Get Updates
Get notified of breaking news, exclusive insights, and must-see stories!

‘ಮುಯ್ಯಿಗೆ ಮುಯ್ಯಿ’ ಪಾತ್ರದಲ್ಲಿ ಕುಮಾರಿ ಜಯಲಲಿತಾ

ಚೆನ್ನೈ : ಜನತಂತ್ರದ ಚಕ್ರದಲ್ಲಿ ಮತ್ತೆ ಮೇಲಾಗಿ, ತಮ್ಮ ಕಡು ರಾಜಕೀಯ ಎದುರಾಳಿ ಕರುಣಾನಿಧಿಯವರನ್ನು ಇನ್ನೊಮ್ಮೆ ಹಿಂದೆ ತಳ್ಳಿ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ಜಯಲಲಿತಾ ಈಗ ಸೇಡಿನ ಹೆಣ್ಣಿನ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಮೊನ್ನೆಯಷ್ಟೇ ಕುರ್ಚಿ ತ್ಯಜಿಸಿ ವಿಷಾದ ಯೋಗದಲ್ಲಿರುವ ಮಾಜಿಮುಖ್ಯ ಕರುಣಾನಿಧಿ ಅವರ ಮೇಲೆ ಮೊಕದ್ದಮೆಯಾಂದನ್ನು ಹೂಡಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ವೀರನಾಮ್‌ ಸ್ಕ್ಯಾಂಡಲ್‌ಗೆ ಸಂಬಂಧಿಸಿದಂತೆ ಸರ್ಕಾರಿಯಾ ಆಯೋಗದ ಶಿಫಾರಸ್ಸುಗಳ ಹಿನ್ನೆಲೆಯಲ್ಲಿ ಕರುಣಾನಿಧಿ ವಿರುದ್ಧ ಮೊಕದ್ದಮೆ ಹೂಡುವುದಾಗಿ ಶುಕ್ರವಾರ ವಿಧಾನಸಭೆಯಲ್ಲಿ ಜಯಲಲಿತಾ ತಿಳಿಸಿದರು.

ರಾಜ್ಯಪಾಲರ ಭಾಷಣ ಕುರಿತ ಚರ್ಚೆಗೆ ಉತ್ತರಿಸುತ್ತಿದ್ದ ಅವರು, ಕುಡ್ಡಲೂರು ಜಿಲ್ಲೆಯಿಂದ ಚೆನ್ನೈಗೆ ಕುಡಿಯುವ ನೀರನ್ನು ಪೂರೈಸುವ ವೀರನಾಮ್‌ ಸ್ಕ್ಯಾಂಡಲ್‌ನಲ್ಲಿ ಕರುಣಾನಿಧಿ ಅವರ ಕೈವಾಡವಿರುವ ಇಂಗಿತವನ್ನು ಆಯೋಗ ವ್ಯಕ್ತಪಡಿಸಿದೆ ಎಂದರು. ಇದು ನಿರ್ದಿಷ್ಟ ಪ್ರಕರಣವಾದುದರಿಂದ ಸರ್ಕಾರ ನ್ಯಾಯಾಲಯದ ಕಟ್ಟೆ ಹತ್ತಲು ತೀರ್ಮಾನಿಸಿದೆ ಎಂದು ಜಯಲಲಿತಾ ಹೇಳಿದರು.

ಜಯಲಲಿತಾ ಅವರ ವಿರುದ್ಧ ಕರುಣಾನಿಧಿ ಸರ್ಕಾರ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಮೊಕದ್ದಮೆಗಳನ್ನು ಹೂಡಿದುದನ್ನು ಇಲ್ಲಿ ಸ್ಮರಿಸಬಹುದು. ಈ ಆರೋಪಗಳ ಹಿನ್ನೆಲೆಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಜಯಲಲಿತಾ ಕಳೆದುಕೊಂಡಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+