ಎರಡು ದಿನಗಳಿಂದ ಮಂಗಳೂರಿನಲ್ಲಿ ಮಳೆರಾಯನ ಝಾಂಡಾ
ಮಂಗಳೂರು : ಕರಾವಳಿಯಲ್ಲಿ ಮಳೆ ಧೋಗುಟ್ಟಲಾರಂಭಿಸಿ ಎರಡು ದಿನಗಳಾಯಿತು. ಇಲ್ಲಿನವರು ಬಿಸಿಲ ಕಿರಣ ಕಂಡಿಲ್ಲ. ಸಿಡಿಲು ಬಡಿದು ಕುಸಿದ ಮನೆ, ಭೂಕುಸಿತದಿಂದ ಮುಚ್ಚಿದ ದಾರಿ, ರಸ್ತೆ ಮೇಲೆ ತುಂಬಿ ಹರಿಯುತ್ತಿರುವ ನೀರಿನಿಂದ ಸಂಚಾರಕ್ಕೆ ತೊಂದರೆ .. ಹೀಗೆ ಸಾಲು ಸಂಕಷ್ಟಗಳು.
ಮಂಗಳೂರು ತಾಲ್ಲೂಕಿನ ಗಂಜಿ ಮಠದ ಬಳಿಯ ಮಳಲಿಯಲ್ಲಿ ರೆಚ್ಚೆಗಟ್ಟಿ ಸುರಿಯುತ್ತಿರುವ ಮಳೆಯ ನಡುವೆ ಹೂವಯ್ಯ ಮಡಿವಾಳ ಎಂಬುವರ ಮನೆ ಮೇಲೆ ಎರಗಿದ ಸಿಡಿಲಿಗೆ ಮನೆಯ ಗೋಡೆ ಕುಸಿದು ಬಿದ್ದಿದೆ. ಹಟ್ಟಿಯಲ್ಲಿದ್ದ ದನ ಅಸು ನೀಗಿದೆ. ನಷ್ಟದ ಅಂದಾಜು 25 ಸಾವಿರ ದಾಟಿದೆ.
ಮಂಗಳೂರು ನಗರದ ಕೋರ್ಟು ಗುಡ್ಡೆಯಲ್ಲಿ ಭೂಕುಸಿತ ಸಂಭವಿಸಿ ಜನರು ಕೋರ್ಟ್‌ಗೆ ಮತ್ತು ಅಲೋಷಿಯಸ್ ಕಾಲೇಜಿಗೆ ಹೋಗಲು ಬಳಸುತ್ತಿದ್ದ ಮಾರ್ಗದ ಮೇಲೆ ಮಣ್ಣು ರಾಶಿ ಬಿದ್ದಿದೆ. ಇಲ್ಲಿನ ಕೈಬರ್ ಪಾಸ್ ರಸ್ತೆಯಲ್ಲಿ ಕಳೆದ ವರ್ಷವೂ ಭೂಕುಸಿತದಿಂದಾಗಿ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಇಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಈಗ ಮತ್ತೊಮ್ಮೆ ಅಲ್ಲಿ ಅಪಾಯದ ಸೂಚನೆಯಾಗಿ ಮಣ್ಣು ಜರಿದು ಬಿದ್ದಿದೆ.
ಮಂಗಳವಾರ ಮತ್ತು ಬುಧವಾರ 31 ಡಿಗ್ರಿಯ ಆಸು ಪಾಸಿನಲ್ಲಿದ್ದ ಉಷ್ಣಾಂಶ ಗುರುವಾರದ ಬೆಳಗ್ಗಿನ ಹೊತ್ತಿಗೆ 26 ಡಿಗ್ರಿಗಿಳಿದಿದ್ದು ಕರಾವಳಿ ತಂಪಾಗಿದೆ. ಬುಧವಾರ ಮಂಗಳೂರಿನಲ್ಲಿ ಸುಮಾರು 11 ಸೆಂಟಿ ಮೀಟರಿಗೂ ಹೆಚ್ಚು ಮಳೆ ಬಿದ್ದಿದೆ. ಬಂಟ್ವಾಳದಲ್ಲಿ ಸರಾಸರಿ ಗರಿಷ್ಠ ಅಂದರೆ 151.4 ಮಿಮೀ ಮಳೆ ಬಂದಿದ್ದರೆ, ಬೆಳ್ತಂಗಡಿಯಲಿ ಕನಿಷ್ಠ 47.2 ಮಿಮೀ ಮಳೆಯಾಗಿರುವ ವರದಿಯಾಗಿದೆ.
(ಮಂಗಳೂರು ಪ್ರತಿನಿಧಿಯಿಂದ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications