Get Updates
Get notified of breaking news, exclusive insights, and must-see stories!

ಬ್ಯಾಂಕ್‌ ನೌಕರನ ಅಡ್ಡಗಟ್ಟಿ 8.5 ಲಕ್ಷ ರುಪಾಯಿ ದರೋಡೆ

ಬೆಂಗಳೂರು : ಮಾರಕಾಸ್ತ್ರಗಳನ್ನು ಹೊಂದಿದ್ದ ನಾಲ್ವರು ದುಷ್ಕರ್ಮಿಗಳು ಇಂಡಿಯನ್‌ ಬ್ಯಾಂಕ್‌ ನೌಕರನಿಂದ 8.22 ಲಕ್ಷ ರುಪಾಯಿ ದೋಚಿರುವ ಘಟನೆ ಸೋಮವಾರ ಬೆಳಿಗ್ಗೆ ನಗರದ ಆರ್‌.ಎಂ.ಸಿ. ಯಾರ್ಡ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಸಂಭವಿಸಿದೆ.

ಪೆಪ್ಸಿ ಕಂಪನಿಯಿಂದ ಸೋಮವಾರ ಬೆಳಗ್ಗೆ 8 ಲಕ್ಷ ರುಪಾಯಿಗೂ ಹೆಚ್ಚು ಹಣವನ್ನು ಸಂಗ್ರಹಿಸಿಕೊಂಡು ಅಂಬಾಸಡರ್‌ ಕಾರಿನಲ್ಲಿ ಬ್ಯಾಂಕಿಗೆ ವಾಪಸ್ಸಾಗುತ್ತಿದ್ದ ಇಂಡಿಯನ್‌ ಬ್ಯಾಂಕ್‌ನ ಗುಮಾಸ್ತ ಸತ್ಯನಾರಾಯಣ ಎನ್ನುವವರನ್ನು ನೀಲಿ ಮಾರುತಿಯಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಹಣ ದೋಚಿದ್ದಾರೆ.

ಚಾಕು, ಕತ್ತಿ, ರಿವಾಲ್ವರ್‌ಗಳನ್ನು ದುಷ್ಕರ್ಮಿಗಳು ಹೊಂದಿದ್ದರು. 25 ರಿಂದ 30 ರ ವಯೋಮಾನದ ದರೋಡೆಕೋರರ ಪೈಕಿ ಚಾಲಕ ಗಡ್ಡಧಾರಿಯಾಗಿದ್ದ ಎಂದು ಪೊಲೀಸರಿಗೆ ದೂರು ನೀಡಿರುವ ಸತ್ಯನಾರಾಯಣ ತಿಳಿಸಿದ್ದಾರೆ. ಡಿಸಿಪಿ ಎಸ್‌.ಕೆ. ವೇಣುಗೋಪಾಲ್‌, ಎಸಿಪಿ ಪಾಂಡುರಂಗರಾವ್‌ ಸ್ಥಳ ಪರಿಶೀಲನೆ ನಡೆಸಿದ್ದು , ತನಿಖೆ ಮುಂದುವರಿದಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+