Get Updates
Get notified of breaking news, exclusive insights, and must-see stories!

‘ನೀರಾ’ ಕ್ಕೆ ಅನುಮತಿ ಕುರಿತುಪರಿಶೀಲನೆ : ಕೃಷ್ಣ ಭರವಸೆ

ಬೆಂಗಳೂರು : ಹಾಸನದ ಎಂಟು ಗ್ರಾಮಗಳಲ್ಲಿ ಮತ್ತು ಚಿಕ್ಕ ಮಗಳೂರಿನ ಬೇಲೂರಿನಲ್ಲಿ ಅಬ್ಕಾರಿ ಸಿಬ್ಬಂದಿಗಳು ನೀರಾ ಮಡಕೆಗಳನ್ನು ಒಡೆದು ಹಾಕಿದ ವರದಿಗಳು ಬರುತ್ತಿದ್ದಂತೆ, ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ನೀರಾ ಇಳಿಸಲು ರೈತರಿಗೆ ಅನುಮತಿ ನೀಡುವ ವಿಷಯವನ್ನು ಪರಿಶೀಲಿಸಲಾಗುವುದು ಎಂದು ತುಂಬು ಭರವಸೆ ಇತ್ತಿದ್ದಾರೆ.

ನೀರಾ ಇಳಿಸಿದಲ್ಲಿ ತೆಂಗಿನ ಮರಗಳಿಗೆ ಬರುವ ನುಸಿ ರೋಗವನ್ನು ನಿಯಂತ್ರಿಸಲಾಗುವುದು ಎಂಬ ಬಗೆಗಿನ ವೈಜ್ಞಾನಿಕ ವರದಿ ತಮ್ಮ ಮೇಜು ತಲುಪಿದ ನಂತರವಷ್ಟೇ ನೀರಾ ಇಳಿಸಲು ಅನುಮತಿ ನೀಡಲು ಸಾಧ್ಯ ಎಂಬ ಷರತ್ತನ್ನು ಕೃಷ್ಣ ಮುಂದೊಡ್ಡಿದ್ದಾರೆ.

ಈ ನಡುವೆ ಅಬ್ಕಾರಿ ಸಿಬ್ಬಂದಿ ಮತ್ತು ರೈತರ ನಡುವಿನ ಜಟಾಪಟಿ ಮುಂದುವರೆಯುತ್ತಲೇ ಇದೆ. ಅರಸೀಕೆರೆ ತಾಲ್ಲೂಕಿನ 8 ಗ್ರಾಮಗಳ ತೆಂಗಿನ ತೋಟದ ಮೇಲೆ ಭಾನುವಾರ ದಾಳಿ ಮಾಡಿದ ಅಬ್ಕಾರಿ ಸಿಬ್ಬಂದಿ 500 ನೀರಾ ಮಡಕೆಗಳನ್ನು ನಾಶ ಮಾಡಿದ್ದು, 10 ಜನರ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ. ಬ್ಯಾಡರ ಹಳ್ಳಿಯ ಗುರುಸಿದ್ಧಪ್ಪ ಎಂಬವರನ್ನು ಬಂಧಿಸಲಾಗಿದೆ.

ಬೆಂಡಗೊಂಡನ ಹಳ್ಳಿ, ಕಿಕ್ಕೂರು, ಹಿರಿನಾಯ್ಕನ ಹಳ್ಳಿ, ಕೋರನ ಹಳ್ಳಿ ಕೊಪ್ಪಲು ಹರಿಹರಪುರದ ತೆಂಗಿನ ತೋಟಗಳಲ್ಲಿ ನೀರಾ ಮಡಕೆಗಳನ್ನು ಒಡೆದು ಹಾಕಲಾಗಿದೆ. ಚಿಕ್ಕಮಗಳೂರಿನ ಹಳೇ ಬೀಡಿನ ಸಮೀಪ ಗಂಗೂರಿನಲ್ಲಿಯೂ ಭಾನುವಾರದಂದು ನೀರಾ ವಿರುದ್ಧದ ಕಾರ್ಯಚಾರಣೆಗೆ ಸುಮಾರು 30 ಮಡಕೆಗಳು ನಾಶವಾಗಿದ್ದು, ಬೊಮ್ಮ ಗೌಡ ಮತ್ತು ಪಾಪಣ್ಣ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ.

ಅಬ್ಕಾರಿ ಸಿಬ್ಬಂದಿ ನೀರಾ ವಿರುದ್ಧ ಕಾರ್ಯಾಚರಣೆ ಯನು ್ನ ತೀವ್ರಗೊಳಿಸಿದಂತೆಲ್ಲಾ ತೆಂಗು ಬೆಳೆಗಾರರು ನೀರಾ ಚಳುವಳಿಯನ್ನು ತೀವ್ರಗೊಳಿಸುತ್ತಲೇ ಬಂದಿದ್ದಾರೆ. ಕೇಸು, ಮೊಕದ್ದಮೆ, ಬಂಧನಗಳಿಗೆಲ್ಲಾ ಜಗ್ಗದ ರೈತರು ರಾಜ್ಯ ರೈತ ಸಂಘಟನೆಯಾಂದಿಗೆ ನೀರಾ ಇಳಿಸಲು ಅನುಮತಿ ನೀಡುವಂತೆ ಹೋರಾಡುತ್ತಿದ್ದಾರೆ. ಈ ತಿಕ್ಕಾಟದ ನಡುವೆ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರು ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿರುವುದು ತೆಂಗು ಬೆಳೆಗಾರರಲ್ಲಿ ಭರವಸೆ ಮೂಡಿಸಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+