Get Updates
Get notified of breaking news, exclusive insights, and must-see stories!

ದೀಪೇಂದ್ರ ಎನ್ನುವ ರಾಜಕುಮಾರ ಬಿಡುವಿನಲ್ಲಿ ಪದ್ಯ ಓದುತ್ತಿದ್ದನಂತೆ

ಕಠ್ಮಂಡು : ಅಪ್ಪ, ಅಮ್ಮ ಸೇರಿದಂತೆ ರಾಜ ಕುಟುಂಬದ ಸದಸ್ಯರನ್ನು ಗುಂಡಿಟ್ಟು ಕೊಂದು, ತಾನೂ ಗುಂಡಿಟ್ಟುಕೊಂಡ ಈ ದೀಪೇಂದ್ರ ಎನ್ನುವ ರಾಜಕುಮಾರನೆದೆಯಾಳಗೆ ಅದೆಂಥಾ ಸೇಡಿತ್ತು . ಆತನಿಗಿನ್ನೂ 30 ವರ್ಷ, ಮದುವೆಯಾಗಿಲ್ಲ . ಆದರೂ, ಮದುವೆ ಬಗೆಗೆ ಜಗಳದಿಂದಾಗಿ ಅಪ್ಪ ಅಮ್ಮನನ್ನು ಕೊಲ್ಲುವಂತಹ ಕ್ರೌರ್ಯ ಎದೆಯಾಳಗೆ ತುಂಬಿಕೊಂಡ ಈ ರಾಜಕುಮಾರನ ಹಿನ್ನೆಲೆಯಾದರೂ ಎಂಥಾದ್ದು -

1971 ರ ಜೂನ್‌ 21 ರಂದು ದೊರೆ ಬೀರೇಂದ್ರ ಹಾಗೂ ಮಹಾರಾಣಿ ಐಶ್ವರ್ಯಾರ ಚೊಚ್ಚಿಲ ಮಗನಾಗಿ ಜನಿಸಿದ ದೀಪೇಂದ್ರ, 1972 ರಲ್ಲೇ ದೊರೆಯ ಉತ್ತರಾಧಿಕಾರಿಯಾಗಿ ಪ್ರಕಟಿತಗೊಂಡ. 1990 ರಲ್ಲಿ ಆತನಿಗೆ ನೇಪಾಳ ಸೇನೆಯಲ್ಲಿ ಉನ್ನತಾಧಿಕಾರಿ ಹುದ್ದೆಯೂ ಸಿಕ್ಕಿತು. ಆಗ ಶುರುವಾದ ಬಂದೂಕು ಸಹವಾಸ ಸ್ವತಃ ಗುಂಡಿಕ್ಕಿಕೊಳ್ಳುವುದರೊಂದಿಗೆ ಕೊನೆಯಾಯಿತು.

ದೀಪೇಂದ್ರ ಮಹತ್ವಾಕಾಂಕ್ಷೆಯ ಮನುಷ್ಯ. ಸೈನ್ಯಾಧಿಕಾರಿಯಾಗಿ ನೇಮಕಗೊಂಡ ಎರಡೇ ವರ್ಷಗಳಲ್ಲಿ ದೊರೆಯ ಅನುಪಸ್ಥಿತಿಯಲ್ಲಿ ತನ್ನನ್ನು ತಾನೇ ರಾಯಲ್‌ ನೇಪಾಲ್‌ ಆರ್ಮಿಯ ಉನ್ನತಾಧಿಕಾರಿಯಾಗಿ ಘೋಷಿಸಿಕೊಂಡ. ನಿಮಗೆ ಚರಿತ್ರೆ ನೆನಪಾಗುತ್ತಿದೆಯಾ? ದೀಪೇಂದ್ರ ಕೂಡ ಈಗ ಚರಿತ್ರೆಯೇ. ಕಠ್ಮಂಡುವಿನ ಶಾಲೆಯಾಂದರಲ್ಲಿ ಅಕ್ಷರ ಕಲಿಕೆ, ಆನಂತರ ತಂದೆಯಂತೆ ಇಂಗ್ಲೆಂಡ್‌ನ ಎಟನ್‌ ಕಾಲೇಜಿಗೆ ಸೇರ್ಪಡೆ, ನೇಪಾಳ ವಿವಿಯಿಂದ ಜಿಯಾಗ್ರಫಿ ವಿಷಯದಲ್ಲಿ ಬಿಎ ಆನಂತರ ಎಂಎ ಪದವಿ- ಒಟ್ಟಿನಲ್ಲಿ ದೀಪೇಂದ್ರ ವಿದ್ಯಾವಂತ.

ಔಪಚಾರಿಕ ವಿದ್ಯಾಭ್ಯಾಸದ ನಂತರ, ನೇಪಾಳ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದ. ಅಪ್ಪನಂತೆ ತಾನೂ ಹೆಲಿಕ್ಯಾಪ್ಟರ್‌ ಹಾರಿಸಲು ಪರವಾನಗಿ ಪಡೆದ. ನೇಪಾಳ ಕ್ರೀಡಾ ಪ್ರಾಧಿಕಾರಕ್ಕಾಗಿ ದುಡಿದಿದ್ದ ದೀಪೇಂದ್ರ ಏಷ್ಯಾ- ಯುರೋಪ್‌ಗಳನ್ನು ಲೋಕಾನುಭವಕ್ಕಾಗಿ ಸುತ್ತಿದ್ದ .

1993 ರಲ್ಲಿ ‘ದಿ ರೈಸಿಂಗ್‌ ನೇಪಾಳ್‌’ ಹಾಗೂ ‘ಗೂರ್ಖಪಾತ್ರ’ ಪತ್ರಿಕೆಗಳಿಗಾಗಿ ನೀಡಿದ ಸಂದರ್ಶನವೊಂದರಲ್ಲಿ ‘ಎಲ್ಲಿಯವರೆಗೆ ಜನತೆ ಸಂವಿಧಾನಬದ್ಧ ವಾಗಿ ತಮ್ಮ ಕೆಲಸಗಳನ್ನು ನಿರ್ವಹಿಸಿಕೊಂಡು ಹೋಗುತ್ತಾರೋ, ಎಲ್ಲಿಯವರೆಗೆ ನೆಲದ ಕಾನೂನಿಗೆ ಬದ್ಧರಾಗಿರುತ್ತಾರೋ ಅಲ್ಲಿಯವರೆಗೆ ಯಾವುದೇ ಸಮಸ್ಯೆಗಳು ಉದ್ಭವಿಸುತ್ತವೆಂದು ನನಗನಿಸುವುದಿಲ್ಲ ’ ಎಂದು ದೀಪೇಂದ್ರ ಹೇಳಿದ್ದ. ತಮ್ಮ ಮಾತುಗಳನ್ನು ತಾನೇ ಮುರಿದ ದೀಪೇಂದ್ರ, ಶಿಕ್ಷೆಯನ್ನೂ ತಾವೇ ವಿಧಿಸಿಕೊಂಡಿದ್ದಾನೆ.

ವಿಮಾನಗಳನ್ನು ಹಾರಿಸುವುದು, ಈಜುವುದು, ನೇಪಾಳಿ ಜಾನಪದ ಸಂಗೀತ ಕೇಳುವುದು ಹಾಗೂ ಪಾಶ್ಚಾತ್ಯ- ಶಾಸ್ತ್ರೀಯ ಸಂಗೀತ ಆಲಿಸುವುದು ರಾಜಕುಮಾರನಿಗೆ ಇಷ್ಟದ ಸಂಗತಿಗಳಾಗಿದ್ದವು. ಎಲೆಕ್ಟ್ರಾನಿಕ್‌ ಪಿಯಾನೊ ಮತ್ತು ಗಿಟಾರ್‌ ಬಾರಿಸುವುದರಲ್ಲೂ ಅವನಿಗಿಷ್ಟ . ಅಂದಹಾಗೆ, ಬಿಡುವಿನ ಸಮಯದಲ್ಲಿ , ರಾಜಭವನದ ಗದ್ದಲದ ನಡುವೆಯೂ ದೀಪೇಂದ್ರ ‘ಪದ್ಯ’ ಓದುತ್ತಿದ್ದನಂತೆ!

(ಎಎಫ್‌ಪಿ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+