ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಬ್ರಾಂಡ್ ಚೆನ್ನಾಗಿರಲಿ- ‘ನಾಸ್‌ಕಾಂ’
ಚೆನ್ನೈ : ಐಟಿಯ ಮಂಕಿನಿಂದಾಗಿ ಸಾಫ್ಟ್‌ವೇರ್ ಕಂಪನಿಗಳು ಕಂಗೆಟ್ಟಿರುವ ನಡುವೆಯೇ, ಭಾರತೀಯ ಸಾಫ್ಟ್‌ವೇರ್ ಕಂಪನಿಗಳ ಉತ್ಪನ್ನಗಳ ಗುಣಮಟ್ಟ ಮತ್ತಷ್ಟು ಸುಧಾರಿಸಬೇಕೆಂದು ‘ನಾಸ್‌ಕಾಂ’ ಅಭಿಪ್ರಾಯಪಟ್ಟಿದೆ.
ಜಾಗತಿಕ ಸ್ಪರ್ಧೆಯಲ್ಲಿ ಉಳಿಯಲಿಕ್ಕಾಗಿ ಭಾರತೀಯ ಸಾಫ್ಟ್‌ವೇರ್ ಕಂಪನಿಗಳು ತಮ್ಮ ಉತ್ಪನ್ನಗಳ ಗುಣಮಟ್ಟವನ್ನು ಉತ್ತಮಗೊಳಿಸಬೇಕು ಹಾಗೂ ಗ್ರಾಹಕ ಕಾಳಜಿ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಎಂದು ನಾಸ್‌ಕಾಂ ಭಾರತೀಯ ಸಾಫ್ಟ್‌ವೇರ್ ಕಂಪನಿಗಳಿಗೆ ಬುದ್ಧಿವಾದ ಹೇಳಿದೆ.
ಚ್ನೆನೈನಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಬುಧವಾರ ಮಾತನಾಡುತ್ತಿದ್ದ ನಾಸ್‌ಕಾಂನ ಅಧ್ಯಕ್ಷ ಫಿರೋಜ್ ವಾಂದ್ರೆವಾಲಾ ಸಾಫ್ಟ್‌ವೇರ್ ಕಂಪನಿಗಳು ಜಾಗತಿಕ ಸ್ಪರ್ಧೆಯನ್ನು ಎದುರಿಸುವಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಭಾರತದ ಬಗೆಗೆ ವಿದೇಶಿ ಕಂಪನಿಗಳು ಕಣ್ಣು ಹೊರಳಿಸಬೇಕಾದರೆ, ಅವರಿಗೆ ಭಾರತೀಯ ಬ್ರಾಂಡ್‌ನ ಬಗೆಗೆ ವಿಶ್ವಾಸ ಮೂಡಬೇಕು. ಗ್ರಾಹಕರನ್ನು ತೃಪ್ತಿಪಡಿಸಲು ಎರಡನೆ ಅವಕಾಶ ಇಲ್ಲವೆನ್ನುವುದನ್ನು ಕಂಪನಿಗಳು ಗಮನದಲ್ಲಿಡಬೇಕು ಎಂದು ಅವರು ಹೇಳಿದರು.
‘ಐಟಿ ಆಧಾರಿತ ಸೇವೆಗಳು’ (ಐಟಿಇಎಸ್) ಸಂಬಂಧಿಸಿದಂತೆ ಭಾರತ ಸರ್ಕಾರ ಹಾಗೂ ಐಟಿ ವಲಯ ತಂತ್ರಗಾರಿಕೆಯನ್ನು ರೂಪಿಸಲು ಅನುವಾಗುವಂತೆ ಹೊಳಹುಗಳನ್ನು ಸೂಚಿಸಲು ನಡೆದ ಎರಡು ದಿನಗಳ ವಿಚಾರಸಂಕಿರಣದಲ್ಲಿ ಫಿರೋಜ್ ಮಾತನಾಡುತ್ತಿದ್ದರು. ಐಟಿ ಎನ್ನುವುದು ಗಂಭೀರವಾದ ಉದ್ಯಮ. ಒಂದಷ್ಟು ಜಾಗೆಯನ್ನು ಹೊಂದಿರುವ ರಾಮ, ಭೀಮ, ಧೂಮರೆಲ್ಲ ಇಲ್ಲಿ ಸೈ ಅನ್ನಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.
ಗುಣಮಟ್ಟ ಕಾಯ್ದುಕೊಳ್ಳಲು ಅಗತ್ಯವಾಗುವಂತೆ ನಾಸ್‌ಕಾಂ ತನ್ನ ಸದಸ್ಯರಿಗೆ ನೀತಿ ಸಂಹಿತೆಯಾಂದನ್ನು ರೂಪಿಸುತ್ತಿದ್ದು , ಎಂಟು ತಿಂಗಳಲ್ಲಿ ಸಂಹಿತೆ ಪೂರ್ಣಗೊಳ್ಳುವುದು. ಸದಸ್ಯ ಕಂಪನಿಗಳು ತಮ್ಮ ಗ್ರಾಹಕರನ್ನು - ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸುವ ಹಾಗೂ ಕಂಪನಿಗಳು ಅನುಸರಿಸಬೇಕಾದ ಮತ್ತಿತರೆ ನಿಯಮಾವಳಿಗಳನ್ನು ಸಂಹಿತೆ ಒಳಗೊಂಡಿರುತ್ತದೆ ಎಂದು ಫಿರೋಜ್ ಹೇಳಿದರು.
(ಎಎಫ್‌ಪಿ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications