ಇನ್‌ಫೋಸಿಸ್, ಅಮೆರಿಕನ್ ಎಕ್ಸ್‌ಪ್ರೆಸ್ ಸಹಭಾಗಿತ್ವದಲ್ಲಿ ಹೊಸ ಸಂಸ್ಥೆ
ಬೆಂಗಳೂರು : ಭಾರತದ ಪ್ರತಿಷ್ಠಿತ ಸಾಫ್ಟ್‌ವೇರ್ ಉದ್ದಿಮೆಗಳಲ್ಲಿ ಒಂದಾದ ಇನ್‌ಫೋಸಿಸ್ ಟೆಕ್ನಾಲಜೀಸ್, ಅಮೆರಿಕನ್ ಎಕ್ಸ್‌ಪ್ರೆಸ್ ಕಂಪನಿ, ಟಿಬ್ಕೋ ಸಾಫ್ಟ್‌ವೇರ್ ಐಎನ್‌ಸಿ ಮತ್ತು ವೆಸ್ಟ್ ಬ್ರಿಡ್ಜ್ ಕ್ಯಾಪಿಟಲ್ ಪಾಲುದಾರರ ಸಹಭಾಗಿತ್ವದಲ್ಲಿ ವರ್ಕಾಡಿಯಾ ಎಲ್‌ಎಲ್‌ಸಿ ಎಂಬ ಹೊಸ ಕಂಪನಿಯ ಸ್ಥಾಪಿಸುವುದಾಗಿ ಪ್ರಕಟಿಸಿವೆ.
ವರ್ಕಾಡಿಯಾದಲ್ಲಿ ಇನ್‌ಫೋಸಿಸ್ ಪ್ರತಿಶತ 13.2ರಷ್ಟು ಶೇರು ಹೊಂದಲಿದ್ದರೆ, ಅಮೆರಿಕನ್ ಎಕ್ಸ್‌ಪ್ರೆಸ್ ಶೇ. 38.9ರಷ್ಟು, ಕ್ಯಾಲಿಫೋರ್ನಿಯಾ ಮೂಲದ ಟಿಬ್ಕೋ ಸಾಫ್ಟ್‌ವೇರ್ ಪ್ರತಿಶತ 18ರಷ್ಟು ಮತ್ತು ವೆಸ್ಟ್ ಬ್ರಿಡ್ಜ್ ಕ್ಯಾಪಿಟಲ್ ಪ್ರತಿಶತ 29.9ರಷ್ಟು ಪಾಲುದಾರಿಕೆ ಪಡೆಯಲಿವೆ.
ಈ ವಿಷಯವನ್ನು ಇನ್‌ಫೋಸಿಸ್ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 17 ಮಿಲಿಯನ್ ಡಾಲರ್ ಆರಂಭಿಕ ಬಂಡವಾಳದಲ್ಲಿ ಪ್ರಾರಂಭವಾಗಲಿರುವ ಈ ಸಂಸ್ಥೆ, ಪೋರ್ಟಲ್‌ಗಳನ್ನು ತೆರೆಯುತ್ತಿದೆ. ಇದರ ಲಾಭವನ್ನು ಕಂಪನಿಗಳು ತಮ್ಮ ನೆಟ್‌ವರ್ಕ್ ಜಾಲಕ್ಕೆ ಬಳಸಿಕೊಳ್ಳಲು ನೆರವಾಗಲಿದೆ.
8ರಿಂದ 10 ಶತಕೋಟಿ ಡಾಲರ್‌ಗಳ ಮಧ್ಯಮ ಗಾತ್ರದ ಕಂಪನಿಗಳ ಆನ್‌ಲೈನ್ ಸಲ್ಯೂಷನ್ಸ್ ಮಾರುಕಟ್ಟೆಯಿಂದ ಲಾಭ ಮಾಡುವ ಉದ್ದೇಶದಿಂದ ಈ ಸಹಭಾಗಿತ್ವದ ಸಂಸ್ಥೆ ಹುಟ್ಟುಹಾಕಲಾಗಿದೆ. ಲೈಸ್ನಿಂಗ್ ಶುಲ್ಕ, ಕನ್‌ಸಲ್ಟಿಂಗ್ ಶುಲ್ಕ ಮತ್ತು ಮೂರನೇ ವ್ಯಕ್ತಿಯ ಉತ್ಪನ್ನ ಹಾಗೂ ಸೇವೆಯ ಮಾರಾಟದಿಂದ ಆದಾಯ ತೆಗೆಯಲು ನಿರ್ಧರಿಸಲಾಗಿದೆ.
ಅಮೆರಿಕೆಯಲ್ಲಿ ಈಗ ಉತ್ಪಾದಕ ವೆಚ್ಚದ ಕಡಿತ, ಸಿಬ್ಬಂದಿಯಿಂದ ಹೆಚ್ಚಿನ ಉತ್ಪಾದನೆ ಮತ್ತು ವೃತ್ತಿ ಕೌಶಲ್ಯ ವರ್ಧನೆಗೆ ಗಮನ ಹರಿಸಲಾಗುತ್ತಿದೆ. ಹೀಗಾಗಿ ಅವುಗಳಿಗೆ ಇತರ ವಿಷಯಗಳ ಬಗ್ಗೆ ಚಿಂತಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮಧ್ಯಮ ಗಾತ್ರದ ಕಂಪನಿಗಳು ನಮ್ಮ ಈ ಸಂಸ್ಥೆಯ ನೆರವು ಕೋರಿ ಬರುತ್ತವೆ ಎಂದು ವೆಸ್ಟ್ ಬ್ರಿಡ್ಜ್ ಕ್ಯಾಪಿಟಲ್ ಸಂಸ್ಥೆಯ ನಿರ್ದೇಶಕ ಬಾಲರಾಜ್ ತಿಳಿಸಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications