Get Updates
Get notified of breaking news, exclusive insights, and must-see stories!

ಗುರುವಾರ ಪ್ರಧಾನಿ ಶಸ್ತ್ರಚಿಕಿತ್ಸೆಗೆಬ್ರೀಚ್‌ಕ್ಯಾಂಡಿ ಆಸ್ಪತ್ರೆ ಸಜ್ಜು

ಮುಂಬಯಿ : ಗುರುವಾರ (ಜೂನ್‌ 7) ನಡೆಯುವ ಪ್ರಧಾನಿ ವಾಜಪೇಯಿ ಅವರ ಬಲಮಂಡಿ ಶಸ್ತ್ರಚಿಕಿತ್ಸೆಗೆ ಬ್ರೀಚ್‌ಕ್ಯಾಂಡಿ ಆಸ್ಪತ್ರೆ ಸರ್ವ ಸಿದ್ಧತೆಗಳನ್ನೂ ಮಾಡಿಕೊಂಡಿದ್ದು , ಶಸ್ತ್ರಚಿಕಿತ್ಸೆಯ ನೇತೃತ್ವವನ್ನು ವಹಿಸುವ ಡಾ. ಚಿತ್ತರಂಜನ್‌ ರಣಾವತ್‌ ಮಂಗಳವಾರ ಮುಂಬಯಿಗೆ ಆಗಮಿಸುವ ನಿರೀಕ್ಷೆಯಿದೆ.

ಕಳೆದ ಅಕ್ಟೋಬರ್‌ನಲ್ಲಿ ಇದೇ ಆಸ್ಪತ್ರೆಯಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಪ್ರಧಾನಿಯವರ ಎಡ ಮಂಡಿ ಶಸ್ತ್ರಚಿಕಿತ್ಸೆಯನ್ನು ರಣಾವತ್‌ ಯಶಸ್ವಿಯಾಗಿ ನಡೆಸಿದ್ದರು. ಇತರ ತಜ್ಞರಾದ ಡಾ. ನಂದು, ಡಾ. ಹರೀಶ್‌ ಬೆಂಡೆ, ಎನ್ರಿಕೊ ಗಾಡ್ಜಿಲಾ ಹಾಗೂ ಸಿರೀಶ್‌ ಗುಪ್ತ ಅವರುಗಳು ರಣಾವತ್‌ ಅವರೊಂದಿಗಿನ ಶಸ್ತ್ರಚಿಕಿತ್ಸೆ ನಡೆಸುವ ವೈದ್ಯರುಗಳ ತಂಡದಲ್ಲಿದ್ದಾರೆ.

ಪ್ರಧಾನಿ ವಾಜಪೇಯಿ ಬುಧವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗುವ ನಿರೀಕ್ಷೆಯಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅವರು ಆಸ್ಪತ್ರೆಗೆ ದಾಖಲಾದ ತಕ್ಷಣದಿಂದಲೇ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಿ, ಆರೋಗ್ಯ ಪರಿಸ್ಥಿತಿಗೆ ಅನುಗುಣವಾಗಿ ಗುರುವಾರ ಅಥವಾ ಶುಕ್ರವಾರ ಶಸ್ತ್ರಚಿಕಿತ್ಸೆ ನಡೆಸಲಾಗುವುದು.

ಶಸ್ತ್ರಚಿಕಿತ್ಸೆಯಲ್ಲಿ ಹಾನಿಗೊಂಡಿರುವ ಮಂಡಿಯ ಭಾಗ ಹಾಗೂ ಕಾರ್ಟಿಲೇಜ್‌ ಡೆಬ್ರಿಸ್‌ಗಳನ್ನು ತೆಗೆಯಲಾಗುವುದು. ಟಿಬಿಯಾ ಹಾಗೂ ಫಿಮರ್‌ಗೆ ರಂಧ್ರಗಳನ್ನು ಕೊರೆಯುವ ಮೂಲಕ ಪ್ರಧಾನಿಯವರಿಗೆ ಕೃತಕ ಮಂಡಿಯನ್ನು ಅಳವಡಿಸಲಾಗುವುದು.

ಬ್ರೀಚ್‌ಕ್ಯಾಂಡಿ ಆಸ್ಪತ್ರೆಯ ಏಳನೇ ಮಹಡಿ ಪ್ರಧಾನಿಯವರ ಉಪಚಾರಕ್ಕೆ ಈಗಾಗಲೇ ಸಂಪೂರ್ಣ ಸಿದ್ಧವಾಗಿದೆ. ಪ್ರಧಾನಿಯವರ ಭದ್ರತಾ ಸಿಬ್ಬಂದಿ ಎಂದಿನಂತೆ ವಾಜಪೇಯಿಯವರ ಸುರಕ್ಷತೆಯ ಹೊಣೆ ಹೊರಲಿದ್ದು, ಭದ್ರತಾ ಸಿಬ್ಬಂದಿಯಾಂದಿಗೆ ಸಹಕಾರಕ್ಕಾಗಿ ಮುಂಬಯಿ ವಿಶೇಷ ಪೊಲೀಸ್‌ ಪಡೆಗಳು ಸಿದ್ಧವಾಗಿವೆ.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+