ಮಹಾವೀರ ಜೈನ್ ಕೇಂದ್ರದಿಂದ ಅಪರೂಪದ ಹೃದಯ ಶಸ್ತ್ರ ಚಿಕಿತ್ಸೆ
ಬೆಂಗಳೂರು : ಹೃದಯ ಬಡಿತ ಏಕಾಏಕಿ ನಿಂತು ಸಾವು ಸಂಭವಿಸುವುದನ್ನು ತಡೆಯುವ ಪುಟ್ಟ ಯಂತ್ರವೊಂದನ್ನು ಅಳವಡಿಸುವ ಶಸ್ತ್ರಚಿಕಿತ್ಸೆಯನ್ನು ನಗರದ ಭಗವಾನ್ ಮಹಾವೀರ ಜೈನ್ ಕೇಂದ್ರ ಯಶಸ್ವಿಯಾಗಿ ನೆರವೇರಿಸಿದೆ. ಇದು ತೀರಾ ಅಪರೂಪದ ಶಸ್ತ್ರ ಚಿಕಿತ್ಸೆಯಾಗಿದ್ದು , ಈವರೆಗೆ ದೇಶದಲ್ಲಿ ಈ ಬಗೆಯ ಸುಮಾರು 120 ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಹಠಾತ್ ಹೃದಯ ನಿಲ್ಲುವುದರಿಂದ ದೇಶದಲ್ಲಿ ಪ್ರತಿವರ್ಷ 10 ಲಕ್ಷ ಮಂದಿ ಸಾಯುತ್ತಿದ್ದಾರೆ. ಈ ರೀತಿಯ ಸಮಸ್ಯೆ ಹೊಂದಿರುವ ರೋಗಿಗಳಿಗೆ ಇಂಪ್ಲಾಂಟೇಬಲ್ ಕಾರ್ಡಿಯಾ ಡಿಫಿಬ್ರಿಲೇಟರ್ಸ್ (ಐಸಿಡಿ) ಅಳವಡಿಸಲಾಗುವುದು. ಹೃದಯ ಬಡಿತದ ವ್ಯತ್ಯಾಸಗಳನ್ನು ತಕ್ಷಣ ಗ್ರಹಿಸುವ ಈ ಯಂತ್ರ, ಅ ವ್ಯತ್ಯಾಸಗಳನ್ನು ತಕ್ಷಣ ಸರಿಪಡಿಸುತ್ತಿದೆ. ಈ ಕುರಿತು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಕತ್ತಿನ ಎಲುಬಿನ ಬಳಿ ಸುಮಾರು ನಾಲ್ಕು ಅಂಗುಲ ಕುಯ್ದು , 5 ಮಿಮೀ ಅಳತೆಯ ತೆಳುವಾದ ತಂತಿಯನ್ನು ಒಳಗೆ ಸೇರಿಸಿ ಅದರ ತುದಿಯನ್ನು ಹೃದಯದಲ್ಲಿ ಅಳವಡಿಸಲಾಗುವುದು. ಮತ್ತೊಂದು ತುದಿಯ ತಂತಿಯನ್ನು ಐಸಿಡಿಗೆ ಜೋಡಿಸಲಾಗುವುದು. ಐಸಿಡಿಯ ಕಾರ್ಯ ನಿರ್ವಹಣೆ ಪರಿಶೀಲಿಸಿದ ನಂತರ ಕತ್ತರಿಸಿದ ಭಾಗವನ್ನು ಹೊಲಿಗೆ ಹಾಕಿ ಮುಚ್ಚಲಾಗುವುದು ಎಂದು ಐಸಿಡಿ ಅಳವಡಿಸುವ ಶಸ್ತ್ರಚಿಕಿತ್ಸೆ ಯ ಬಗೆಗೆ ಆಸ್ಪತ್ರೆಯ ಪ್ರಕಟಣೆ ವಿವರಗಳನ್ನು ತಿಳಿಸಿದೆ. ಅಂದಹಾಗೆ, ಭಗವಾನ್ ಮಹಾವೀರ ಜೈನ್ ಹೃದಯ ಕೇಂದ್ರ ನಡೆಸಿರುವ ಶಸ್ತ್ರಚಿಕಿತ್ಸೆ ಸಾಹಸದಲ್ಲಿ ವೈದ್ಯರುಗಳಾದ ಡಾ.ಎಸ್. ಎಸ್. ರಮೇಶ್, ಡಾ. ಆರ್. ಕೇಶವ್ ಹಾಗೂ ಡಾ. ಗಣೇಶ ನಾಯಕ್ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications