Get Updates
Get notified of breaking news, exclusive insights, and must-see stories!

ಹೊಗೆ ಉಗುಳುವ ಸರ್ಕಾರಿ ಬಸ್ಸಿಗೆ ಜೂನ್‌ 5 ರಿಂದ ಕಡಿವಾಣ

ಬೆಂಗಳೂರು : ವಿಶ್ವ ಪರಿಸರ ದಿನವಾದ ಜೂನ್‌ 5 ರಿಂದ ರಾಜ್ಯದ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಸರ್ಗಕ್ಕೆ ಇನ್ನಷ್ಟು ಹತ್ತಿರವಾಗಲಿವೆ. ಯಥೇಷ್ಟ ಹೊಗೆ ಉಗುಳುತ್ತಾ ಸಾಗುವ ಬಸ್‌ಗಳನ್ನೆಲ್ಲಾ ಹದ್ದು ಬಸ್ತಿನಲ್ಲಿಡುವ ಕಾರ್ಯ ಅಂದಿನಿಂದ ಕಟ್ಟು ನಿಟ್ಟಾಗಿ ಆರಂಭಿಸಲಿದೆ.

ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಸಾರಿಗೆ ಸಚಿವ ಸಗೀರ್‌ ಅಹ್ಮದ್‌ ಅವರು 12 ಸಾವಿರಕ್ಕೂ ಹೆಚ್ಚು ಕೆಎಸ್‌ಆರ್‌ ಟಿಸಿ ಬಸ್‌ಗಳನ್ನು ನೀಟಾಗಿ ಪರಿಶೀಲಿಸಿ, ಅನುಮತಿಯ ಗುರುತಿಗಾಗಿ ಅವುಗಳ ಮೇಲೆ ಸ್ಟಿಕ್ಕರ್‌ ಒಂದನ್ನು ಅಂಟಿಸಿದ ನಂತರವೇ ಬಸ್‌ ಸ್ಟ್ಯಾಂಡಿನಿಂದ ಹೊರಗೆ ಬಿಡಲಾಗುವುದು.

ಉಸಿರ ಕೊಲ್ಲುವ ಹೊಗೆಯನ್ನು ಕಡಿಮೆ ಮಾಡುವುದಕ್ಕೋಸ್ಕರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರಯಾಣಿಕರ ದೂರುಗಳಿಗೆ ಮೊದಲ ಆದ್ಯತೆ ಕೊಡಲಾಗುವುದು. ನಿಮ್ಮ ಯಾವುದೇ ದೂರುಗಳನ್ನು ಸಲಹಾ ಪೆಟ್ಟಿಗೆಯಲ್ಲಿ ಹಾಕಿದಲ್ಲಿ ಅದನ್ನು ಪರಿಶೀಲಿಸಲಾಗುವುದು. ಅಲ್ಲದೆ ದೂರ ಪ್ರಯಾಣದ ಮಾರ್ಗದಲ್ಲಿ ‘ಪಿ. ಸಿರೀಸ್‌ - 5000’ ದರ್ಜೆಯ ಬಸ್‌ಗಳನ್ನು ಹಾಕಲಾಗುವುದು. ಪ್ರಯಾಣಿಕರ ಸೀಟಿನ ಪಕ್ಕ ದಿನ ಪತ್ರಿಕೆ, ಕುಡಿಯುವ ನೀರಿನ ಬಾಟಲಿ ಮತ್ತು ಫ್ಯಾನು ಲೈಟ್‌ಗಳನ್ನು ಆಳವಡಿಸಲಾಗುವುದು ಎಂದು ಸಚಿವರು ವಿವರಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಧಾಭಾ ಸ್ಥಾಪಿಸುವ ಮರು ನಿರ್ಧಾರ

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಕೆಲವು ಪ್ರಮುಖ ತಾಲ್ಲೂಕು ಕೇಂದ್ರಗಳಲ್ಲಿ ಬಸ್‌ ನಿಲ್ದಾಣವನ್ನು ಉತ್ತಮ ದರ್ಜೆಗೇರಿಸುವ ಯೋಜನೆಯಿದ್ದು, ಗುಜರಾತಿನ ಕಂಪೆನಿಯಾಂದು ಈ ಗುತ್ತಿಗೆ ವಹಿಸಿಕೊಳ್ಳಲಿದೆ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಧಾಭಾ ಅಥವಾ ಹೋಟೆಲ್‌ಗಳನ್ನು ನಿರ್ಮಿಸುವ ಕಾರ್ಯವನ್ನು ಈ ಬಾರಿ ಕೈಗೆತ್ತಿಕೊಳ್ಳಲಾಗುವುದು. ಆ ಪ್ರಕಾರ ಮಂಗಳೂರು, ಕೋಲಾರ, ಬಳ್ಳಾರಿ, ಮೈಸೂರು ಮತ್ತು ತುಮಕೂರುಗಳಲ್ಲಿ ಧಾಭಾ ತೆರೆಯಲಾಗುವುದು ಎಂದು ಹೇಳಿದ ಸಚಿವರು ಕಳೆದ ವರ್ಷದ ಯೋಜನೆಗಳನ್ನು ಈ ವರ್ಷವೂ ಪುನರುಚ್ಛರಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+