ಕ್ರಿಕೆಟ್ : ದಾಖಲೆ ಮೊತ್ತ ಚೆಲ್ಲಿ ಐಟಿಸಿ ಜಾಗೆಗೆ ಸಹಾರ
ನವದೆಹಲಿ : ತಂಬಾಕು ಉತ್ಪನ್ನಗಳ ಕಂಪನಿಗಳು ಕ್ರಿಕೆಟ್ಟಿಗೆ ಪ್ರಾಯೋಜನೆ ಮಾಡುವಂತಿಲ್ಲ ಎಂಬುದೇ ವರದಾನವಾಗಿದೆ. ಇನ್ನು 3 ವರ್ಷಗಳ ಕಾಲ ಕ್ರಿಕೆಟ್ಟಿನ ಪ್ರಾಯೋಜಕತ್ವ ವಹಿಸಿಕೊಂಡಿರುವ ಸಹರಾ ಕಂಪನಿಗಳ ಸಮೂಹ ಇದಕ್ಕಾಗಿ ಸಾರಾಸಗಟಾಗಿ 21 ಮಿಲಿಯನ್ ಡಾಲರ್ ಹರಿಸಲಿದೆ. ಅಂದಹಾಗೆ, ಇದು ದಾಖಲೆ ಮೊತ್ತ !
ಶುಕ್ರವಾರ ಮಾರುಕಟ್ಟೆಯ ತುಂಬೆಲ್ಲಾ ಇದೇ ಸುದ್ದಿ. ಎಕಾನಮಿಕ್ ಟೈಮ್ಸ್, ಬಿಜಿನೆಸ್ ವರ್ಲ್ಡ್‌ನಂಥಾ ಪತ್ರಿಕೆಗಳು ಶುಕ್ರವಾರ ಈ ಸುದ್ದಿಯನ್ನು ಪ್ರಕಟಿಸಿದ್ದೇ ತಡ, ಎಲ್ಲಾ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಈ ಹಿಂದೆ ಕ್ರಿಕೆಟ್ಟಿನ ಪ್ರಾಯೋಜಕತ್ವ ವಹಿಸಿದ್ದ ಐಟಿಸಿ ಕಂಪನಿ ಖರ್ಚು ಮಾಡಿದ್ದ ಹಣಕ್ಕಿಂತ ಪ್ರತಿಶತ 49 ರಷ್ಟು ಹೆಚ್ಚು ಹಣವಿದು. ಏರ್‌ಲೈನ್ಸ್, ಮೀಡಿಯಾ ಮತ್ತು ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿರುವ ಸಹಾರ, ಕ್ರಿಕೆಟ್ ಮೇಲೆ ಸುರಿಯುತ್ತಿರುವ ಈ ಮೊತ್ತ ನೆಸ್ಟ್‌ಲೇ ಹಾಗೂ ಬ್ರಿಟಾನಿಯಾದಂಥಾ ಕಂಪನಿಗಳು ಒಟ್ಟಾರೆ ಜಾಹೀರಾತಿನ ಮೇಲೆ ಮಾಡುತ್ತಿರುವ ಖರ್ಚಿಗಿಂತ ಅಧಿಕ.
ಕ್ರಿಕೆಟ್ಟಿಗೆ ಪಕ್ಕಾ ಪ್ರಾಯೋಜಕರನ್ನು ಹುಡುಕುವುದರಲ್ಲಿ ಎತ್ತಿದ ಕೈ ಎಂಬ ಕಾರಣಕ್ಕೆ ಟ್ರಾನ್ಸ್ ವರ್ಲ್ಡ್ ಇಂಟರ್‌ನ್ಯಾಷನಲ್ ಸಂಸ್ಥೆಗೆ ಈ ತಿಂಗಳು ಪ್ರಶಸ್ತಿಯೂ ಸಂದಿತ್ತು. ಪ್ರಶಸ್ತಿಯನ್ನು ಇದು ಸಹಾರ ಕಂಪನಿಯ ಜಾಹೀರಾತನ್ನು ಗೊತ್ತು ಪಡಿಸುವ ಮೂಲಕ ಈಗ ಸಮರ್ಥಿಸಿಕೊಂಡಿದೆ.
ಒಪ್ಪಂದದನ್ವಯ ಸಹಾರ ಕಂಪನಿಯ ಜಾಹೀರಾತುಗಳು ಕ್ರಿಕೆಟಿಗರ ಶರ್ಟು, ಕಿಟ್ ಬ್ಯಾಗ್‌ಗಳು, ಟ್ರ್ಯಾಕ್ ಸೂಟ್ ಮೇಲೆ ಇರುತ್ತವೆ. ಜೊತೆಗೆ 6 ಮಂದಿ ಕ್ರಿಕೆಟಿಗರನ್ನು ತನ್ನ ಜಾಹೀರಾತುಗಳ ಮಾಡೆಲ್‌ಗಳಾಗಿ ಕಂಪನಿ ಉಪಯೋಗಿಸಿಕೊಳ್ಳಲಿದೆ. ಭಾರತ ಜುಲೈನಲ್ಲಿ ಕೈಗೊಳ್ಳಲಿರುವ ಶ್ರೀಲಂಕಾ ಪ್ರವಾಸದಿಂದ ಸಹಾರ ಕಂಪನಿಯ ಜಾಹೀರಾತಿನ ಒಪ್ಪಂದ ಜಾರಿಗೆ ಬರಲಿದೆ.
(ಎಎಫ್‌ಪಿ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications