ಪ್ರತಿಭಟನೆಯ ಕುಲುಮೆಯಲ್ಲಿ ಕಠ್ಮಂಡು : ಕರ್ಫ್ಯೂ ಜಾರಿ
ಕಠ್ಮಂಡು : ನೇಪಾಳದ ರಾಜಧಾನಿಯಲ್ಲಿ ನೂತನ ದೊರೆ ಜ್ಞಾನೇಂದ್ರ ಕಿರೀಟ ಧರಿಸುತ್ತಿದ್ದಂತೆಯೇ, ಅವರ ವಿರುದ್ಧ ಪ್ರತಿಭಟನೆ- ಹಿಂಸಾಚಾರ ವ್ಯಾಪಕವಾಗಿದ್ದು ಕಠ್ಮಂಡುವಿನಲ್ಲಿ ಕರ್ಫ್ಯೂ ಘೋಷಿಸಲಾಗಿದೆ.
ಸೋಮವಾರ ಸಂಜೆ 4 ರಿಂದ ಮಂಗಳವಾರ ಮುಂಜಾನೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಕಠ್ಮಂಡುವಿನ ಜಿಲ್ಲಾಧಿಕಾರಿ ಘೋಷಿಸಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು , ಗಲಭೆಯಲ್ಲಿ ನಿರತರಾಗಿರುವವರ ವಿರುದ್ಧ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಲಾಗಿದೆ. ಇದಕ್ಕೂ ಮುನ್ನ ಪ್ರತಿಭಟನಕಾರರು ನೂತನ ದೊರೆ ಜ್ಞಾನೇಂದ್ರ, ಪ್ರಧಾನಿ ಜಿ.ಪಿ. ಕೊಯಿರಾಲ ಮತ್ತಿತರರ ವಿರುದ್ಧ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ಕೂಗಿದರು. ನೂರಾರು ದ್ವಿಚಕ್ರ ವಾಹನಗಳ ಸವಾರರು ನಗರದಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿಸಿದರು.
ಪೊಲೀಸರೊಂದಿಗೆ ಸೈನಿಕರು ಕೂಡ ಕಾನೂನು ಮತ್ತು ಸುವ್ಯವಸ್ಥೆ ಕಾರ್ಯದಲ್ಲಿ ತೊಡಗಿದ್ದು , ಪ್ರಮುಖ ರಸ್ತೆಗಳ ತಿರುವುಗಳನ್ನು ಸೇನೆ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ದೊರೆ ಜ್ಞಾನೇಂದ್ರ ಅವರ ಅರಮಮನೆಯ ಮುಂಭಾಗ ನೆರೆದಿದ್ದ ಜನರನ್ನು ಚದುರಿಸಲು ಪೊಲೀಸರು ಯತ್ನಿಸಿದಾಗ, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಸಣ್ಣ ಪ್ರಮಾಣದ ಘರ್ಷಣೆ ಉಂಟಾಯಿತು. ಥಾಮೆಲ್ ಷಾಪಿಂಗ್ ಕೇಂದ್ರದ ಬಳಿ ಪೊಲೀಸರು ಚಲಾಯಿಸಿದ ಗೋಲಿಬಾರ್‌ನಲ್ಲಿ ಅನೇಕ ಮಂದಿ ಗಾಯಗೊಂಡಿದ್ದಾರೆ.
ಮಾಧ್ಯಮದವರಿಗೆ ಭಯ, ಭಾರತಿಯರಿಗೂ ಅಭದ್ರತೆ
ಕಠ್ಮಂಡುವಿನ ಮಾಧ್ಯಮ ಕೇಂದ್ರಗಳ ಮಂದಿ, ಅದರಲ್ಲೂ ವಿದೇಶಿ ಮಾಧ್ಯಮ ಪ್ರತಿನಿಧಿಗಳು ರಕ್ಷಣೆಯಿಲ್ಲದೆ ಕಂಗಾಲಾಗಿದ್ದಾರೆ. ಸುದ್ದಿ ಸಂಗ್ರಹಣೆಯಲ್ಲಿ ತೊಡಗಿದ್ದ ವರದಿಗಾರರ ಮೇಲೆ ದಾಳಿ ನಡೆದಿರುವ ವರದಿಗಳು ಬಂದಿವೆ. ಈ ನಡುವೆ ಕಠ್ಮಂಡುವಿನಲ್ಲಿನ ಭಾರತೀಯ ಕುಟುಂಬಗಳು ಕೂಡ ಅಭದ್ರತೆಯೆದುರಿಸುತ್ತಿವೆ ಎನ್ನಲಾಗಿದೆ.
ಕಠ್ಮಂಡುವಿನಲ್ಲಿ ಸಂಭವಿಸಿರುವ ಹಿಂಸಾಚಾರದಲ್ಲಿ ಕೆಲವು ಮಂದಿ ಜೀವ ಕಳೆದುಕೊಂಡಿರುವ ಶಂಕೆಯೂ ಇದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications