Get Updates
Get notified of breaking news, exclusive insights, and must-see stories!

ಮಳೆರಾಯನಿಗಿದು ಗೊತ್ತಿದೆಯಾ, ಜೂನ್‌ ಬಂದೇ ಬಿಟ್ಟಿದೆ !

ಬೆಂಗಳೂರು : ಪ್ರೆೃಮರಿ ಕ್ಲಾಸುಗಳಲ್ಲಿ ವರ್ಷಕ್ಕೆ ಕಾಲಗಳೆಷ್ಟು ಎಂದು ಉರು ಹೊಡೆಯುತ್ತಿದ್ದುದು ನೆನಪಿದೆಯಷ್ಟೆ . ಆ ಲೆಕ್ಕ ಪ್ರಕಾರ ಹೋದರೆ ಜೂನ್‌ ಒಂದಕ್ಕೆ ಮಳೆಗಾಲ ಆರಂಭವಾಗಬೇಕು. ಕರಾರುವಾಕ್ಕಾಗಿ ಮೇ 31ರಂದು ಬೇಸಿಗೆಯ ಬಾಗಿಲಿಗೆ ಬೀಗ ಜಡಿಯಬೇಕು.

ಆದರೆ ಹೇಗಾಗಿದೆ ನೋಡಿ. ಚಂಡಮಾರುತವೋ, ಇನ್ನೊಂದೋ ಕಾರಣ ಹೇಳಿಕೊಂಡು ಮಳೆ ಕರಾವಳಿಯನ್ನು ತಣ್ಣಗಾಗಿಸಿದೆ. ಉತ್ತರ ಕರ್ನಾಟಕ ಮಾತ್ರ ಎಂದಿನಂತೆ ಸೋನೆ ಮಳೆಗೆ ಕಾತರಿಸಿ, ಕಾದು ಬಾಯಾರಿದೆ. ಕಾಯುವಿಕೆಗೆ ಕೊನೆಯುಂಟಾ... ನಂಬಿಕೆಯನ್ನೆ ಗಟ್ಟಿಯಾಗಿ ತಬ್ಬಿಕೊಂಡು ಅವರು ಮಳೆಗೆ ಕಾಯುತ್ತಿದ್ದಾರೆ. ಮಳೆರಾಯನಿಗಿದು ಗೊತ್ತಿದೆಯಾ, ಜೂನ್‌ ಬಂದೇ ಬಿಟ್ಟಿದೆ !

ಜೂನ್‌ ನಾಲ್ಕಕ್ಕೆ ಮಾನ್‌ಸೂನ್‌ ಬಿಜಯಂಗೈಯ್ಯಲಿದೆ

ಮಳೆ ಮಹಾಶಯ ಬರುವ ದಾರಿಯನ್ನು ಯಾವ ಔಟ್‌ ಲೈನ್‌ನೊಳಗೂ ಸೇರಿಸಿಕೊಳ್ಳಲಾಗದೇ ಪರದಾಡುವ ನಾವು, ಚುಕ್ಕಿಗಳನ್ನೆಣಿಸಿ, ಗ್ರಹಗತಿಗಳ ತಾಳೆ ಹಾಕಿ ಜೂನ್‌ ಒಂದನೇ ತಾರೀಕಿಗೇ ಗಂಗಾವತರಣ ಎಂದು ಬರೆಯುವ ಜೋಯಿಸರು, ಮತ್ತೆ ಕ್ಯಾಲೆಂಡರಿನಲ್ಲಿ ಯಾವುದೋ ಮೂಲೆಯಲ್ಲಿ ಬರೆದಿಟ್ಟಿರುವ ಲೆಕ್ಕಾಚಾರದ ಮೇಲೆ ಬಿತ್ತನೆಗೆಂದು ಬೀಜ ನೆನೆಸುವ ರೈತ - ಎಲ್ಲರೂ ಮಳೆಗಾಲ ಬರುತ್ತಿರುವುದನ್ನು ಎದುರುನೋಡುತ್ತಿದ್ದಾರೆ.

ಈ ಕಾಯುವಿಕೆಯ ನಡುವೆ ‘ರಾಜ್ಯದ ಕೆಲವೆಡೆ ಹಗುರದಿಂದ ಭಾರೀ ಮಳೆ, ಬೆಂಗಳೂರಿನ ಸುತ್ತ ಮುತ್ತ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆ’ ಎಂದು ಆಕಾಶವಾಣಿಯಲ್ಲಿ ಕಳೆದ ಕೆಲ ದಿನಗಳಿಂದ ಉದ್ಘೋಷಕಿ ಉಲಿಯುತ್ತಲೇ ಇದ್ದಾಳೆ. ಸೋಮವಾರದ ಹೊತ್ತಿಗೆ ಬೆಂಗಳೂರು ತಂಪಾಗಿ ಮತ್ತೆ ‘ ಕೂಲ್‌ ಸಿಟಿ’ ಯಾಗಲಿದೆ. ಜೂನ್‌ ನಾಲ್ಕಕ್ಕೆ ಮಾನ್‌ಸೂನ್‌ ಬಿಜಯಂಗೈಯ್ಯಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ.

ಮಳೆಯ ಮನಸೇನಪ್ಪಾ ?

ಆದರೆ ಮಳೆಗೆ ಇದೆಲ್ಲಾ ಕೇಳಿಸುತ್ತಾ .. ಈ ಎಲ್ಲ ಮುನ್ನುಡಿಗಳನ್ನು ಕೇಳಿಕೊಂಡು ಮಳೆ ಸುರಿಯುತ್ತದಾ ಅಥವಾ ಮಳೆಯ ಮನಸು ತಿಳಿದು ಇವರೆಲ್ಲಾ ಲೆಕ್ಕ ಬರೆಯುತ್ತಾರಾ ?

ಏನೇ ಆಗಲಿ, ಬೋರ್‌ವೆಲ್‌ಗಳ ಮುಂದೆ ಸಾಲುಗಟ್ಟಿ ನಿಂತಿರುವ ಹೆಂಗಸರು, ಖಾಲಿ ಕೊಡಪಾನಗಳು, ಬಿರುಕು ಬಿಟ್ಟಿರುವ ಹೊಲ ಗದ್ದೆಗಳು, ಒಣಗುತ್ತಿರುವ ಪೈರುಗಳ ಬಗ್ಗೆ ಮಾತ್ರ ಮಳೆ ದೇವರಿಗೆ ಮುನಿಸು ಬಾರದಿರಲಿ. ಎಲ್ಲರ ಲೆಕ್ಕಾಚಾರದ ಗೆರೆಗಳ ನಡುವಿನ ಖಾಲಿಯಾಳಗೆ ತೂರಿಕೊಂಡು ಮಳೆ ಉತ್ತರ , ದಕ್ಷಿಣ ಕರ್ನಾಟಕದವರನ್ನು ತೊಯ್ಯಿಸಲಿ. ಎಲ್ಲರೆದೆಗಳೂ ಹಸಿರಾಗಲಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+