದೆ ಎಂದು ವಕ್ತಾರರು ಹೇಳಿದ್ದಾರೆ.
ಡ್ರಾಪ್ಬಾಕ್ಸ್ ಸೌಲಭ್ಯದ ಪಾಸ್ಪೋರ್ಟ್ಗಳನ್ನೂ ಜೂನ್ 14ರಿಂದ ಕೊರಿಯರ್ ಮೂಲಕ ಕಳುಹಿಸಿಕೊಡಲಾಗುವುದು. ಡ್ರಾಪ್ ಬಾಕ್ಸ್ ಸೌಲಭ್ಯ ಬಯಸಿದ ಅರ್ಜಿದಾರರು ಬೆಳಗ್ಗೆ 7-30ರಿಂದ ಮಧ್ಯಾಹ್ನ 3 ಗಂಟೆಯಾಳಗೆ ಜಾಂದೇವಾಲನ್ ಎಕ್ಸ್ಟೆನ್ಷನ್ನಲ್ಲಿರುವ ಟಿ.ಟಿ. ಸರ್ವೀಸ್ನ ಕಚೇರಿಗೆ ಹೋಗಬೇಕಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಡ್ರಾಪ್ ಬಾಕ್ಸ್ ಸೌಲಭ್ಯದಡಿ ಬಾರದ ಅರ್ಜಿದಾರರು ವೈಯಕ್ತಿಕವಾಗಿ ರಾಯಭಾರ ಕಚೇರಿಗೆ ಮುಂಜಾನೆ 8.30ರಿಂದ 10 ಗಂಟೆಯಾಳಗೆ ಅರ್ಜಿ ಸಲ್ಲಿಸಬಹುದು ಎಂದೂ ಅವರು ಹೇಳಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications