ಅನಿವಾಸಿ ಕನ್ನಡಿಗರಿಗೆ ವಂಚನೆ : ಮೀನಾಕ್ಷಿ ಟಾಯ್ಸ್ ವಿರುದ್ಧ ದೂರು
ಚನ್ನಪಟ್ಟಣ : ಬಣ್ಣದ ಬೊಂಬೆ ಹಾಗೂ ಆಟಿಕೆಗಳಿಗೆ ಹೆಸರಾದ ಚನ್ನಪಟ್ಟಣದಲ್ಲಿರುವ ಬೊಂಬೆಗಳ ಮಾರಾಟದ ಅಂಗಡಿಯಾಂದರ ಮಾಲಿಕರು ಹಾಗೂ ಇತರ ಇಬ್ಬರು ತಮಗೆ ಮೋಸ ಮಾಡಿರುವರೆಂದು ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಅನಂತ್‌ಕೃಷ್ಣ ಎನ್ನುವವರು ಚನ್ನಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನನ್ವಯ ಕಾರ್ಯಪ್ರವೃತ್ತರಾದ ಟೌನ್ ಪೊಲೀಸರು ಹಮೀದ್ ಎನ್ನುವವರನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಅಂಗಡಿಯ ಮಾಲಿಕ ಹಾಗೂ ಮತ್ತೊಬ್ಬ ವ್ಯಕ್ತಿಗಾಗಿ ಶೋಧ ಮುಂದುವರಿದಿದೆ.
ಈಗ್ಗೆ ಮೂರು ವರ್ಷಗಳ ಹಿಂದೆ ತಮ್ಮ ತವರು ರಾಜ್ಯಕ್ಕೆ ಬಂದಿದ್ದ ಕ್ಯಾಲಿಫೋರ್ನಿಯಾದ ಅನಂತ್‌ಕೃಷ್ಣ ಅವರು ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಚನ್ನಪಟ್ಟಣದ ಮೀನಾಕ್ಷಿ ಟಾಯ್ಸ್ ಎಂಪೋರಿಯಂನಲ್ಲಿ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಗೀತೋಪದೇಶ ಮಾಡುತ್ತಿರುವ ಕೆತ್ತನೆಯುಳ್ಳ ಕಲಾಕೃತಿಯನ್ನು ಖರೀದಿಸಿದ್ದರು.
ಅಂಗಡಿಯ ಮಾಲಿಕರಾದ ಅಂಕುಗೌಡ ಅಲಿಯಾಸ್ ಆನಂದ್ ಎನ್ನುವವರು, ಈ ಕಲಾಕೃತಿಯನ್ನು ನೇರವಾಗಿ ಕ್ಯಾಲಿಫೋರ್ನಿಯಾಗೇ ಕಳುಹಿಸುವುದಾಗಿ ತಿಳಿಸಿ, ಕಲಾಕೃತಿಯ ಮೌಲ್ಯ ಹತ್ತು ಸಾವಿರ ರುಪಾಯಿ ಹಾಗೂ ಅಂಚೆ ವೆಚ್ಚ (ಪಾರ್ಸಲ್) 2,200 ರುಪಾಯಿ ಪಡೆದರು. ವರ್ಷಗಳೇ ಕಳೆದರೂ ಕಲಾಕೃತಿ ಅನಂತಕೃಷ್ಣ ಅವರಿಗೆ ತಲುಪಲಿಲ್ಲ.
ಈ ಬಗ್ಗೆ ಮೈಸೂರಿನಲ್ಲಿರುವ ಅನಂತಕೃಷ್ಣರ ಸೋದರ ಅಂಗಡಿಯ ಮಾಲಿಕರನ್ನು ಹಲವು ಬಾರಿ ವಿಚಾರಿಸಿದರೂ ಪ್ರಯೋಜನ ಆಗಲಿಲ್ಲ. ಮೂರು ವರ್ಷಗಳ ತರುವಾಯ ರಾಜ್ಯಕ್ಕೆ ಬಂದ ಅನಂತಕೃಷ್ಣ ತಾವೇ ಸ್ವತಃ ಅಂಗಡಿಯ ಮಾಲಿಕರ ಬಳಿ ಹೋಗಿ ವಿಚಾರಿಸಿದಾಗ ಅಂಗಡಿಯ ಮಾಲಿಕ ಜಗಳಕ್ಕೇ ನಿಂತರು.
ಈ ಸಂಬಂಧ ಅವರು ಟೌನ್ ಪೊಲೀಸರಿಗೆ ದೂರು ನೀಡಿದ್ದು, ಹಮೀದ್ ಎಂಬುವವನ್ನು ಬಂಧಿಸಲಾಗಿದೆ. ಅಂಗಡಿ ಮಾಲಿಕ ಆನಂದ್ ಹಾಗೂ ಜಯರಾಮ್ ಎನ್ನುವವರಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಬಾಲಕೃಷ್ಣ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications