ಪ್ರಜಾಪ್ರಭುತ್ವವನ್ನು ಅಗ್ನಿ ಪರೀಕ್ಷೆಗೊಡ್ಡಿರುವ ದೊರೆ ಜ್ಞಾನೇಂದ್ರ
ಕಠ್ಮಂಡು : ದಿನದಿನಕ್ಕೂ ಬಣ್ಣ ಬದಲಿಸಿಕೊಳ್ಳುತ್ತಿರುವ ನೇಪಾಳದಲ್ಲಿನ ರಾಜಕೀಯ ಬಿಕ್ಕಟ್ಟು ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಯ ಬುಡಕ್ಕೆ ಬಂದು ನಿಂತಿದೆ. ದೇಶದ ಹೆಚ್ಚು ಪ್ರಸಾರದ ದೈನಿಕ ಕಾಂತಿಪುರ್‌ನ ಸಂಪಾದಕ ಯುವರಾಜ್ ಘಿಮಿರೆ ಅವರ ಬಂಧನದೊಂದಿಗೆ ಮಾಧ್ಯಮ ಪ್ರತಿನಿಧಿಗಳು ನೂತನ ದೊರೆಯ ಬಗ್ಗೆ ಭೀತರಾಗಿದ್ದಾರೆ. ಎಡಪಂಥೀಯ ನಾಯಕರೊಬ್ಬರ ಲೇಖನವನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಘಿಮಿರೆ ಅವರನ್ನು ಬುಧವಾರ ಬಂಧಿಸಲಾಗಿದೆ.
ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಜ್ಞಾನೇಂದ್ರ ಹೊಂದಿರುವ ಅವಿಶ್ವಾಸದಿಂದ ನೂತನ ದೊರೆಯ ಬಗ್ಗೆ ನೇಪಾಳಿ ಜನತೆ ವ್ಯಕ್ತಪಡಿಸುತ್ತಿರುವ ಪ್ರತಿಭಟನೆ ಇನ್ನೂ ತಣ್ಣಗಾಗಿಲ್ಲ . ರಾಜಧಾನಿ ಈಗಾಗಲೇ ಮೂರು ಬಾರಿ ಕರ್ಫ್ಯೂ ಹೇರಿಸಿಕೊಂಡಿದ್ದು , ಜನತೆ ಆತಂಕದಿಂದಲೇ ದಿನಗಳ ದೂಡುತ್ತಿದ್ದಾರೆ. 1990 ರ ಸಂಸದೀಯ ಪ್ರಜಾಪ್ರಭುತ್ವದ ಪ್ರಬಲ ವಿರೋಧಿಗಳಲ್ಲಿ ಜ್ಞಾನೇಂದ್ರ ಕೂಡ ಒಬ್ಬರೆನ್ನುವುದು ಗಮನಾರ್ಹ.
ಈಗ ನೇಪಾಳ ಜನತೆಯ ಕಣ್ಣೆಲ್ಲ ಶುಕ್ರವಾರ (ಜೂನ್ 1) ರಾತ್ರಿ ಜರುಗಿದ ರಾಜ ಕುಟುಂಬದ ಬರ್ಬರ ಹತ್ಯೆಯ ತನಿಖೆ ನಡೆಸುತ್ತಿರುವ ನ್ಯಾಯಾಂಗ ಸಮಿತಿ ನೀಡುವ ವರದಿಯ ಮೇಲಿದೆ. ‘ಅದೊಂದು ಅನಿರೀಕ್ಷಿತ ಅಸ್ವಾಭಾವಿಕ ಘಟನೆ. ನಾವು ವರದಿ ತೋರಿಸಬಹುದಾದ ಸತ್ಯಾಂಶಗಳ ಬಗ್ಗೆ ಕಾತರರಾಗಿದ್ದೇವೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಪಿ.ಎಲ್. ಸಿಂಗ್. ನೇಪಾಳದ ಬಹುತೇಕ ಮಂದಿ ಹೇಳುವಂತೆ ‘ಹತ್ಯೆಗೊಳಗಾದ ದೊರೆ ಬೀರೇಂದ್ರ ದೇವರು. ಆದರೆ, ನೂತನ ದೊರೆ ಜ್ಞಾನೇಂದ್ರ ಅವರಿಗೆ ದೇಶವನ್ನು ಮುನ್ನಡೆಸುವ ಶಕ್ತಿಯಿಲ್ಲ .’
ವಾಣಿಜ್ಯ ವ್ಯವಹಾರಗಳೆಂದರೆ ಜ್ಞಾನೇಂದ್ರ ಅವರಿಗೆ ತುಂಬಾ ಆಸಕ್ತಿ
ರಾಜ ಪರಿಷತ್‌ನ ಬಹುತೇಕ ಸದಸ್ಯರು ಅಭಿಪ್ರಾಯಪಡುವಂತೆ ಜ್ಞಾನೇಂದ್ರ ಅವರ ವಾಣಿಜ್ಯ ಜ್ಞಾನ ಉತ್ತಮವಾಗಿದೆ. ಜ್ಞಾನೇಂದ್ರ ಅವರು ಹೊಂದಿರುವ ವಹಿವಾಟುಗಳು ಕೂಡ ಈ ಮಾತನ್ನು ಸಮರ್ಥಿಸುತ್ತವೆ. ಪೂರ್ವ ನೇಪಾಳದಲ್ಲಿ ಟೀ ತೋಟವೊಂದನ್ನು ಹೊಂದಿರುವ ಅವರು, ದೇಶದ ಯಶಸ್ವಿ ಸಿಗರೇಟ್ ಫ್ಯಾಕ್ಟರಿ ಹಾಗೂ ಪಂಚತಾರಾ ಹೊಟೇಲೊಂದರ ಪಾಲುದಾರರೂ ಹೌದು. ಯಶಸ್ವಿ ರಫ್ತು ಕಂಪನಿಯಾಂದರಲ್ಲೂ ಜ್ಞಾನೇಂದ್ರ ಪಾಲನ್ನು ಹೊಂದಿದ್ದಾರೆ. ಇಷ್ಟೆಲ್ಲಾ ಆದಾಯ ಹೊಂದಿದ್ದರೂ, ಜ್ಞಾನೇಂದ್ರ ತೆರಿಗೆ ವಿನಾಯಿತಿ ಹೊಂದಿದ್ದಾರೆ. ಏಕೆಂದರೆ, ಅವರು ರಾಜಕುಟುಂಬಕ್ಕೆ ಸೇರಿದವರು!
ಇಷ್ಟೆಲ್ಲಾ ವಾಣಿಜ್ಯ ವ್ಯವಹಾರಗಳನ್ನು ಹೊಂದಿರುವ ದೊರೆ ಆಡಳಿತದ ಬಗ್ಗೆ ಗಮನ ಹರಿಸುವುದು ಹೇಗೆ? ಈ ಸೂಕ್ಷ್ಮ ಅವರಿಗೆ ಹೊಳೆದಿಲ್ಲದೆ ಏನು ಎನ್ನುತ್ತಾರೆ ಬಂಧನಕ್ಕೊಳಗಾಗಿರುವ ಪತ್ರಕರ್ತ ಘಿಮಿರೆ. ಆಡಳಿತಕ್ಕೆ ನ್ಯಾಯ ದೊರಕಿಸಿಕೊಡುವ ಬಗ್ಗೆ ದೊರೆ ಯೋಚಿಸಬೇಕು ಎನ್ನುತ್ತಾರವರು.
ಅರಮನೆಯ ಮೂಲಗಳ ಪ್ರಕಾರ- ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳುವವರೆಗೂ ಕುಟುಂಬದ ಸದಸ್ಯರಿಗೆ ತಮ್ಮೆಲ್ಲಾ ವ್ಯವಹಾರಗಳನ್ನು ಜ್ಞಾನೇಂದ್ರ ಸ್ವಲ್ಪ ಕಾಲದ ಮಟ್ಟಿಗಾದರೂ ವಹಿಸಿಕೊಡುವ ನಿರೀಕ್ಷೆಯಿದೆ.
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications