ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಮೈಥುನವೇಹೃದಯಕ್ಕೆ ಯುಗಾದಿ

By Staff
|
Google Oneindia Kannada News

ಕೇಪ್‌ಟೌನ್‌ : ಹೃದಯದ ಕೆಲಸ ಸದಾ ಸುಗಮವಾಗಿ ನಡೆಯಲು ಯಾವ ವ್ಯಾಯಾಮ ಲೇಸು ? ಉತ್ತರ- ಲೈಂಗಿಕ ಕ್ರಿಯೆ, ಅದೂ ದಿನ ನಿತ್ಯ !

ತರಲೆ ಮಾತಾಡ್ತಿದಾರೆ ಅಂದುಕೊಂಡಿರಾ? ಇದು ನಮ್ಮ ಅಭಿಪ್ರಾಯವಲ್ಲ ; ಹೃದಯ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಜಗತ್ತಿನಲ್ಲೇ ಹೆಸರು ಮಾಡಿರುವ ದಕ್ಷಿಣ ಆಫ್ರಿಕದ ವೈದ್ಯೋನಾರಾಯಣೋ ಹರಿ ಕ್ರಿಸ್ಟಿಯಾನ್‌ ಬರ್ನಾರ್ಡ್‌ ಅವರದು. 79ರ ಇಳಿವಯಸ್ಸಲ್ಲೂ ಈತ ಉತ್ಸಾಹದ ಬುಗ್ಗೆ. ಮಜಾ ಕೊಡುವ ಘಾ. ಫಿಫ್ಟೀ ವೇಸ್‌ ಟು ಎ ಹೆಲ್ದಿ ಹಾರ್ಟ್‌- ಇದು ಈತ ಬರೆದಿರುವ ಚೆಲ್ಲು ಚೆಲ್ಲು ಎನಿಸಿದರೂ ವಾಸ್ತವಕ್ಕೆ ಹತ್ತಿರವಾದ ಸಂಗತಿಗಳನ್ನುಳ್ಳ ಪುಸ್ತಕ.

ಬಚಾವ್‌- ಗೊರ್ಬಚೇವ್‌ ಮೊರೆ : ಆಸ್ಟ್ರೇಲಿಯಾದಲ್ಲಿ ಸೆಟ್ಲ್‌ ಆಗಿರುವ ಬರ್ನಾರ್ಡ್‌ ಈಗ ಕೇಪ್‌ಟೌನ್‌ಗೆ ಬಂದಿದ್ದಾರೆ. ಎರಡೂವರೆ ವರ್ಷದ ಕಂದ ಅವರ ಕೈಬೆರಳು ಹಿಡಿದಿದೆ. ಬಹುಶಃ ತನ್ನ ಹೃದಯದ ಅಭಿಧಮನಿಯ ಆಯಸ್ಸು ಮುಗಿಯುತ್ತಾ ಬಂದಿದೆ ಎಂಬ ವಿಷಯ ಮಗುವಿಗೆ ಗೊತ್ತೇ ಇಲ್ಲ. ಅದರ ಪ್ರಾಣ ಉಳಿಸುವ ಜವಾಬ್ದಾರಿಯನ್ನು ರಷ್ಯಾದ ಮಾಜಿ ಅಧ್ಯಕ್ಷ ಮಿಕಾಯಿಲ್‌ ಗೊರ್ಬಚೇವ್‌, ಬರ್ನಾರ್ಡ್‌ಗೆ ವಹಿಸಿದ್ದಾರೆ. ರಷ್ಯಾದಲ್ಲಿ ಹೃದಯ ಕಸಿ ಚಿಕಿತ್ಸೆಗೆ ಬೇಕಾದ ಮೂಲಭೂತ ಸೌಕರ್ಯಗಳೇ ಇಲ್ಲವಂತೆ !

ಮೊದಲ ಕಸಿ : ಡಿಸೆಂಬರ್‌ 1967. ಕೇಪ್‌ಟೌನ್‌ನ ಗ್ರೂಟ್‌ ಚ್ಚುರ್‌ ಆಸ್ಪತ್ರೆ. 55 ವರ್ಷದ ಲೂಯಿಸ್‌ ವಾಷ್‌ಕ್ಯಾನ್‌ಸ್ಕಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಮಧುಮೇಹದ ಜೊತೆಗೆ ಹೃದಯ ರಕ್ತವನ್ನು ಸಮರ್ಪಕವಾಗಿ ಪಂಪ್‌ ಮಾಡುತ್ತಿಲ್ಲ. ಅದೇ ಸಮಯಕ್ಕೆ ಹದಿಹರೆಯದ ಹುಡುಗಿಯಾಬ್ಬಳು ಕಾರ್‌ ಆ್ಯಕ್ಸಿಡೆಂಟ್‌ನಿಂದ ಮೃತಳಾಗುತ್ತಾಳೆ. ಬರ್ನಾಡ್‌ ಯೋಚಿಸಿದ್ದು ಮೂರೇ ನಿಮಿಷ. ಆಕೆಯ ಮೃತ ದೇಹದಲ್ಲಿನ ಇನ್ನೂ ಕ್ರಿಯಾಶೀಲವಾಗಿದ್ದ ಹೃದಯವನ್ನು ಕಸಿದು, ವಾಷ್‌ಕ್ಯಾನ್‌ಸ್ಕಿಗೆ ಬೆಸೆಯುತ್ತಾರೆ. ಈ ಚಿಕಿತ್ಸೆಯ ನಂತರವೂ ರೋಗದ ಗೂಡಾಗಿದ್ದ ವಾಷ್‌ಕ್ಯಾನ್‌ಸ್ಕಿ 18 ದಿನಗಳಾದ ಮೇಲೆ ಸಾಯುತ್ತಾನೆ. ಆದರೆ ಬರ್ನಾರ್ಡ್‌ ಮಾಡಿದ ಆಪರೇಷನ್‌ ಜೀವಂತವಾಗುತ್ತದೆ. ವಿಶ್ವದ ಹೃದ್ರೋಗ ತಜ್ಞರಿಗೆಲ್ಲಾ ಇದು ಪಾಠವಾಗುತ್ತದೆ.

ಬರ್ನಾರ್ಡ್‌ ಮೊದಲ ನೋಟದಲ್ಲೇ ಎಲ್ಲರ ಗಮನ ಸೆಳೆಯುವ ವ್ಯಕ್ತಿ. ಗುಂಡು ಹೊಡೆದಂಥ ಮಾತು; ಸ್ಪಷ್ಟ ಹಾಗೂ ನೇರ. ಅದರ ನಮೂನೆ ಇಲ್ಲಿದೆ...

ಸಿನಿಮಾ ನಟಿಯರ ಜೊತೆ ಅಫೇರ್‌ : ಪ್ರಾಮಾಣಿಕವಾಗಿ ಹೇಳ್ತೇನೆ, ಇವತ್ತಿನವರೆಗೂ ಹೃದಯಕ್ಕೆ ಏನೆಲ್ಲಾ ಕಸಿವಿಸಿ ಯಾಕೆ ಬಂದೆರಗುತ್ತದೆ ಅನ್ನೋದೇ ನನಗೆ ಗೊತ್ತಿಲ್ಲ. ಆಪರೇಷನ್‌ ಥಿಯೇಟರಿಗೆ ಹೋದ ನಂತರವೂ ಮುಂದೆ ನಾನೇನು ಮಾಡುತ್ತೇನೆ ಅನ್ನೋದು ಅನ್‌ಪ್ಲಾನ್ಡ್‌. ಆದರೆ ಒಂದೊಂದು ಆಪರೇಷನ್‌ ಕೂಡ ಹೃದಯ ಪಾಠದ ಹೊಸ ಎಳೆ.... ನಾನು ಡಾಕ್ಟರಾಗಿದ್ದು ದುಡ್ಡು ಸಂಪಾದಿಸೋಕೆ. ಮನೆಯಲ್ಲಿ ಕಡುಬಡತನ ಹೊಟ್ಟೆಗೆ ಉರಿ ಹಚ್ಚಿತ್ತು. ಆದರೆ ನಾನು ಜಗತ್ತಿನಲ್ಲೇ ದೊಡ್ಡ ಹೃದಯ ಕಸಿ ತಜ್ಞ ಅಂತ ಎಲ್ಲಾ ಹೇಳೋಕೆ ಶುರು ಮಾಡಿದಾಗ ನಂಬೋದಕ್ಕೇ ಆಗಲಿಲ್ಲ....ನನಗೆ ಸಿನಿಮಾ ನಟಿಯರ ಜೊತೆ ಅಫೇರ್‌ ಇತ್ತು. ಹಗಲು ರಾತ್ರಿಯೆನ್ನದೆ ಅವರೊಡನೆ ಕುಣಿದು ಕುಪ್ಪಳಿಸುತ್ತಿದ್ದೆ. ಅವರನ್ನು ಕೂಡುತ್ತಿದ್ದೆ. ದಟ್ಸ್‌ ದಿ ಸೀಕ್ರೇಟ್‌ ಆಫ್‌ ಮೈ ಹೆಲ್ತ್‌.

ಅವರ ಈ ಮಾತುಗಳು ಆಶ್ಚರ್ಯ ಹುಟ್ಟಿಸಬಹುದು. ಆದರೆ ಈ ಮನುಷ್ಯ ಜೀವನವನ್ನು ತುಂಬಾ ಪ್ರೀತಿಸುತ್ತಾರೆ. 1998ರಲ್ಲಿ ಕ್ರಿಸ್ಟಿಯಾನ್‌ ಬರ್ನಾರ್ಡ್‌ ಫೌಂಡೇಶನ್‌ ಕಟ್ಟಿದ್ದಾರೆ. ಹುಷಾರಿಲ್ಲದ ಬಡ ಮಕ್ಕಳ ಚಿಕಿತ್ಸೆಗೆ ಈ ದತ್ತಿ ಹಣ ಕೊಡುತ್ತಿದೆ. ಇದು ಇವರ ಇನ್ನೊಂದು ಮುಖ.

ಬರ್ನಾರ್ಡ್‌ ರತಿ ಹೋಮ : ಬರ್ನಾರ್ಡ್‌ರ ಫಿಫ್ಟೀ ವೇಸ್‌ ಟು ಎ ಹೆಲ್ದಿ ಹಾರ್ಟ್‌ ಕುತೂಹಲಕಾರಿ ವಿಷಯಗಳನ್ನು ಒಳಗೊಂಡಿದೆ. ಅದರಲ್ಲಿ ವಯಾಗ್ರ ಉಪಯೋಗಿಸುವುದು ತಪ್ಪೇನಲ್ಲ ಎಂದು ಬರೆದಿದೆ. ಒಂಟಿತನ ಆಯುಷ್ಯ ಕಡಿಮೆ ಮಾಡುತ್ತದೆ. ಸಂಭೋಗರಹಿತ ಜೀವನ ಹೃದಯ ಸರಿಯಾಗಿ ಕೆಲಸ ಮಾಡದಿರಲು ಕಾರಣ ಎಂಬ ಸಲಹೆಯೂ ಉಂಟು. ಇದನ್ನು ಅವರ ಮಾತುಗಳಲ್ಲೇ ಕೇಳಿ- Sex, regular sex is the most beautiful, healthiest and most pleasurable way to keep the circulation in gear, keeping the heart healthy. Men should use the antiimpotence drug Viagra.

ಬರ್ನಾರ್ಡ್‌ ವಿಚಾರಗಳಿಗೆ ನಿಮ್ಮದೇನಾದರೂ ಆಕ್ಷೇಪಣೆಯಿದೆಯಾ? ನಮಗೆ ಬರೆಯೋದನ್ನ ಮರೆಯಬೇಡಿ.

(ಎಎಫ್‌ಪಿ)

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X