ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಶಿಕ್ಷಣದ ಅವಧಿ 8 ವರ್ಷ

By Staff
|
Google Oneindia Kannada News

ಬೆಂಗಳೂರು : ಇನ್ನು ಮುಂದೆ ಪ್ರಾಥಮಿಕ ಶಿಕ್ಷಣ 8 ವರ್ಷಗಳು. ಪ್ರೌಢ ಶಿಕ್ಷಣ ಎರಡೇ ವರ್ಷ. ಅಖಿಲ ಭಾರತ ಮಾದರಿಯ ಈ ಪದ್ಧತಿ ಪ್ರಸಕ್ತ ವರ್ಷದಿಂದಲೇ ಜಾರಿಗೆ ಬರಲಿದೆ. ಗುರುವಾರ ನಡೆದ ಸಂಪುಟ ಸಭೆ ಈ ನಿರ್ಧಾರ ಕೈಗೊಂಡಿದೆ.

ಈವರೆಗೆ 2 ವರ್ಷಗಳ ಅವಧಿಯದಾಗಿದ್ದ ಮಾಧ್ಯಮಿಕ ಶಿಕ್ಷಣ ಇನ್ನು ಮುಂದೆ 3 ವರ್ಷಗಳದ್ದಾಗಿರುತ್ತದೆ. 5+3+ 2 ವರ್ಷಗಳ ಈ ಪದ್ಧತಿಯಲ್ಲಿ 9 ಮತ್ತು 10ನೇ ತರಗತಿ ಮಾತ್ರ ಪ್ರೌಢಶಾಲಾ ಶಿಕ್ಷಣವಾಗಿರುತ್ತದೆ. 8ನೇ ತರಗತಿ ಮಾಧ್ಯಮಿಕ ಶಿಕ್ಷಣದ ವ್ಯಾಪ್ತಿಗೆ ಸೇರಲಿದೆ.

ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾರ್ತಾ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್‌ ಈ ವಿಷಯ ತಿಳಿಸಿದರು. ವಿಜ್ಞಾನಿ ಡಾ. ರಾಜಾರಾಮಣ್ಣ ನೇತೃತ್ವದಲ್ಲಿ ರಚಿಸಲಾಗಿದ್ದ ಶಿಕ್ಷಣ ಕಾರ್ಯಪಡೆ ರಾಜ್ಯದಲ್ಲಿ ಈಗಿರುವ 4 +3+ 3 ಪದ್ಧತಿಯ ಬದಲಿಗೆ ಈ ಹೊಸ ಪದ್ಧತಿಯನ್ನು ಜಾರಿಗೆ ತರುವಂತೆ ಸಲಹೆ ಮಾಡಿತ್ತು ಎಂದು ಹೇಳಿದ ಅವರು ಪ್ರತಿಯಾಂದು ಗ್ರಾಮದಲ್ಲಿ ಕಡ್ಡಾಯವಾಗಿ ಪ್ರಾಥಮಿಕ ಶಾಲೆ ಇರಬೇಕು ಎಂದು ಕಾರ್ಯಪಡೆ ಮಾಡಿರುವ ಶಿಫಾರಸ್ಸನ್ನು ಸರಕಾರ ಒಪ್ಪಿಕೊಂಡಿರುವುದಾಗಿ ಹೇಳಿದರು.

ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವುದರಿಂದ ಈ ವರ್ಷ ಶಿಕ್ಷಕರ ಸಾರ್ವತ್ರಿಕ ವರ್ಗಾವಣೆಯನ್ನು ನಿಲ್ಲಿಸಲಾಗಿದೆ. ಅಲ್ಲದೆ ಇನ್ನೂ 15 ಸಾವಿರ ಶಿಕ್ಷಕರ ಅಗತ್ಯವಿರುವುದರಿಂದ ತಾಲ್ಲೂಕು ಮಟ್ಟದಲ್ಲಿ ನೇಮಕಾತಿ ಸಮಿತಿಗಳನ್ನು ರಚಿಸಲಾಗುವುದು ಎಂದು ಚಂದ್ರಶೇಖರ್‌ ವಿವರಿಸಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X