ಅಡಿಕೆ ಮಾರುಕಟ್ಟೆಗೆ ಕೈಕಂಬವಾಗಿ ಕ್ಯಾಂಪ್ಕೋ ಮತ್ತು ಸರಕಾರ
ಮಂಗಳೂರು : ನೆಲಕಚ್ಚುತ್ತಿರುವ ಅಡಿಕೆ ಮಾರುಕಟ್ಟೆಯನ್ನು ರಕ್ಷಿಸಲು ಕ್ಯಾಂಪ್ಕೋ ಚಾಕಲೇಟ್ ಸಂಸ್ಥೆ ಮತ್ತು ಸರಕಾರ ಎರಡು ಪ್ರಮುಖ ಹೆಜ್ಜೆ ಇಟ್ಟಿದ್ದು, ಅಡಿಕೆ ಬೆಳೆಗಾರರ ಮನೆಯಂಗಳದಲ್ಲಿ ಭರವಸೆಯ ಕಿರಣ ಮೂಡುತ್ತಿದೆ.
ಅಡಿಕೆ ಬೆಲೆ ಕುಸಿತದ ಹಿನ್ನೆಲೆಯನ್ನು ಗಮನಿಸಿ ಬರುವ ನವೆಂಬರ್ ವರೆಗೆ ಅಡಿಕೆ ಮೇಲಿನ ಬಹು ಹಂತದ ಕರವನ್ನು ವಸೂಲಿ ಮಾಡದೇ ಇರಲು ಸರಕಾರ ನಿರ್ಧರಿಸಿದೆ. ಕರ ವಸೂಲಿಯನ್ನು ಅಮಾನತುಗೊಳಿಸಿದ ಆದೇಶವನ್ನು ಸರಕಾರ ತಕ್ಷಣವೇ ಹೊರಡಿಸಲಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವ ಆರ್. ಬಿ. ತಿಮ್ಮಾಪುರ ಹೇಳಿದ್ದಾರೆ.
ಇದರ ಜೊತೆಗೆ ಅಡಿಕೆಯನ್ನು ಒಂದು ಆಹಾರ ಉತ್ಪನ್ನ ಎಂದು ಪರಿಗಣಿಸಬೇಕು ಎಂಬ ಬೇಡಿಕೆಯೂ ಸದ್ಯಕ್ಕೆ ಸರಕಾರದ ಪರಿಶೀಲನೆಯಲ್ಲಿದೆ. ಇದರಿಂದ ಆಹಾರ ಉತ್ಪನ್ನಗಳಿಗೆ ದೊರೆಯುವ ಹಲವು ರಿಯಾಯಿತಿಗಳು ಅಡಿಕೆಗೂ ಲಭ್ಯವಾಗುತ್ತವೆ.
ಕ್ಯಾಂಪ್ಕೋ ಇಟ್ಟ ಹೊಸ ಹೆಜ್ಜೆ
ಅಡಿಕೆ ಮಾರುಕಟ್ಟೆಯನ್ನು ರಕ್ಷಿಸುವ ಹೊಣೆಯನ್ನು ತಾನೇ ಹೆಗಲಿಗೇರಿಸಿಕೊಂಡಿರುವ ಕ್ಯಾಂಪ್ಕೋ ಸಂಸ್ಥೆ ಗುಜರಾತ್‌ನ ಅಮುಲ್ ಸಂಸ್ಥೆಯಾಂದಿಗೆ ಒಪ್ಪಂದ ಮಾಡಿಕೊಂಡಿದೆ. ಇತ್ತೀಚೆಗೆ ಮಂಗಳೂರಿನ ಅಮುಲ್ ಸಂಸ್ಥೆಗಳ ಅಧ್ಯಕ್ಷ ಡಾ. ವರ್ಗೀಸ್ ಮತ್ತು ಕ್ಯಾಂಪ್ಕೋದ ಹೊಸ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಅವರ ನಡುವಿನ ಒಪ್ಪಂದ ಫಲಪ್ರದವಾಗಿದ್ದು, ಇನ್ನು ಮುಂದೆ ‘ಅಮುಲ್ ಕ್ಯಾಂಪ್ಕೋ ಅರೆಕೋ ಬೀಟ್‌ನೆಟ್’ ಎಂಬ ಹೊಸ ಬ್ರಾಂಡ್‌ನಡಿಯಲ್ಲಿ ರಾಜ್ಯದ ಅಡಿಕೆ ಗುಜರಾತ್‌ಗೆ ರವಾನೆಯಾಗಲಿದೆ.
ಕ್ಯಾಂಪ್ಕೋ ಚಾಕಲೇಟ್ ಸಂಸ್ಥೆಯ ಹೊಸ ಮಾರಾಟ ಮಳಿಗೆ ಜೂನ್ ತಿಂಗಳ ಹೊತ್ತಿಗೆ ಕಾನ್ಪುರದಲ್ಲಿ ಆರಂಭವಾಗಲಿದ್ದು ಅಡಿಕೆ ಬೆಳೆಯ ಬೇಡಿಕೆ ಹೆಚ್ಚಾಗುವ ಎಲ್ಲಾ ನಿರೀಕ್ಷೆಗಳೂ ಬೆಳೆಗಾರರ ಮುಂದಿದೆ.
ಇನ್ನೊಂದೆಡೆ ರಾಜ್ಯದ ಅಡಿಕೆ ಬೆಳೆಯನ್ನು ಪಾಕಿ-ಸ್ತಾನಕ್ಕೆ ರಫ್ತು ಮಾಡುವ ಮಾತುಕತೆ ಪ್ರಗತಿಯಲ್ಲಿದೆ. ಪಾಕಿ-ಸ್ತಾನದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಅಡಿಕೆ ಆಮದು ಶುಲ್ಕವನ್ನು ಶೇ 35 ರಿಂದ ಶೇ 30ಕ್ಕೆ ಇಳಿಸಲು ಪಾಕಿಸ್ತಾನ ಸರಕಾರ ಒಪ್ಪಿಕೊಂಡಿದ್ದು, ಅಲ್ಲಿನ ಬಜೆಟ್ ಅಧಿವೇಶನದ ಬಳಿಕ ಈ ರಿಯಾಯಿತಿ ಜಾರಿಗೆ ಬರಲಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications