Get Updates
Get notified of breaking news, exclusive insights, and must-see stories!

ಮೆತ್ತಗಾದ ಮಮತಾ, ಎನ್‌ಡಿಎ ಜೊತೆಪುನರಪಿ ಕಲ್ಯಾಣ ಸನ್ನಿಹಿತ

ನವದೆಹಲಿ : ಪ್ರಧಾನಿ ವಾಜಪೇಯಿ ಹಾಗೂ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಯಾವುದೇ ಕ್ಷಣದಲ್ಲಿ ಭೇಟಿಯಾಗುವರೆಂದು ನಿರೀಕ್ಷಿಸಲಾಗಿದ್ದು , ಪ್ರಜಾಸತ್ತಾತ್ಮಕ ಒಕ್ಕೂಟವನ್ನು ಮಮತಾ ಬಣ ಕೂಡಿಕೊಳ್ಳುವ ಸಾಧ್ಯತೆಗಳು ಉಜ್ವಲವಾಗಿವೆ.

ವಾಜಪೇಯಿ ನೇತೃತ್ವದ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟಕ್ಕೆ ತೃಣಮೂಲ ಕಾಂಗ್ರೆಸ್‌ ಸೇರ್ಪಡೆಗೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕದಿರುವ ಮೂಲಕ, ಶೀಘ್ರವೇ ಎನ್‌ಡಿಎ ಹಾಗೂ ತೃಣಮೂಲ ಕಾಂಗ್ರೆಸ್‌ ಪುನರಪಿ ಕಲ್ಯಾಣದ ಇಂಗಿತವನ್ನು ಮಮತಾ ಬ್ಯಾನರ್ಜಿ ವ್ಯಕ್ತಪಡಿಸಿದ್ದಾರೆ.ಎನ್‌ಡಿಎಗೆ ತೃಣಮೂಲ ಸೇರ್ಪಡೆಗೊಳ್ಳುವ ವಿಷಯವನ್ನು ಪಕ್ಷವು ನಿಶ್ಚಯಿಸುತ್ತದೆ ಎಂದು ಪಶ್ಚಿಮ ಬಂಗಾಳ ಚುನಾವಣೆಯ ನಂತರ ಇದೇ ಮೊದಲ ಬಾರಿಗೆ ಮಮತಾ ಎನ್‌ಡಿಎ ಬಗೆಗೆ ಮೆದುವಾಗಿ ಮಾತನಾಡಿದ್ದಾರೆ.

ಇತ್ತೀಚಿನ ವಿಧಾನಸಭೆ ಚುನಾವಣೆಗಳಲ್ಲಿ ಸಂಭವಿಸಿರುವ ಭಾರೀ ಅಕ್ರಮ- ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಲು ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಅವರಿಗೆ ಮನವಿ ಪತ್ರ ಸಲ್ಲಿಸುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಎನ್‌ಡಿಎ ಸಖ್ಯದ ಬಗೆಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಅವರು, ಭವಿಷ್ಯದ ಬಗ್ಗೆ ತಿಳಿಸಲು ನಾನೇನೂ ಭವಿಷ್ಯಕಾರಳಲ್ಲ ಎಂದು ಕೆರಳಿ ನುಡಿದರು.

ಪ್ರಜಾ ಸತ್ತಾತ್ಮಕ ಒಕ್ಕೂಟಕ್ಕೆ ತೃಣಮೂಲ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಮಮತಾ ಆಂತರಿಕ ಒತ್ತಡಗಳನ್ನು ಎದುರಿಸುತ್ತಿದ್ದು , ಅವರು ಪಕ್ಷದ ಆಂತರಿಕ ಬಂಡಾಯವನ್ನು ಹತ್ತಿಕ್ಕಲಾದರೂ ವಾಜಪೇಯಿ ಸಖ್ಯ ಬಯಸುವುದು ಅನಿವಾರ್ಯವಾಗಿದೆ. ಆದರೆ, ಈ ನಡುವೆ ತೃಣಮೂಲ ಬಗೆಗೆ ಮೊದಲಿನ ಒಲವನ್ನು ಹೊಂದದಿರುವ ಬಿಜೆಪಿ , ಮಮತಾರನ್ನು ಸ್ವಾಗತಿಸಲು ಅಷ್ಟೇನೂ ಉತ್ಸುಕವಾಗಿಲ್ಲ ಎನ್ನುವುದು ಗಮನಾರ್ಹ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+