ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆಂದುಟಿಗಳಲ್ಲಿ ಅರಳಲಿ ನಗೆ ಲಹರಿ, ಬೇಡ ತಂಬಾಕಿನ ಸುರುಳಿ

By Staff
|
Google Oneindia Kannada News

ಕಳೆದ ವರ್ಷ ಯಾವುದೋ ಪತ್ರಿಕೆಯ ಒಳಪುಟದ ಮೂಲೆಯಾಂದರಲ್ಲಿ ನಗರದ ಲ್ಲಿ ನಡೆದಿದ್ದ ಪ್ರತಿಭಟನೆಯಾಂದರ ವರದಿಯಿತ್ತು. ಗುಟ್ಕಾ ಕಂಪನಿಯಾಂದು ತನ್ನ ಉತ್ಪನ್ನಕ್ಕೆ ಕಾರ್ಗಿಲ್‌ ಗುಟ್ಕಾ ಎನ್ನುವ ಹೆಸರಿಟ್ಟಿದ್ದೇಈ ಪ್ರತಿಭಟನೆಗೆ ಕಾರಣ.

ತಂಬಾಕಿನ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ಇಂಥಾ ನಾನಾಬಗೆಯ ಐಡಿಯಾಗಳನ್ನು ತಂಬಾಕು ಲಾಬಿ ಬಳಸುತ್ತಿದೆ. ಈ ಪ್ರಯೋಗಗಳೆಲ್ಲಾ ನಮ್ಮ ಯುವಜನತೆ ಮೇಲೆ ಎನ್ನುವುದೇ ವಿಷಾದ. ಕೆಲವು ಸ್ಯಾಂಪಲ್‌ಗಳನ್ನು ನೋಡಿ. ಉನ್ನತ ಜನರು, ಉನ್ನತ ಒಲವು- ಇದು ಗುಟ್ಕಾ ಕಂಪನಿಯಾಂದರ ಹೇಳಿಕೆ. ಮೇಡ್‌ ಫಾರ್‌ ಈಚ್‌ ಅದರ್‌- ಸಿಗರೇಟ್‌ ಕಂಪನಿಯ ಘೋಷಣೆ. ಇದೇ ರೀತಿ ನಿಮ್ಮ ಸ್ಪೂರ್ತಿಗೆ, ಯಶಸ್ಸಿಗೆ ಕಾರಣವಾಗುವ ಉತ್ಪನ್ನಗ ಳೂ ಇವೆ. ನೀವಿಷ್ಟ ಪಟ್ಟ ಹುಡುಗಿ ನಿಮ್ಮನ್ನು ಒಲಿಯಬೇಕಾದರೆ ನೀವು ನಮ್ಮ ಕಂಪನಿಯ ಸಿಗರೇಟು ಸುಡಿ ಎನ್ನುತ್ತದೊಂದು ಸಿಗರೇಟು ಕಂಪನಿ.

ಈ ಜಾಹೀರಾತುಗಳೆಲ್ಲಾ ತಂಬಾಕು ಸೇವನೆ ತಪ್ಪಲ್ಲ ಎನ್ನುವ ಭಾವನೆಯನ್ನು ಯುವ ಮನದಲ್ಲಿ ಮೂಡಿಸುತ್ತಿವೆ. ನಾವು ನಮ್ಮಿಷ್ಟ ಎನ್ನುವ ಉದ್ಧಟತನ ತೋರುವ ಇಂದಿನ ಬಹುತೇಕರು ಇಂಥ ಜಾಹಿರಾತುಗಳಿಂದ ಪ್ರಚೋದಿತರಾಗಿರುತ್ತಾರೆ. ನಮ್ಮ ಹುಡುಗರ ಭಾವನೆ, ನೈತಿಕತೆ ಮತ್ತು ಬದುಕಿನ ಜೊತೆ ಈ ಕಂಪನಿಗಳು ಚೆಲ್ಲಾಟವಾಡುತ್ತಿವೆ. ಇದೆಲ್ಲದರ ಪರಿಣಾಮವಾಗಿ ಲಕ್ಷಾಂತರ ಹದಿನಾರು ಕಾಮನೆಗಳ ಹರಯದವರು ತಂಬಾಕಿನ ವಿಷ ವರ್ತುಲಕ್ಕೆ ಬಹ ಳ ಸಂತೋಷದಿಂದಲೇ ಅಡಿಯಿಡುತ್ತಿದ್ದಾರೆ. ಬೀಡಿ, ಕಡ್ಡಿ ಪುಡಿಯಿಂದ ಹಿಡಿದು ಸಿಗರೇಟು, ಗುಟ್ಕಾದವರೆಗೆ ತಂಬಾಕಿಗೆ ನೂರಾರು ಮುಖ.

ನೂರು ಕೋಟಿ ಭಾರತೀಯರಲ್ಲಿ ತಂಬಾಕನ್ನು ಸೇವಿಸುವವರು 24 ಕೋಟಿಯಂತೆ . ತಂಬಾಕು ಸೇವನೆಯಿಂದ ಸಾಯುವವರ ಸಂಖ್ಯೆ ವರ್ಷಕ್ಕೆ 6 ಲಕ್ಷ . ವರ್ಷ ವರ್ಷವೂ 55 ಸಾವಿರ ಭಾರತೀಯ ಮಕ್ಕಳು ತಂಬಾಕಿನ ಚಟಕ್ಕೆ ಬೀಳುತ್ತಿದ್ದಾರೆ. ಜಗತ್ತಿನ ತಂಬಾಕು ಬಳಕೆದಾರರ ಐದನೇ ಒಂದು ಭಾಗ ಭಾರತದಲ್ಲಿದೆ. ಇವಿಷ್ಟೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಓ) ತಂಬಾಕು ರಹಿತ ದಿನದ(ಮೇ 31) ಸಂದರ್ಭದಲ್ಲಿ ಹೊರಡಿಸಿರುವ ಪ್ರಕಟಣೆಯಲ್ಲಿನ ಮುಖ್ಯಾಂಶಗಳು.

ಜಾಗೃತಿ ಅಭಿಯಾನ : ಇಂಥದ್ದೊಂದು ಅಭಿಯಾನವನ್ನು ವರ್ಷವಿಡೀ ಆಚರಿಸಲು ವಿಶ್ವ ಆರೋಗ್ಯ ಸಂಸ್ಥೆ ನಿರ್ಧರಿಸಿದೆ. ಮುಖ್ಯವಾಗಿ, ಬಹುರಾಷ್ಟ್ರೀಯ ತಂಬಾಕು ಕಂಪನಿಗಳು ಮತ್ತು ಹೆಚ್ಚು ಹೆಚ್ಚು ತಂಬಾಕು ಬಳಸುವಂತೆ ಯುವ ಸಮುದಾಯಕ್ಕೆ ಉತ್ತೇಜನ ನೀಡು ವ ಮಾಧ್ಯಮಗಳ ವಿರುದ್ಧ ಜಾಗೃತಿ ಅಭಿಯಾನ ನಡೆಸಲು ಡಬ್ಲ್ಯೂಎಚ್‌ಓ ನಿರ್ಧರಿಸಿದೆ. ಮನರಂಜನೆ ಮತ್ತು ತಂಬಾಕು ಉತ್ಪನ್ನ ವಂಚನೆ ತಡೆಯೋಣ- ಎನ್ನುವುದು ಈ ವರ್ಷದ ಘೋಷಣೆ.

ಧೂಮಪಾನ ಮಾಡಬೇಕೆನ್ನುವ ನಿರ್ಧಾರಗಳ ಹಿಂದೆ ತಂಬಾಕು ಉದ್ಯಮದ ಮಾರಾಟ ತಂತ್ರಗಳು ಮುಖ್ಯವಾಗಿರುತ್ತವೆ. ಮಕ್ಕಳು ಮತ್ತು ಯುವಕರ ಆಯ್ಕೆಯ ಸ್ವಾತಂತ್ರ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುವ ಉದ್ಯಮದ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕಿ ಗ್ರೋ ಹಾರ್ಲೆಮ್‌ ಬ್ರಂಡ್ಟ್‌ ಲ್ಯಾಂಡ್‌ ಕಿಡಿಕಾರುತ್ತಾರೆ. ಗ್ರೋ ಅವರ ಮಾತುಗಳನ್ನು ಸಮರ್ಥಿಸುವ ಡಬ್ಲ್ಯೂಎಚ್‌ಓನ ಆಗ್ನೇಯ ಏಷ್ಯಾ ವಲಯದ ಉಪ ನಿರ್ದೇಶಕ ಸಾಮ್ಲಿ ಪಲಿಯನ್‌ ಬಾಂಗ್‌ ಚುಂಗ್‌, ‘ಸಾವು’ ಆಕರ್ಷಣೀಯ ಮತ್ತು ಯೋಗ್ಯ ಆಯ್ಕೆ ಎಂದು ಮಾಧ್ಯಮಗಳು ಪ್ರಚಾರ ಮಾಡುತ್ತಿವೆ ಎನ್ನುತ್ತಾರೆ. ತಂಬಾಕು ಉದ್ಯಮ ಧೂಮಪಾನ ಮಾಡುವವರು ವಯಸ್ಕರು ಮಾತ್ರ ಎಂದರೆ ಅದನ್ನು ಸಾರಾಸಗಟಾಗಿ ತಳ್ಳಿಹಾಕುವ ಮತ್ತೊಬ್ಬ ಡಬ್ಲ್ಯೂಎಚ್‌ಓ ಅಧಿಕಾರಿ ಮಾರ್ಥಾ ಓಸೈ, ದೊಡ್ಡವರಂತೆ ಮಕ್ಕಳೂ ದೊಡ್ಡ ಪ್ರಮಾಣದಲ್ಲಿ ಧೂಮಪಾನ ಚಟಕ್ಕೀಡಾಗುತ್ತಿದ್ದಾರೆ ಎನ್ನುತ್ತಾರೆ.

ತಂಬಾಕಿನ ಕತೆ : ತಂಬಾಕಿನ ಹುಟ್ಟೂರು ಅಮೆರಿಕಾದ ದಕ್ಷಿಣ ಹಾಗೂ ಮಧ್ಯಭಾಗ. ಅಲ್ಲಿನ ಆದಿವಾಸಿಗಳಾದ ರೆಡ್‌ ಇಂಡಿಯನ್ನರು ಚಿಲುಮೆ ರೂಪದ ಕಟ್ಟಿಗೆಯ ಕೊಳವೆಗಳಲ್ಲಿ ತಂಬಾಕಿನ ಹೊಗೆಯನ್ನು ಸೇವಿಸುತ್ತಿದ್ದರಂತೆ. ಅಲ್ಲಿ ಶುರುವಾದ ತಂಬಾಕಿನ ಜನಪ್ರಿಯತೆ ಯಾವ ಮಟ್ಟಕ್ಕೆ ಮುಟ್ಟಿತೆಂದರೆ, 2 ನೇ ವಿಶ್ವಯುದ್ಧದ ಸಮಯದಲ್ಲಿ ಅಮೆರಿಕ ಮುಂತಾದೆಡೆ ಸಿಗರೆಟ್‌ನ ತೀವ್ರ ಕೊರತೆ ಉಂಟಾಯಿತಂತೆ. ಇದು ಭಾರತಕ್ಕೆ ಬಂದಿದ್ದು , 17 ನೇ ಶತ ಮಾನದಲ್ಲಿ , ಪೋರ್ಚುಗೀಸರ ರೂಪದಲ್ಲಿ . ಭಾರತದಲ್ಲಿ ಸುಮಾರು 30 ಲಕ್ಷ ಜನ ತಂಬಾಕು ಕೃಷಿಯಲ್ಲಿ ತೊಡಗಿದ್ದಾರೆ. ಒಟ್ಟು ಕೃಷಿ ಕ್ಷೇತ್ರದ ಶೇ. 0.3 ರಷ್ಟು ಭಾಗ ತಂಬಾಕು ಬೆಳೆಯದು. ಬ್ರಿಟನ್‌, ರಷ್ಯಾದಂತಹ ದೇಶಗಳಿಗೆ ತಂಬಾಕು ಇಲ್ಲಿಂದ ರಫ್ತಾಗುತ್ತದೆ.

ನಿಧಾನ ವಿಷ : ತಂಬಾಕಿನಲ್ಲಿರುವ ನಿಕೋಟಿನ್‌ ನಿಧಾನ ವಿಷವೆಂದೇ ಹೆಸರಾಗಿದೆ. ನಿಕೋಟಿನ್‌ ನಿಯಮಿತವಾಗಿ ದೇಹವನ್ನು ಸೇರುವುದರಿಂದ ಮನುಷ್ಯ ಅನುಭವಿಸುವ ತೊಂದರೆಗಳು ಹತ್ತಾರು. ಸಮೀಕ್ಷೆಯಾಂದರ ಪ್ರಕಾರ ಕ್ಯಾನ್ಸರ್‌ ರೋಗಿಗಳಲ್ಲಿ ಪ್ರತಿಶತ 30 ಜನ ಧೂಮಪಾನಿಗಳು. 11 ಬಗೆಯ ಕ್ಯಾನ್ಸರ್‌ಗಳು ತಂಬಾಕು ಸೇವನೆಯಿಂ ದ ಬರುತ್ತವೆ. ಅದರಲ್ಲಿ ಮೊದಲನೆಯದು ಶ್ವಾಸಕೋಶದ ಕ್ಯಾನ್ಸರ್‌. ಬಾಯಿಗೆ ಸಂಬಂಧಿಸಿದ 4 ಕ್ಯಾನ್ಸರ್‌ಗಳೂ ಪಟ್ಟಿಯಲ್ಲಿ ಮೊದಲಿವೆ.

ಬೆಂಕಿಹಚ್ಚಿ ನಾವು ಸುಡುವ ಸಿಗರೇಟು ನಮ್ಮನ್ನೇ ಅಣುಅಣುವಾಗಿ ಸುಡುತ್ತದೆ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎನ್ನುವ ಶಾಸನ ವಿಧಿಸಿದ ಎಚ್ಚರಿಕೆ ಎಲ್ಲಾ ತಂಬಾಕಿನ ಉತ್ಪನ್ನಗಳ ಮೇಲೆ ಸಣ್ಣ ಅಕ್ಷರಗಳಲ್ಲಿರುತ್ತದೆ. ಇದೇ ಎಚ್ಚರಿಕೆ ನಮ್ಮೆಲ್ಲರ ಮನಸ್ಸುಗಳಲ್ಲಿ , ಮುಖ್ಯವಾಗಿ ಮಕ್ಕಳೆದೆಯಲ್ಲಿ ದಪ್ಪನೆ ಅಕ್ಷರಗಳಲ್ಲಿ ಮೂಡುವುದು ಯಾವಾಗ ? ಉತ್ತರಿಸಬೇಕಾದ ಜವಾಬ್ದಾರಿ ನಮ್ಮೆಲ್ಲ-ರ-ದೂ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X