ಕಡಲಿಗೊಡ್ಡಿದ ಉಳ್ಳಾಲಭಯದಲ್ಲಿ ಜೀವಜಾಲ
*ರಾಜು ಮಹತಿ
ಉಳ್ಳಾಲ : ಉಳ್ಳಾಲದಲ್ಲಿನ ಕಡಲು ಕೊರೆತ ತಡೆಗೆ ವೇದಿಕೆಗಳಲ್ಲಿ ಭಾಷಣದ ಹೊರತಾಗಿ ಯಾವುದೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿರುವುದು ಗೋಚರಿಸುವುದಿಲ್ಲ . ಇದರಿಂದಾಗಿ ಕಡಲ ಕೊರೆತವೆನ್ನುವುದು ಉಳ್ಳಾಲದ ಮಂದಿಗೆ ಪ್ರತಿ ವರ್ಷ ಎದುರಾಗುವ ಜೀವನ್ಮರಣ ಸಮಸ್ಯೆಯಾಗಿ ಪರಿಣಮಿಸಿದೆ.
ಉಳ್ಳಾಲದ ಕಡಲ ಕೊರೆತ ತಡೆಗೆ ಕೃಷ್ಣ ಸರ್ಕಾರ ಸೇರಿದಂತೆ ಈವರೆಗೆ ಕರ್ನಾಟಕ ಕಂಡ ಎಲ್ಲ ಸರ್ಕಾರಗಳೂ ಬರಿ ಮಾತಲ್ಲೇ ಕೆಲಸ ಮುಗಿಸಿ ಹೋಗಿವೆ. ಪರಿಣಾಮ ನೋಡಿ- ಸರಕಾರದ ಈ ನಿರ್ಲಕ್ಷ್ಯವನ್ನು ಪುಷ್ಟೀಕರಿಸಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆ, ಉಳ್ಳಾಲದ ನಿವಾಸಿಗಳಿಗೆ ಈ ಮಳೆಗಾಲವೂ ಮನೆ ಬಿಟ್ಟು ಬೇರೆಡೆ ವಾಸಿಸುವ ಆದೇಶ.
ಹವಾಮಾನ ಇಲಾಖೆಯ ಪ್ರಕಾರ ಈ ವರ್ಷ ಕರಾವಳಿಯಲ್ಲಿ ಯಥೇಷ್ಟ ಮಳೆ ಬೀಳಲಿದೆ. ಜೊತೆಗೆ ಸಾಕಷ್ಟು ಬಿರುಗಾಳಿ ಬೀಸುವ ಸಂಭವಗಳೂ ಇರುವುದರಿಂದ ಉಳ್ಳಾಲದ ಮತ್ತಷ್ಟು ಪ್ರದೇಶ ಈ ವರ್ಷ ಕಡಲ ಕೊರೆತಕ್ಕೆ ಬಲಿಯಾಗಲಿದೆ. ಆದ್ದರಿಂದ ಅಲ್ಲಿರುವ ಎಲ್ಲ ಮನೆಗಳು ಗಂಟು ಮೂಟೆ ಕಟ್ಟಿಕೊಂಡು ತಕ್ಷಣವೇ ಅಲ್ಲಿಂದ ಜಾಗ ಖಾಲಿ ಮಾಡಬೇಕು ಎಂದು ಜಿಲ್ಲಾಧಿಕಾರಿ, ತಾಲ್ಲೂಕು ಆಯುಕ್ತರು ಮತ್ತು ತಹಸೀಲ್ದಾರರು ಸಂಯುಕ್ತವಾಗಿ ಉಳ್ಳಾಲ ನಿವಾಸಿಗಳನ್ನು ಎಚ್ಚರಿಸಿದ್ದಾರೆ. ಅದು ಮರಣ ಶಾಸನವಾದ್ದರಿಂದ ಉಳ್ಳಾಲ ನಿವಾಸಿಗಳು ಈ ವರ್ಷದ ಮಳೆಗಾಲವನ್ನು ಕಡ್ಡಾಯವಾಗಿ ಅಲ್ಲಿನ ಟಿಪ್ಪು ಸುಲ್ತಾನ್ ಪ್ರಾಥಮಿಕ ಶಾಲೆಯಲ್ಲಿ ಕಳೆಯಬೇಕಾಗುತ್ತದೆ.
ಸರಕಾರ ಸೂಚಿಸಿರುವ ಸುರಕ್ಷಿತ ಪ್ರದೇಶ, ಟಿಪ್ಪು ಸುಲ್ತಾನ್ ಶಾಲೆಗೆ ತಕ್ಷಣವೇ ಗುಳೇ ಹೊರಡದೇ ಇರುವ ಕುಟುಂಬಗಳಿಗೆ, ಮಳೆ ಅಥವಾ ಕಡಲಕೊರೆತದಿಂದ ಏನಾದರೂ ಹಾನಿಯಾದಲ್ಲಿ ಸರಕಾರದಿಂದ ಚಿಕ್ಕಾಸು ಸಿಗುವುದಿಲ್ಲ ಎಂದು ಮುಂಚಿತವಾಗಿಯೇ ಹೇಳಿ ಸರಕಾರ ಕೈ ತೊಳೆದುಕೊಂಡಿದೆ.
ಸಮುದ್ರವನ್ನು ಬೇಡಿಕೊಳ್ಳೋಣ ಆಗದೇ ?
ಇದಿಷ್ಟು ಉಳ್ಳಾಲದ ಕತೆಯಾದರೆ ಉಡುಪಿಯ ಕೆಮ್ಮಣ್ಣು ಹೂಡೆ ಸಮುದ್ರ ತೀರದಲ್ಲಿ ಮೊದಲ ಮಳೆಗೇ 70 ತೆಂಗಿನ ಮರಗಳು ಬುಡಮೇಲಾಗಿವೆ. ರಸ್ತೆಗಳು ಕೊಚ್ಚಿಹೋಗಿವೆ. ಅನಾಹುತದ ಈ ಮುನ್ಸೂಚನೆಯನ್ನು ವೀಕ್ಷಿಸಲು ಬಂದಿದ್ದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಯಪ್ರಕಾಶ್ ಹೆಗ್ಗಡೆ ಸುಮಾರು 200 ಮನೆಗಳು ಕಡಲು ಕೊರೆತದಲ್ಲಿ ಕೊಚ್ಚಿಹೋಗುವ ಭೀತಿಯಿದೆ ಎಂದು ಹೇಳಿದ್ದಾರೆ.
ಕಡಲು ಕೊರೆತದ ಶಾಶ್ವತ ಪರಿಹಾರಕ್ಕೆ 141 ಕೋಟಿ ರೂಪಾಯಿಗಳಡಿಯಲ್ಲಿ ಸಿದ್ಧವಾದ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಕೇಂದ್ರದ ಅನುಮತಿ ಸಿಕ್ಕ ತಕ್ಷಣ ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭವಾಗುವುದು ಎಂದು ಅವರು ಹೇಳಿದ್ದಾರೆ.
ಈ ಎಲ್ಲ ಪ್ರಕ್ರಿಯೆಗಳು ಮುಗಿಯುವ ಅವಧಿಯಲ್ಲಿ ಕರಾವಳಿ ಕಡಲತಡಿಯಲ್ಲಿನ ತೆಂಗಿನ ಮರ ಮತ್ತು ಮನೆ ಮಠಗಳನ್ನು ಸಮುದ್ರ ನುಂಗದೇ ಇರಲಿ ಎಂದು ಸಮುದ್ರವನ್ನು ಬೇಡಿಕೊಳ್ಳೋಣ, ಆಗದೇ?
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications