ನೇಪಾಳ ದೊರೆ ಬೀರೇಂದ್ರ- ರಾಣಿ ಐಶ್ವರ್ಯ ಮಗನಿಂದಲೇ ಕಗ್ಗೊಲೆ
ಕಠ್ಮಂಡು : ನೇಪಾಳದ ದೊರೆ ಬೀರೇಂದ್ರ(55) ಹಾಗೂ ಅವರ ಪತ್ನಿ ಐಶ್ವರ್ಯ(52) ತಮ್ಮ ಪುತ್ರ ರಾಜಕುಮಾರ ದೀಪೇಂದ್ರ(30) ಅವರಿಂದಲೇ ಶುಕ್ರವಾರ ರಾತ್ರಿ ಕಗ್ಗೊಲೆಗೀಡಾಗಿದ್ದಾರೆ. ರಾಜ ಕುಟುಂಬಕ್ಕೆ ಸೇರಿದ ಇತರ ಕನಿಷ್ಠ 11 ಮಂದಿಯನ್ನು ಕೂಡ ಶುಕ್ರವಾರ ರಾತ್ರಿ ದೀಪೇಂದ್ರ ಕಠ್ಮಂಡುವಿನ ನಾರಾಯಣಹಿಟಿ ಅರಮನೆಯಲ್ಲಿ ಗುಂಡಿಟ್ಟು ಕೊಂದಿದ್ದಾರೆ.
ರಾಜಕುಮಾರ ನಿರಂಜನ ಮತ್ತು ರಾಜಕುಮಾರಿಯರಾದ ಶ್ರುತಿ, ಶಾರದಾ, ಶಾಂತಿ ಹಾಗೂ ಕುಮಾರ್ ಖಡ್ಗ ಚೌನಿ ಮಿಲಿಟರಿ ಆಸ್ಪತ್ರೆಯಲ್ಲಿ ಗುಂಡೇಟಿನ ಗಾಯಗಳಿಂದ ಕೊನೆಯುಸಿರೆಳೆದರೆಂದು ನೇಪಾಳಿ ಟೈಮ್ಸ್ ವರದಿ ಮಾಡಿದೆ. ದೀಪೇಂದ್ರ ಅವರ ಮದುವೆಗೆ ಸಂಬಂಧಿಸಿದ ಪೋಷಕರ ತಕರಾರಿನಿಂದ ಆತ ಈ ದುಷ್ಕೃತ್ಯವೆಸಗಿದ್ದಾನೆ ಎಂದು ನಂಬಲಾಗಿದೆ. ರಾಜಕುಮಾರನ ಆಯ್ಕೆಯ ವಧುವಿನ ಕುರಿತು ಮಹಾರಾಣಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಸೆಮಿ- ಆಟೋಮೆಟಿಕ್ ಗನ್ನಿಂದ ದೀಪೇಂದ್ರ ಈ ದುಷ್ಕೃತ್ಯವೆಸಗಿದ್ದಾನೆ ಎಂದು ವರದಿಗಳು ತಿಳಿಸಿವೆ. ಹೆಚ್ಚೂ ಕಡಿಮೆ ಕೋಮಾವಸ್ಥೆಯಲ್ಲಿದ್ದ ಆತ ಹುಚ್ಚಾಪಟ್ಟೆ ಗುಂಡು ಹಾರಿಸಿದ ಎನ್ನಲಾಗಿದೆ. ತನಗೆ ಕೂಡ ದೀಪೇಂದ್ರ ಗುಂಡು ಹಾರಿಸಿಕೊಂಡಿದ್ದು, ಗಾಯಗಳಿಂದಾಗಿ ದೀಪೇಂದ್ರ ಕೂಡ ನಿಧನ ಹೊಂದಿದ್ದಾನೆಂದು ಕೆಲವು ವರದಿಗಳು ತಿಳಿಸಿವೆ.
(ಐಎಎನ್ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications