ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಪಾಕಿಸ್ತಾನೀಯರೆಷ್ಟು?
ಬೆಂಗಳೂರು : ಸುಮಾರು 12,505 ಪಾಕಿಸ್ತಾನೀಯರು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ. ಈ ಪೈಕಿ 3,234 ಜನರ ಬಳಿ ಅಗತ್ಯ ದಾಖಲೆ ಪತ್ರಗಳಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ವಿದ್ಯಾಸಾಗರ್ ರಾವ್ ಮಂಗಳವಾರ ಹೇಳಿದ್ದಾರೆ.
ಅಕ್ರಮವಾಗಿ ವಾಸಿಸುತ್ತಿರುವ ವಿದೇಶೀಯರನ್ನು ಪತ್ತೆ ಹಚ್ಚಿ, ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಟೊಂಕ ಕಟ್ಟಿದ್ದೇವೆ. ಆದರೆ ಈವರೆಗೂ ಸೂಕ್ತ ದಾಖಲೆ ಪತ್ರ ಹೊಂದಿರದ ಪಾಕಿಸ್ತಾನೀಯರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ . ನಗರದ ವಲಸೆ ಕೇಂದ್ರಗಳಿಗೆ ಭೇಟಿ ಕೊಟ್ಟು, ರಾಜ್ಯ ಡಿಜಿಪಿ ಕೆ.ಶ್ರೀನಿವಾಸನ್ ಅವರೊಡನೆ ಅಕ್ರಮವಾಗಿ ಭಾರತದಲ್ಲಿ ವಾಸಿಸುತ್ತಿರುವವರ ಬಗ್ಗೆ ಮಾತನಾಡಿದ್ದೇನೆ. ಬೆಂಗಳೂರಲ್ಲಿ ವಲಸೆ ಕೇಂದ್ರಗಳು ಸಾಕಷ್ಟಿಲ್ಲ. ಇರುವ ಕೆಲವಕ್ಕೆ ಮೂಲಭೂತ ಸೌಕರ್ಯ ಸರಿಯಾಗಿಲ್ಲ ಎಂಬ ದೂರು ಬರುತ್ತಿರುವುದಾಗಿ ವಲಸೆ ಕೇಂದ್ರಗಳ ಅಧಿಕಾರಿಗಳು ಹೇಳಿದ್ದಾರೆ ಎಂದು ವಿದ್ಯಾಸಾಗರ್ ತಿಳಿಸಿದರು.
ಪ್ರಶ್ನೆಯಾಂದಕ್ಕೆ ಉತ್ತರಿಸುತ್ತಾ, ಕಾಶ್ಮೀರದಲ್ಲಿ ಎಷ್ಟು ಮಂದಿ ಪಾಕಿಸ್ತಾನೀಯರು ಅಕ್ರಮವಾಗಿ ನೆಲೆಸಿದ್ದಾರೆ ಎಂಬುದು ತಿಳಿದಿಲ್ಲ ದೆಹಲಿಗೆ ತೆರಳಿದ ನಂತರ ವಲಸೆ ಪ್ರಾಧಿಕಾರದ ಅಧಿಕಾರಿಗಳೊಡನೆ ಸಭೆಯಾಂದನ್ನು ನಡೆಸಿ ಈ ಸಮಸ್ಯೆಗಳ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕದಲ್ಲಿರುವ ವಿದೇಶೀಯರೆಷ್ಟು ? ಕರ್ನಾಟಕದಲ್ಲಿ 10,851 ವಿದೇಶೀಯರು ನೆಲೆಸಿದ್ದಾರೆ. ಈ ಪೈಕಿ 8,815 ಜನರ ಬಳಿ ಅಗತ್ಯ ದಾಖಲೆ ಪತ್ರಗಳಿವೆ. 2030ಕ್ಕೂ ಹೆಚ್ಚು ವಿದೇಶೀಯರು ಇಲ್ಲಿ ಉಳಿಯಲು ಸಿಕ್ಕಿರುವ ಅನುಮತಿ ಮುಂದುವರೆಸುವಂತೆ ಅರ್ಜಿ ಹಾಕಿದ್ದಾರೆ. ಅದನ್ನು ಸರ್ಕಾರ ಪರಿಶೀಲಿಸುತ್ತಿದೆ. ಹಾಗಂತ ಅವರು ಅಕ್ರಮವಾಗಿ ಅನುಮತಿ ಇಲ್ಲದೆ ತಂಗುವಂತಿಲ್ಲ. ಏನಾದರೂ ಭೂಗತರಾಗಿರುವುದು ಕಂಡು ಬಂದಲ್ಲಿ ಬಂಧಿಸಿ, ಅವರ ದೇಶಕ್ಕೆ ರವಾನಿಸಲಾಗುವುದು ಎಂದು ಸಚಿವರು ಖಾರವಾಗಿ ಹೇಳಿದರು.
ನಿಮಗಿದು ಗೊತ್ತೆ - ಫ್ರೀಡಂ ಫೈಟರ್‌ಗಳ ಮಕ್ಕಳಿಗೆ ಮದುವೆ ಭತ್ಯೆ !
1 ಲಕ್ಷದ 64 ಸಾವಿರದ 458 ಸ್ವಾತಂತ್ರ್ಯ ಹೋರಾಟಗಾರರನ್ನು ಗುರ್ತಿಸಲಾಗಿದ್ದು, ಅವರಿಗೆ ಪಿಂಚಣಿ ಕೊಡಲು ತೀರ್ಮಾನಿಸಿದ್ದೇವೆ. ಕೇಂದ್ರ ಸರ್ಕಾರ ಇದಕ್ಕಾಗಿ 2 ಬಿಲಿಯನ್ ರುಪಾಯಿ ಖರ್ಚು ಮಾಡಲಿದೆ. ಪ್ರತಿ ರಾಜ್ಯದಲ್ಲಿ ಇಂತಿಷ್ಟು ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ ಎಂದು ನಿಖರವಾಗಿ ಹೇಳುವುದು ಕಷ್ಟ. ಈ ಬಗ್ಗೆ ರಾಜ್ಯಗಳಿಗೆ ಪತ್ರ ಬರೆದಿದ್ದರೂ, ಅವರಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು ಮದುವೆ ಭತ್ಯೆ ಪಡೆಯಲು ಅರ್ಹರು. ಆದರೂ ಈವರೆಗೆ ಒಂದೇ ಒಂದು ಅರ್ಜಿ ಬಂದಿಲ್ಲ . ಜನರಿಗೆ ಈ ಬಗ್ಗೆ ಅರಿವೇ ಇಲ್ಲ ಎಂಬುದಕ್ಕೆ ಇದೇ ನಿದರ್ಶನ ಎಂದರು.
ಸಚಿವಾಲಯವು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯನ್ನು ಕಂಪ್ಯೂಟರ್‌ನಲ್ಲಿ ದಾಖಲಿಸುತ್ತಿದೆ. ಕರ್ನಾಟಕದಲ್ಲಿ 10,014 ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ ಎಂದು ವಿವರಿಸಿದರು.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications