Get Updates
Get notified of breaking news, exclusive insights, and must-see stories!

ಸಾಮಾನ್ಯ ವಿದ್ಯಾರ್ಥಿಗಳಿಗೆ ಪರ ಸಚಿವಪರಮೇಶ್ವರ್‌ ವಕಾಲತ್ತು

ಬೆಂಗಳೂರು : ಸರ್ಕಾರದ ಅನುದಾನ ಪಡೆಯುವ ಕಾಲೇಜುಗಳು ಸಾಮಾನ್ಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಿದ್ದಲ್ಲಿ ಅವುಗಳಿಗೆ ನೀಡುವ ಅನುದಾನವನ್ನು ರದ್ದುಪಡಿಸುವುದು ಅನಿವಾರ್ಯವಾದೀತು ಎಂದು ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್‌ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದಿಂದ ಪೂರ್ಣ ಪ್ರಮಾಣದಲ್ಲಿ ಅನುದಾನ ಪಡೆಯುವ ಕಾಲೇಜುಗಳು ಕೇವಲ ಮೆರಿಟ್‌ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡುತ್ತಿವೆ. ಸಾಮಾನ್ಯ ಹಾಗೂ ಮಧ್ಯಮ ದರ್ಜೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೂ ಈ ಕಾಲೇಜುಗಳು ಪ್ರವೇಶಾವಕಾಶ ಕಲ್ಪಿಸಬೇಕೆದು ಪರಮೇಶ್ವರ್‌ ಕಾಲೇಜುಗಳ ಆಡಳಿತ ಮಂಡಳಿಯವರಲ್ಲಿ ಮನವಿ ಮಾಡಿದರು.

ಸರ್ಕಾರದ ಮನವಿಗೆ ಸ್ಪಂದಿಸದೆ ಹೋಗುವ ಕಾಲೇಜುಗಳಿಗೆ ನೀಡುವ ಅನುದಾನವನ್ನು ರದ್ದುಪಡಿಸುವುದು ಅನಿವಾರ್ಯವಾಗುತ್ತದೆ. ಖಾಸಗಿ ಆಡಳಿತ ಮಂಡಳಿಗಳು ಸೂಕ್ತವಾಗಿ ಪ್ರತಿಕ್ರಿಯಿಸದಿದ್ದಲ್ಲಿ ಮುಂದಿನ ವರ್ಷದಿಂದ ಪ್ರವೇಶ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಸುಮಾರು 200 ಕಾಲೇಜುಗಳು ಅನುದಾನ ಪಡೆಯುತ್ತಿದ್ದು , ಈ ಕಾಲೇಜುಗಳು ಉತ್ತಮ ಅಂಕ ಕಗಳಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸುತ್ತಿವೆ. ಸಾಮಾನ್ಯ ವಿದ್ಯಾರ್ಥಿಗಳ ಬಗೆಗೆ ಈ ಕಾಲೇಜುಗಳ ಮಲತಾಯಿ ಧೋರಣೆ ಬದಲಾಗಬೇಕೆಂದು ಪರಮೇಶ್ವರ್‌ ಸ್ಪಷ್ಟದನಿಯಲ್ಲಿ ತಿಳಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+