ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್‌ನಲ್ಲಿ ಕಂಚಿ ಶ್ರೀಗಳಿಂದ ಐತಿಹಾಸಿಕ ಚೀನಾ ಭೇಟಿ

By Staff
|
Google Oneindia Kannada News

ಉಡುಪಿ : ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಜಯೇಂದ್ರ ಸ್ವಾಮೀಜಿ ಬರುವ ಅಕ್ಟೋಬರ್‌ನಲ್ಲಿ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. 52 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭಾರತದ ಪ್ರಮುಖ ಧಾರ್ಮಿಕ ನಾಯಕರೊಬ್ಬರು ಕೈಗೊಳ್ಳುತ್ತಿರುವ ಚೀನಾ ಪ್ರವಾಸ ಇದಾಗಿದೆ.

ಬೀಜಿಂಗ್‌ನಲ್ಲಿ ಚೀನಾದ ಉನ್ನತ ನಾಯಕರನ್ನು ಸ್ವಾಮೀಜಿ ಭೇಟಿಯಾಗಲಿದ್ದು , ಅವರು ಚೀನಾದ ಅತಿಥಿಯಾಗಿ ಅಲ್ಲಿಗೆ ತೆರಳುತ್ತಿದ್ದಾರೆ ಎಂದು ಉನ್ನತ ಮೂಲಗಳನ್ನುಲ್ಲೇಖಿಸಿ ಭಾನುವಾರ ಯುಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸ್ವಾಮೀಜಿ ಹಾಗೂ ಅವರೊಂದಿಗಿನ 15 ಮಂದಿಯ ನಿಯೋಗದ ಚೀನಾ ಭೇಟಿ ಉಭಯ ದೇಶಗಳ ನಡುವಣ ಸಂಬಂಧ ಸುಧಾರಣೆಗೆ ಸಹಕಾರಿಯಾಗುತ್ತದೆ ಎಂದು ಚೀನಾ ಅಸೋಸಿಯೇಷನ್‌ ಫಾರ್‌ ಇಂಟರ್‌ನ್ಯಾಶನಲ್‌ ಫ್ರೆಂಡ್ಲಿ ಕಾನ್ಟ್ಯಾಕ್ಟ್‌ (ಸಿಎಐಎಫ್‌ಸಿ) ಹೇಳಿದೆ.

ಸ್ವಾಮೀಜಿಯವರು ನೆರೆಯ ದೇಶದ ಸೌಹಾರ್ದತೆಯ ರಾಯಭಾರಿಗಳಾಗಿದ್ದು , ಕಳೆದ ಸಾವಿರ ವರ್ಷಗಳ ಇತಿಹಾಸದಲ್ಲಿ ಚೀನಾ ಸ್ನೇಹ ಸಹಕಾರಕ್ಕೆ ಹೆಸರಾಗಿದೆ ಎಂದು ಸಿಎಐಎಫ್‌ಸಿ ತಿಳಿಸಿದೆ. ಕಳೆದ ನವಂಬರ್‌ನಲ್ಲಿ ಮಣಿಪಾಲ್‌ನಲ್ಲಿ ಉಭಯ ದೇಶಗಳ ಬುದ್ಧಿಜೀವಿಗಳು, ಶಿಕ್ಷಣ ತಜ್ಞರು ಹಾಗೂ ರಕ್ಷಣಾ ತಜ್ಞರ ನಡುವೆ ನಡೆದ ಮಾತುಕತೆಯ ಮುಂದುವರಿದ ಭಾಗ ‘ಇಂಡೋ- ಚೀನಾ ಟ್ರಾಕ್‌- 2’, ಸ್ವಾಮೀಜಿಯವರ ಚೀನಾ ಭೇಟಿಯಲ್ಲಿ ಸಾಧ್ಯವಾಗುತ್ತದೆ. ಇದರಿಂದಾಗಿ ಭಾರತ- ಚೀನಾ ದೇಶಗಳ ನಡುವಣ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳು ಬಲಗೊಳ್ಳಲು ಸಹಾಯಕವಾಗುತ್ತದೆ.

ಸ್ವಾಮೀಜಿ ಭೇಟಿಗೆ ವ್ಯಾಪಕ ಸಿದ್ಧತೆ- ಅಧ್ಯಕ್ಷರ ಭೇಟಿ ಸಂಭವ

ಅಕ್ಟೋಬರ್‌ 10 ರಂದು ಬೀಜಿಂಗ್‌ಗೆ ವಿಶೇಷ ವಿಮಾನದಲ್ಲಿ ತೆರಳುವ ಸ್ವಾಮೀಜಿ, 13 ರಂದು ಷಾಂಗಾೖಗೆ ತೆರಳುವರು. ಹನ್‌ಝೂ ಪ್ರದೇಶಕ್ಕೂ ಭೇಟಿ ಕೊಡುವ ಸ್ವಾಮೀಜಿ, ಅಲ್ಲಿನ ಪುರಾತನ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವರು. ಅಕ್ಟೋಬರ್‌ 17 ರಂದು ಸ್ವಾಮೀಜಿ ಭಾರತಕ್ಕೆ ವಾಪಸ್ಸಾಗುವರು. ಚೀನಾದಲ್ಲಿನ ಭಾರತದ ರಾಯಭಾರಿ ಶಿವಶಂಕರ ಮೆನನ್‌ ಸ್ವಾಮೀಜಿಯವರ ಭೇಟಿಯ ಕಾಲದ ಕಾರ್ಯಕ್ರಮಗಳ ಬಗೆಗೆ ಮುತುವರ್ಜಿ ವಹಿಸಿದ್ದಾರೆ. ಚೀನಾ ಪಾರ್ಲಿಮೆಂಟಿನ ಅಧ್ಯಕ್ಷ ಲೀ ಪೆಂಗ್‌ ಹಾಗೂ ಪ್ರಧಾನಿ ಝೂ ರೋನ್ಜಿ ಕೂಡ ಕಂಚಿ ಶ್ರೀಗಳನ್ನು ಭೇಟಿ ಮಾಡುವ ಸಂಭವವಿದೆ.

ಬಾಂಗ್ಲಾ ಹಾಗೂ ನೇಪಾಳಗಳಿಗೆ ಭೇಟಿ ಕೊಟ್ಟಿರುವ ಅನುಭವವನ್ನು ಹೊಂದಿರುವ ಸ್ವಾಮೀಜಿ, ಯಾವತ್ತೂ ಸನ್ಯಾಸದ ಸಂಪ್ರದಾಯಗಳನ್ನು ಮೀರಿದವರಲ್ಲ . ಸಮುದ್ರವನ್ನು ದಾಟಬಾರದೆನ್ನುವ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸಿರುವ ಸ್ವಾಮೀಜಿಯವರಿಗೆ ಚೀನಾದಲ್ಲಿ ಶುದ್ಧ ನೀರು ಹಾಗೂ ತಾಜಾ ಹಸುವಿನ ಹಾಲು ಪೂರೈಕೆಗೆ ಸಿದ್ಧತೆಗಳನ್ನು ನಡೆಸಲಾಗಿದೆ. ಶ್ರೀಗಳ ಆಹಾರ ತಯಾರಿಕೆಗೆ ಅವರ ಖಾಸಾ ಬಾಣಸಿಗರಿದ್ದಾರೆ.

ಅಮೇರಿಕಾ, ಇಂಗ್ಲೆಂಡ್‌, ಹಾಂಗ್‌ಕಾಂಗ್‌, ನೇಪಾಳ, ದಕ್ಷಿಣ ಆಫ್ರಿಕಾ ಸೇರಿದಂತೆ ಪ್ರಪಂಚದ ವಿವಿಧ ದೇಶಗಳ ಸುಮಾರು 75 ಶಂಕರಾಚಾರ್ಯರ ಅನುಯಾಯಿಗಳು ಚೀನಾ ಭೇಟಿಯಲ್ಲಿ ಶ್ರೀಗಳೊಂದಿಗಿರುವರು. ಚೀನಾ ಪ್ರವಾಸದಲ್ಲಿ ಉನ್ನತ ಬೌದ್ಧ ಗುರುಗಳನ್ನು ಕಂಚಿ ಶ್ರೀಗಳು ಭೇಟಿಯಾಗುವ ಕಾರ್ಯಕ್ರಮವಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X