Get Updates
Get notified of breaking news, exclusive insights, and must-see stories!

ಮಣಿಪುರ : ದೊಂಬರಾಟಗಳಿಗೆ ತೆರೆ, ರಾಷ್ಟ್ರಪತಿ ಆಡಳಿತ ಜಾರಿ

ನವದೆಹಲಿ : ಕಳೆದ 15 ದಿನಗಳಿಂದ ಸಂವಿಧಾನಿಕ ಬಿಕ್ಕಟ್ಟು ತಲೆದೋರಿದ್ದ ಮಣಿಪುರದಲ್ಲಿ ಕೇಂದ್ರ ಸಂಪುಟದ ಶಿಫಾರಸ್ಸಿನಂತೆ ರಾಷ್ಟ್ರಪತಿ ಆಡಳಿತವನ್ನು ಶನಿವಾರ ರಾತ್ರಿಯಿಂದಲೇ ಹೇರಲಾಗಿದ್ದು , ವಿಧಾನಸಭೆಯನ್ನು ಅಮಾನತ್ತಿನಲ್ಲಿಡಲಾಗಿದೆ.

ಶನಿವಾರ ರಾತ್ರಿ ಸಭೆ ಸೇರಿದ್ದ ಕೇಂದ್ರ ಸಚಿವ ಸಂಪುಟ ಮಣಿಪುರದಲ್ಲಿ ರಾಷ್ಟ್ರಪತಿಗಳ ಆಳ್ವಿಕೆಯನ್ನು ಹೇರುವಂತೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಲು ನಿರ್ಧರಿಸಿತು. ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಸಂಬಂಧಿಸಿದ ವಿಧಿ ವಿಧಾನಗಳಿಗೆ ಎರಡು ತಿಂಗಳೊಳಗೆ ಸಂಸತ್ತಿನ ಅನುಮೋದನೆ ಪಡೆಯಲಾಗುವುದು ಎಂದು ದೆಹಲಿ ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ಪ್ರಧಾನಿ ವಾಜಪೇಯಿ ಅವರ ನಿವಾಸದಲ್ಲಿ ಜರುಗಿದ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ಸಚಿವ ಜಸ್ವಂತ್‌ ಸಿಂಗ್‌ ಅವರು, ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಲು ಸಂಪುಟ ಸಭೆ ನಿರ್ಧರಿಸಿದೆ ಎಂದು ಹೇಳಿದರು.

ಮಣಿಪುರದಲ್ಲಿನ ಸಮತಾ ನೇತೃತ್ವದ ಪಿಡಿಎಫ್‌ ಸರ್ಕಾರವನ್ನು ಮಿತ್ರಪಕ್ಷವಾದ ಬಿಜೆಪಿ ಸದಸ್ಯರೇ ಉರುಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ತದನಂತರದ ರಾಜಕೀಯ ದೊಂಬರಾಟಗಳಿಂದಾಗಿ ರಾಜ್ಯಪಾಲ ವೇದ್‌ಪ್ರಕಾಶ್‌ ಮಾರ್ವಾ, ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಗೃಹ ಸಚಿವ ಅದ್ವಾನಿ ಅವರಿಗೆ ವರದಿ ಕಳುಹಿಸಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+