ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಎಲ್ಲ ಶಾಸಕರಮಾಹಿತಿ ನೀಡುವ ಡಾಟ್‌ಕಾಂ ಉದ್ಘಾಟನೆ

By Staff
|
Google Oneindia Kannada News

ಬೆಂಗಳೂರು : ಕರ್ನಾಟಕ ರಾಜ್ಯದ ಎಲ್ಲ ಕ್ಷೇತ್ರಗಳ ಶಾಸಕರ ಹಾಗೂ ಸಂಸತ್‌ ಸದಸ್ಯರ ಪಕ್ಷಾವಾರು ಹಾಗೂ ಜಿಲ್ಲಾವಾರು ವಿವರಗಳನ್ನು ಒಳಗೊಂಡ http://www.karnatakamla.com/

ವೆಬ್‌ಸೈಟ್‌ ಅನ್ನು ವಿಧಾನ ಸಭಾಧ್ಯಕ್ಷ ಎಂ.ವಿ. ವೆಂಕಟಪ್ಪ ಸೋಮವಾರ ಬೆಂಗಳೂರಿನಲ್ಲಿ ಉದ್ಘಾಟಿಸಿದರು.

ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆಗೆ ಪೂರ್ಣ ಪ್ರೋತ್ಸಾಹ ನೀಡಲಾಗಿದ್ದು, ಶಾಸಕರ ಮಾಹಿತಿಯನ್ನು ಒಳಗೊಂಡ ಈ ವೆಬ್‌ಸೈಟ್‌ ಮತ್ತೊಂದು ಪ್ರಗತಿಯ ಹೆಜ್ಜೆಯಾಗಿದೆ ಎಂದು ವೆಂಕಟಪ್ಪ ಹೇಳಿದರು. ಈಗಾಗಲೇ ರಾಜ್ಯದ 120 ಶಾಸಕರಿಗೆ ಕಂಪ್ಯೂಟರ್‌ ಬಳಕೆ ಬಗ್ಗೆ ತರಬೇತಿ ನೀಡಲಾಗಿದ್ದು, ಇನ್ನೊಂದು ತಿಂಗಳೊಳಗೆ ಎಲ್ಲ ಶಾಸಕರಿಗೂ ಕಂಪ್ಯೂಟರ್‌ ನೀಡಲಾಗುವುದು ಎಂದೂ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರು, ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಶಿಕ್ಷಣ, ಸಂಸ್ಕೃತಿ, ಪರಂಪರೆಯ ಕ್ಷೇತ್ರಗಳಿಗೂ ಸಮರ್ಥವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X