• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೋಲೆಯ ಗ್ರಾಮದಲ್ಲಿಕಂಪ್ಯೂಟರ್‌ ಕ್ರಾಂತಿ

By Staff
|

*ನಾರಾಯಣನ್‌ ಮಾಧವನ್‌

ಎರಡು ದಶಕಗಳ ಹಿಂದಿನ ರಾಮನಗರ ನಿಮಗಿನ್ನೂ ನೆನಪಿನಲ್ಲಿರಬೇಕು- ಬಾಲಿವುಡ್‌ನಲ್ಲಿ ಸಂಚಲನೆ ಸೃಷ್ಟಿಸಿದ ‘ಶೋಲೆ’ ಸಿನಿಮಾ ಹಾಗೂ ಬ್ರಿಟೀಷ್‌ ರಾಜ್‌ ಎಪಿಕ್‌ ‘ಎ ಪ್ಯಾಸೇಜ್‌ ಟು ಇಂಡಿಯಾ’ ದ ಸೆಟ್ಟುಗಳು ಎದ್ದು ನಿಂತದ್ದು ಅಲ್ಲಿಯೇ. ಆ ದಿನಗಳಲ್ಲಿ ರಾಮನಗರ ದೇಶಾದ್ಯಂತ ಸುದ್ದಿಯಲ್ಲಿತ್ತು . ಅದೇ ಊರು- ಎರಡು ದಶಕಗಳ ನಂತರ ಮತ್ತೆ ಸುದ್ದಿಕೇಂದ್ರದಲ್ಲಿದೆ, ಕಂಪ್ಯೂಟರ್‌ ಕ್ರಾಂತಿಯ ಮೂಲಕ.

ಶತಮಾನಗಳಷ್ಟು ಹಳೆಯದಾದ ಭೂ ದಾಖಲೆಗಳನ್ನು ಕಂಪ್ಯೂಟರೀಕೃತಗೊಳಿಸುವ ಕೆಲಸವೀಗ ನಡೆಯುತ್ತಿದೆ. ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕರ್ನಾಟಕದ ಯಶೋಗಾಥೆ ಜಗತ್ತಿಗೆಲ್ಲ ಗೊತ್ತಿರುವಂಥದ್ದೇ. ಈಗ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಹಾಗೂ ಪಾರದರ್ಶಕತೆಯನ್ನು ಉಳಿಸಿಕೊಳ್ಳುವ ದಿಕ್ಕಿನಲ್ಲಿ ರಾಜ್ಯ ಮುನ್ನಡೆಯುತ್ತಿದೆ. ಈ ನಿಟ್ಟಿನಲ್ಲಿ ಭೂ ದಾಖಲೆಗಳನ್ನು ಕಂಪ್ಯೂಟರೀಕರಿಸಲಾಗುತ್ತಿದೆ. ಇದಕ್ಕೆ ತಗುಲುವ ವೆಚ್ಚ ಕೂಡ ತೀರ ಕಡಿಮೆ ಎನ್ನುತ್ತಾರೆ ರಾಜೀವ್‌ ಚಾವ್ಲಾ . ಅವರು ರಾಜ್ಯ ಕಂದಾಯ ಇಲಾಖೆಯಲ್ಲಿ ಹಿರಿಯ ಅಧಿಕಾರಿ. ಇ- ಆಡಳಿತ ಜಾರಿ ಆಂದೋಲನದಲ್ಲೂ ಮುಂಚೂಣಿಯಲ್ಲಿದ್ದಾರೆ.

ಭೂ ದಾಖಲೆಗಳ ಮಳಿಗೆಗೆ ಹೋಗುವ ನಡೆಯಿರಿ !

ಮಾವು ಹಾಗೂ ತೆಂಗಿನ ಬೆಳೆಗೆ ಹೆಸರಾದ ರಾಮನಗರದ ರೈತರು ಈಗ ಭೂದಾಖಲೆಗಳ ಮಳಿಗೆ ಅಥವಾ ಭೂ ದಾಖಲೆಗಳ ಅಂಗಡಿಯತ್ತ ದಾಪುಗಾಲಿಡುತ್ತಿದ್ದಾರೆ. ಅವರ ಭೂ ಒಡೆತನಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳು ಕಂಪ್ಯೂಟರ್‌ ಪ್ರಿಂಟೌಟ್‌ನಲ್ಲೀಗ ಲಭ್ಯ. ಇದರಿಂದಾಗಿ ರಾಮನಗರದ ರೈತರೀಗ ಅದಕ್ಷ, ಲಂಚಕೋರ ಗ್ರಾಮ ಲೆಕ್ಕಿಗನ ಕಬಂಧ ಬಾಹುಗಳಿಂದ ಮುಕ್ತರು. ದಾಖಲೆಗಳನ್ನು ತಿದ್ದುವುದಾಗಲೀ, ಬದಲಾಯಿಸುವುದಾಗಲೀ ಇನ್ನಲ್ಲಿ ಸಾಧ್ಯವಿಲ್ಲ .

ರಾಜ್ಯದಲ್ಲಿ ಸುಮಾರು 6.7 ಮಿಲಿಯನ್‌ ರೈತರಿದ್ದು , 30 ಸಾವಿರ ಹಳ್ಳಿಗಳಿಗೆ ಸಂಬಂಧಿಸಿದಂತೆ 17 ಮಿಲಿಯನ್‌ ಭೂದಾಖಲೆಗಳು ಚಾಲ್ತಿಯಲ್ಲಿವೆ. ಈ ಭೂ ದಾಖಲೆಗಳ ಯೋಜನೆಗಾಗಿ 180 ಮಿಲಿಯನ್‌ ರುಪಾಯಿಗಳನ್ನು ಖರ್ಚು ಮಾಡಲಾಗಿದೆ.

ಭೂ ದಾಖಲೆಗಳನ್ನು ಕಂಪ್ಯೂಟರ್‌ನಲ್ಲಿ ಅಳವಡಿಸುವುದರಿಂದ ಭೂ ಒಡೆತನ ಸುಲಭವಾಗಿ ಗುರ್ತಿಸುವುದು ಮಾತ್ರವಲ್ಲದೆ- ನೀರಾವರಿ, ಮಣ್ಣು , ಬೆಳೆಗಳು ಮುಂತಾದ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನೂ ಸುಲಭವಾಗಿ ಸಂಗ್ರಹಿಬಹುದು. ಈ ವಿವರಗಳು ಅಭಿವೃದ್ಧಿ ಕಾಮಗಾರಿಗಳಲ್ಲಿ ಅತ್ಯಂತ ಉಪಯುಕ್ತ .

ಗೊಂದಲವಿಲ್ಲ , ಭ್ರಷ್ಟಾಚಾರದ ಮಾತೇ ಇಲ್ಲ

ದಶಕಗಳಿಂದ ರೀಮುಗಟ್ಟಲೆ ಕಾಗದ ಬಳಸುತ್ತಿರುವ, ಇನ್ನೂ ಚಾಲ್ತಿಯಲ್ಲಿರುವ ರಾಜ್ಯದಲ್ಲಿನ 9 ಸಾವಿರ ಅಕೌಂಟೆಂಟ್‌ಗಳು ತಿದ್ದಿ ಬೆಳೆದದ್ದು ಭ್ರಷ್ಟಾಚಾರವನ್ನೆ . ದಾಖಲೆಗಳನ್ನು ತಿದ್ದುವುದು, ಬದಲಾಯಿಸುವುದರಲ್ಲಿ ಈ ಅಕೌಂಟೆಂಟ್‌ಗಳು ನಿಸ್ಸೀಮರು. ಒಬ್ಬನೇ ಅಕೌಂಟೆಂಟ್‌ ನಾಲ್ಕು ಹಳ್ಳಿಗಳನ್ನು ನಿರ್ವಹಿಸುವುದೂ ಉಂಟು. ಇದರಿಂದಾಗಿ ದಾಖಲೆಗಳನ್ನು ನಿರ್ವಹಿಸುವಲ್ಲಿ ಲೋಪಗಳುಂಟಾಗುತ್ತವೆ. ಶಿವಣ್ಣ ದಾಸಯ್ಯ ಎನ್ನುವ 37 ವರ್ಷದ ರೈತನಿಗೆ ಬ್ಯಾಂಕ್‌ ಸಾಲ ಪಡೆಯಲು ಪ್ರಮಾಣ ಪತ್ರದ ಅಗತ್ಯವಿತ್ತು . ಇದಕ್ಕಾಗಿ ಆತ ಗ್ರಾಮ ಲೆಕ್ಕಿಗನಿಗೆ 100 ರುಪಾಯಿ ತೆತ್ತಬೇಕಾಯಿತು. ಈ ಮೊತ್ತ 500 ರುಪಾಯಿವರೆಗೆ ಹೆಚ್ಚುವುದೂ ಉಂಟು. ದಾಖಲೆಗಳನ್ನು ಕಂಪ್ಯೂಟರೀಕೃತಗೊಳಿಸಿದ ನಂತರ ರೈತರಿಗೆ ಸಮಸ್ಯೆಯೇ ಇಲ್ಲ . 15 ರುಪಾಯಿ ಕೊಟ್ಟರೆ ಸಾಕು, ದಾಖಲೆಗೆ ಸಂಬಂಧಿಸಿದ ಪ್ರಿಂಟೌಟ್‌ ದೊರೆಯುತ್ತದೆ.

ಭೂ ವ್ಯಾಜ್ಯಗಳು ಹಳ್ಳಿಗಳಲ್ಲಿ ರಕ್ತದ ಕೋಡಿ ಹರಿಸಿರುವ ಅನೇಕ ಉದಾಹರಣೆಗಳನ್ನು ನಾವು ನೋಡಬಹುದು. ದೇಶದಲ್ಲಿ 60 ಸಾವಿರ ಹಳ್ಳಿಗಳಿವೆ. ಇದಕ್ಕೂ ಮುನ್ನ ಕಾಫಿಯ ಊರಾದ ಸಕಲೇಶಪುರ ಮತ್ತು ಮದ್ದೂರು ಮಾರ್ಗಗಳಲ್ಲಿ ಭೂ ದಾಖಲೆಗಳ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು . ಈಗ ರಾಮನಗರದ ಸರದಿ. ಅಂದಹಾಗೆ, ಬೆಂಗಳೂರಿನಿಂದ 40 ಕಿಮೀ ದೂರದಲ್ಲಿ ರಾಮನಗರವಿದೆ. ಕರ್ನಾಟಕದಲ್ಲಿ ನ 177 ತಾಲ್ಲೂಕುಗಳಲ್ಲಿ 44 ತಾಲ್ಲೂಕುಗಳು ಈ ಯೋಜನೆಯ ಪ್ರಯೋಜನ ಪಡೆದಿವೆ.

ಭೂದಾಖಲೆಗಳನ್ನು ಕಂಪ್ಯೂಟರೀಕರಿಸಲು ತಗಲುವ ವೆಚ್ಚವನ್ನು ಪ್ರಿಂಟೌಟ್‌ಗಳನ್ನು ಮಾರುವ ಮೂಲಕ ಸುಲಭವಾಗಿ ವಾಪಸ್ಸು ಪಡೆಯಲು ಸಾಧ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ. ಪ್ರಸ್ತುತ ಪ್ರತಿಯಾಂದು ಉಪ ಜಿಲ್ಲೆಗೂ ಇಬ್ಬರು ಅಕೌಂಟೆಂಟ್‌ಗಳಿಗೆ ಕಂಪ್ಯೂಟರ್‌ ತರಬೇತಿ ನೀಡಲಾಗುತ್ತಿದೆ. ಬರುವ ವರ್ಷದ ಮಾರ್ಚ್‌ ವೇಳೆಗೆ ಎಲ್ಲ ಜಿಲ್ಲೆಗಳನ್ನೂ ಈ ಯೋಜನೆಯಲ್ಲಿ ಸೇರ್ಪಡೆಗೊಳಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಅದೇ ರೀತಿ, ಇಂಟರ್ನೆಟ್‌ ಮೂಲಕ ಸ್ಥಳೀಯ ಜಾಲವನ್ನು ರೂಪಿಸಲೂ ಉದ್ದೇಶಿಸಲಾಗಿದೆ. ಆರ್ಥಿಕ ಉದ್ದೇಶಗಳಿಗಾಗೂ ಈ ಮಾಹಿತಿಯನ್ನು ಬಳಸಿಕೊಳ್ಳಬಹುದು.

ಕಾಲ ವಿಳಂಬ ಎನ್ನುವ ಮಾತೇ ಇಲ್ಲ , ಬೆರಳ ತುದಿಯಲ್ಲಿ ಮಾಹಿತಿ

ಕಾನ್ಪುರದ 39 ವರ್ಷದ ಚಾವ್ಲಾ ಭೂ ದಾಖಲೆಗಳನ್ನು ಕಂಪ್ಯೂಟರ್‌ಗೆ ಅಳವಡಿಸುವ ಮಹತ್ವದ ಯೋಜನೆಯಲ್ಲಿ ತೊಡಗಿರುವ ವ್ಯಕ್ತಿ . ಪ್ರತಿಷ್ಠಿತ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಅಫ್‌ ಟೆಕ್ನಾಲಜಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಪದವಿ ಪಡೆದಿರುವ ಚಾವ್ಲಾ ದೊಡ್ಡ ಮೊತ್ತದ ಸಂಬಳ ಒಲ್ಲದೆ, ಈ ಕೆಲಸವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಚಾವ್ಲಾ ಇಂದು ಎದುರಿಸುತ್ತಿರುವ ಬಹುದೊಡ್ಡ ಸವಾಲು- ಸಂಗ್ರಹಿತ ದಾಖಲೆಗಳನ್ನು ಕಾಪಾಡುವುದು ಹಾಗೂ ಅಗತ್ಯ ಬಿದ್ದಾಗ ಸುಲಭವಾಗಿ ದೊರಕಿಸುವುದು. ನ್ಯಾಶನಲ್‌ ಇನ್‌ಫಾರ್ಮಾಟಿಕ್ಸ್‌ ಸೆಂಟರ್‌, ಸಾಫ್ಟ್‌ವೇರ್‌ ದೈತ್ಯ ಮೈಕ್ರೋಸಾಫ್ಟ್‌ ಕಾರ್ಪೊರೇಷನ್‌, ಕಾಂಪ್ಯಾಕ್‌ ಕಾರ್ಪೊರೇಷನ್‌ ಹಾಗೂ ಅದಿತಿ ಟೆಕ್ನಾಲಜೀಸ್‌ ಲಿಮಿಟೆಡ್‌ ಅವರು ಈ ಯೋಜನೆಯಲ್ಲಿ ನೆರವು ನೀಡುತ್ತಿದ್ದಾರೆ. ಆದರೆ, ಇಷ್ಟೆಲ್ಲ ಕಷ್ಟಪಟ್ಟು ಸಂಗ್ರಹಿಸಿದ ಮಾಹಿತಿಗಳನ್ನು ಯಾರಾದರೂ ಕಂಪ್ಯೂಟರ್‌ ಪ್ರಚಂಡ ‘ಹ್ಯಾಕ್‌’ ಮಾಡಿದರೆ ? ಚಾವ್ಲಾ ತಲೆ ತಿನ್ನುತ್ತಿರುವ ಪ್ರಶ್ನೆ ಇದೇನೆ. ಸದ್ಯಕ್ಕೆ ಅವರ ಬಳಿ ಉತ್ತರವಿಲ್ಲ .

ಅಕೌಂಟೆಂಟ್‌ಗಳ ಕೈ ಬರಹ ಹಾಗೂ ಸಹಿಯುಳ್ಳ ಮೂಲ ದಾಖಲೆಗಳನ್ನು ಪ್ರಸ್ತುತ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಲಾಗುತ್ತಿದೆ. ಒಂದು ಸಾರಿ ಕಂಪ್ಯೂಟರ್‌ನಲ್ಲಿ ದಾಖಲೆ ಸೇರಿತೆಂದರೆ ತೀರಿತು, ಅನಂತರ ಕೈ ಬರಹದ ದಾಖಲೆಗಳಿಗೆ ಮಾನ್ಯತೆಯಿಲ್ಲ ಎನ್ನುತ್ತಾರೆ ಚಾವ್ಲಾ . ಭವಿಷ್ಯದ ದಿನಗಳಲ್ಲಿ ಎಲ್ಲ ದತ್ತಾಂಶಗಳನ್ನೂ ಕ್ರಮಬದ್ಧವಾಗಿ ಕಂಪ್ಯೂಟರ್‌ನಲ್ಲಿ ಅಳವಡಿಸಲು ಹಾಗೂ ಬಳಸಲು ಸಾಧ್ಯವಿದೆ ಎನ್ನುವ ಚಾವ್ಲಾ, ಒಡೆತನದ ಬದಲಾವಣೆ ಸಂದರ್ಭಗಳಲ್ಲೂ ಕಂಪ್ಯೂಟರ್‌ ಬಳಕೆ ಅತ್ಯುಪಯುಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

(ರಾಯ್ಟರ್ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X