Get Updates
Get notified of breaking news, exclusive insights, and must-see stories!

2001- 02ರಲ್ಲಿ ಇನ್‌ಫೋಸಿಸ್‌ 2000 ಮಂದಿಗೆ ಕೆಲಸ ನೀಡಲಿದೆ

Narayanamurthyಬೆಂಗಳೂರು : ವಿಶ್ವದ ಹಣಕಾಸು ವ್ಯವಸ್ಥೆ ಏರುಮುಖವಾಗಿ ಚಲಿಸಲು ಆರಂಭಿಸುವ ಸಂದರ್ಭದ ಸಂಪೂರ್ಣ ಲಾಭ ಪಡೆಯಲು ಉದ್ದೇಶಿಸಿರುವ ಇನ್‌ಫೋಸಿಸ್‌ 2002ನೇ ಸಾಲಿನಲ್ಲಿ 80 ದಶಲಕ್ಷ ಡಾಲರ್‌ ಹೆಚ್ಚುವರಿ ಬಂಡವಾಳ ಹೂಡಲು ನಿರ್ಧರಿಸಿದೆ.

ಸಂಸ್ಥೆಯ 20ನೇ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ನಾರಾಯಣ ಮೂರ್ತಿ ಅವರು ಈ ವಿಷಯ ತಿಳಿಸಿದ್ದಾರೆ. ಸಂಸ್ಥೆಯಿಂದ ಯಾವುದೇ ನೌಕರರನ್ನೂ ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟೀಕರಣ ನೀಡಿರುವ ಅವರು, ಈ ಹಣಕಾಸು ವರ್ಷದಲ್ಲೇ 1500ರಿಂದ 2000 ತಜ್ಞರನ್ನು ತಮ್ಮ ಸಂಸ್ಥೆಗೆ ನೇಮಕ ಮಾಡಿಕೊಳ್ಳುವ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಸಂಸ್ಥೆಯ ನಿಜವಾದ ಆಸ್ತಿ, ಅದರ ತಜ್ಞ ಸಿಬ್ಬಂದಿ ಎಂದೂ ಅವರು ಹೇಳಿದ್ದಾರೆ. ಈ ಮಧ್ಯೆ ಸಂಸ್ಥೆಯ ಶೇರುಗಳ ದರ ಮಾರುಕಟ್ಟೆಯಲ್ಲಿ ಕುಸಿದಿದ್ದಾಗ್ಯೂ ಎಲ್ಲ ಶೇರುದಾರರೂ ಆಡಳಿತ ಮಂಡಳಿಯ ಬಗ್ಗೆ ಸಂಪೂರ್ಣ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತೀಯ ಕಂಪನಿಗಳು ಜಾಗತಿಕ ಮಾರುಕಟ್ಟೆಯ ಸ್ಪರ್ಧೆಯನ್ನು ಎದುರಿಸಬೇಕಾದರೆ, ಅವುಗಳಿಗೂ ಅಮೆರಿಕಾ ಕಂಪನಿಗಳಂತೆಯೇ ತಮ್ಮ ನೌಕರರ ಸಂಖ್ಯೆಯನ್ನು ಕಡಿತಗೊಳಿಸುವ ಹಾಗೂ ಉತ್ಪಾದನೆ ನಿಲ್ಲಿಸುವ ಸ್ವಾತಂತ್ರ್ಯ ಇರಬೇಕು ಎಂದು ಇತ್ತೀಚೆಗಷ್ಟೇ ಅಮೆರಿಕೆಯಲ್ಲಿ ಪ್ರತಿಪಾದಿಸಿದ್ದ ಇನ್‌ಫೋಸಿಸ್‌ ಅಧ್ಯಕ್ಷ ನಾರಾಯಣ ಮೂರ್ತಿ ಅವರು, ಪ್ರಸಕ್ತ ಹಣಕಾಸು ವರ್ಷದಲ್ಲಿ 1500ರಿಂದ 2000 ತಂತ್ರಜ್ಞರನ್ನು ನೇಮಿಸಿಕೊಳ್ಳುವ ಮಾತನಾಡಿರುವುದು ತಜ್ಞರನ್ನು ನಿಬ್ಬೆರಗು ಗೊಳಿಸಿದೆ.

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+