Get Updates
Get notified of breaking news, exclusive insights, and must-see stories!

ನ.23ರಿಂದ ಬೆಂಗಳೂರಲ್ಲಿ ಐರೋಪ್ಯ ಒಕ್ಕೂಟ ಸಮಾವೇಶ

ಬೆಂಗಳೂರು : ಬರುವ ನವೆಂಬರ್‌ 23ರಿಂದ ನಗರದಲ್ಲಿ ಭಾರತ ಹಾಗೂ ಐರೋಪ್ಯ ಒಕ್ಕೂಟ ರಾಷ್ಟ್ರಗಳ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಐರೋಪ್ಯ ಒಕ್ಕೂಟ ರಾಷ್ಟ್ರಗಳ ನಿಯೋಗದ ಮುಖಂಡ ಹಾಗೂ ರಾಯಭಾರಿ ಮೈಕೆಲ್‌ ಕ್ಯಾಲಿಯಟ್‌ ಮಂಗಳವಾರ ತಿಳಿಸಿದ್ದಾರೆ.

ಪ್ರಸ್ತುತ ಐರೋಪ್ಯ ಒಕ್ಕೂಟ ರಾಷ್ಟ್ರಗಳ ನಿಯೋಗ ಭಾರತದಲ್ಲಿದೆ. ಬಿಡದಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಕ್ಯಾಲಿಯಟ್‌ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಸಮ್ಮೇಳನದಲ್ಲಿ ಐರೋಪ್ಯ ಒಕ್ಕೂಟ ರಾಷ್ಟ್ರಗಳ ಅಧ್ಯಕ್ಷ ಮತ್ತು ಬೆಲ್ಜಿಯಮ್‌ ಪ್ರಧಾನಿ ಭಾಗವಹಿಸುವರು. ಐರೋಪ್ಯ ಒಕ್ಕೂಟ ರಾಷ್ಟ್ರಗಳು ಹಾಗೂ ಭಾರತದ ನಡುವೆ ವ್ಯಾಪಾರ ವೃದ್ಧಿಗೆ ಸಮಾವೇಶ ನೆರವಿಗೆ ಬರಲಿದೆ. 15 ದೇಶಗಳ ಐರೋಪ್ಯ ರಾಷ್ಟ್ರಗಳ ಒಕ್ಕೂಟ ಹಾಗೂ ಭಾರತದ ನಡುವೆ ಬಾಂಧವ್ಯ ವೃದ್ಧಿಯೂ ಸಮಾವೇಶದ ಉದ್ದಿಶ್ಯ ಎಂದರು.

ಭಾರತ ಹಾಗೂ ಐರೋಪ್ಯ ಒಕ್ಕೂಟ ರಾಷ್ಟ್ರಗಳು ಭಾರತದಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಜಂಟಿ ಯೋಜನೆಗಳನ್ನು ರೂಪಿಸಲೂ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ವಿಷಯಕ್ಕೆ ಸಮಾವೇಶದಲ್ಲಿ ಚಾಲನೆ ದೊರೆಯಲಿದೆ. ಬಂಡವಾಳ ಹೂಡಿಕೆ, ವ್ಯಾಪಾರ ಒಡಂಬಡಿಕೆ ಮೊದಲಾದ ಆರ್ಥಿಕ ವಿಷಯಗಳು, ಕಾಶ್ಮೀರ ಸಮಸ್ಯೆ, ಭದ್ರತೆ ಹಾಗೂ ಭಯೋತ್ಪಾದನೆ ಕುರಿತೂ ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ಕ್ಯಾಲಿಯಟ್‌ ಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+