ಅರೆ ಗ್ರಾಮೀಣ ಮಹಿಳೆಯರ ಐಟಿ ಶಿಕ್ಷಣಕ್ಕೆ ಸ್ಪ್ಯಾನಿಶ್ ನೆರವು
*ಇಮ್ರಾನ್ ಖುರೇಷಿ ಬೆಂಗಳೂರು : ಭಾರತದ ಐಟಿ ರಾಜಧಾನಿಯ ಸುತ್ತಮುತ್ತಲಿನ ಅರೆ ಗ್ರಾಮೀಣ (ಸೆಮಿ ಅರ್ಬನ್) ಪ್ರದೇಶಗಳ ಮಹಿಳೆಯರಿಗೆ ಮಾಹಿತಿ ಮತ್ತು ತಂತ್ರಜ್ಞಾನ ಶಿಕ್ಷಣ ನೀಡುವ ಸರ್ಕಾರೇತರ ಸಂಸ್ಥೆಗಳ ಯೋಜನೆ ಇದೇ ಮೊದಲ ಬಾರಿಗೆ ಜಾರಿಯಾಗುತ್ತಿದ್ದು , ಈ ನಿಟ್ಟಿನಲ್ಲಿ ಸ್ಪ್ಯಾನಿಷ್ ಪ್ರಾಂತೀಯ ಸರ್ಕಾರ 3 ಲಕ್ಷ ಡಾಲರ್‌ಗಳ ನೆರವನ್ನು ಒದಗಿಸಲು ಮುಂದಾಗಿದೆ.
ಸ್ಪೈನ್ ಹಾಗೂ ಭಾರತ ಎರಡೂ ಕಡೆ ನೆಲೆ ಹೊಂದಿರುವ ಐದು ಸರ್ಕಾರೇತರ ಸಂಸ್ಥೆಗಳೊಂದಿಗೆ ಈ ಯೋಜನೆಯನ್ನು ಪರಿಚಯಿಸುವ ಸಾಹಸ ಕಾರ್ಯಕ್ಕೆ ಟೆಲ್- ನೆಕ್ ಮುಂದಾಗಿದೆ. ಅವುಗಳೆಂದರೆ- ಸ್ಪೈನ್ ಮೂಲದ ಗಾೖಯಾ (GAIA) ಹಾಗೂ ಗಾರ್ಡೆಕ್ಸೊಲಾ ಟೆಲಿಸೆಂಟರ್, ದೆಹಲಿ ಮೂಲದ 3ಎಸ್‌ಇಐ ಹಾಗೂ ಬೆಂಗಳೂರಿನ ಆ್ಯಂಕೊರೇಜ್ ಹಾಗೂ ಸುವಿದ್ಯಾ.
ಸ್ಪೈನ್‌ನಲ್ಲಿನ ಎಲ್ಲ ಎಲೆಕ್ಟ್ರಾನಿಕ್ ಹಾಗೂ ಐಟಿ ಕಂಪನಿಗಳನ್ನು ಪ್ರತಿನಿಧಿಸುವ ಗಾೖಯಾ ಲಾಭ ರಹಿತ ಸಂಸ್ಥೆಯಾದರೆ, ಸ್ಪೇನ್‌ನಲ್ಲಿ ಮೊದಲ ಬಾರಿಗೆ ಗ್ರಾಮೀಣ ಐಟಿ ಯೋಜನೆಯನ್ನು 1996 ರಲ್ಲಿಯೇ ಪರಿಚಯಿಸಿದ ಅಗ್ಗಳಿಕೆ ಗಾರ್ಡೆಕ್ಸೊಲಾ ಟೆಲಿಸೆಂಟರ್ ಕಂಪನಿಯದು. ಅದೇ ಸಾಧನೆಯನ್ನು ಕರ್ನಾಟಕದಲ್ಲಿ ಸಾಧಿಸಲು ಕಂಪನಿ ಮುಂದಾಗಿದೆ.
ಪಟ್ಟಣದಿಂದ ಹಂತ ಹಂತವಾಗಿ ಹಳ್ಳಿಗೆ : ಮಹಿಳೆಯರು ಕೂಡ ಸ್ಪರ್ಧಾತ್ಮಕ ಐಟಿ ಪ್ರಪಂಚದಲ್ಲಿ ತರಬೇತು- ಕುಶಲತೆ ಹೊಂದುವುದು ಅಗತ್ಯವಾಗಿದೆ. ಗ್ರಾಮೀಣ ಪ್ರದೇಶಗಳನ್ನು ತಲುಪುವುದು ಕೂಡ ನಮ್ಮ ಉದ್ದೇಶವಾಗಿದ್ದರೂ, ಮೊದಲಿಗೆ ಅರೆ ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಐಟಿ ಶಿಕ್ಷಣ ನೀಡುವುದು ನಮ್ಮ ಗುರಿಯಾಗಿದೆ ಎನ್ನುತ್ತಾರೆ ಆ್ಯಂಕೊರೇಜ್‌ನ ಟ್ರಸ್ಟಿಗಳಲ್ಲೊಬ್ಬರಾದ ಸುರಭಿ ಶರ್ಮ.
ಪ್ರಾರಂಭಿಕ ಹಂತದಲ್ಲಿ 30 ಮಂದಿ ಮಹಿಳೆಯರಿಗೆ ಐಟಿ ಶಿಕ್ಷಣವನ್ನು ನೀಡಲು ಆ್ಯಂಕೊರೇಜ್ ಉದ್ದೇಶಿಸಿದೆ. ಶಿಕ್ಷಣಾರ್ಥಿಗಳು ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದ್ದರೆ ಸಾಕು. ಕಲಿಕೆಯ ಅವಧಿ ಎರಡು ವರ್ಷ. ಸ್ಥಳೀಯ ಕನ್ನಡವನ್ನೇ ಕಲಿಕೆಯ ಮಾಧ್ಯಮವನ್ನಾಗಿ ಬಳಸಿಕೊಳ್ಳಲಾಗುವುದು. ಕಲಿಕೆಯ ನಂತರ ಸ್ವ ಉದ್ಯೋಗವನ್ನು ಮಹಿಳೆಯರು ಹೊಂದುವ ರೀತಿಯಲ್ಲಿ ಕೋರ್ಸ್ ನಡೆಯುತ್ತದೆ ಎಂದು ಶಿಕ್ಷಣದ ಸ್ವರೂಪವನ್ನು ಸುರಭಿ ವಿವರಿಸುತ್ತಾರೆ. ಕಲಿಕೆಯ ಆಸೆಯಿದ್ದೂ ಪಟ್ಟಣಕ್ಕೆ ಬರಲು ಸಾಧ್ಯವಿಲ್ಲದವರಿಗೆ ಈ ಶಿಕ್ಷಣ ವರದಾನ.
ಒಂದು ಪ್ರದೇಶದ ಮೇಲೆ ಆರ್ಥಿಕ ಬದಲಾವಣೆ ಬೀರುವ ಪ್ರಭಾವದ ಕುರಿತೂ ಸ್ವಯಂ ಸೇವಾ ಸಂಘಟನೆಗಳು ಯೋಚಿಸುತ್ತಿವೆ. ಮುಖ್ಯವಾಗಿ ದುರ್ಬಲ ವರ್ಗದವರನ್ನು ಸಶಕ್ತರಾಗಿಸುವುದು ಹಾಗೂ ಅವರಿಗೆ ತಂತ್ರಜ್ಞಾನದ ಲಾಭ ದಕ್ಕುವಂತೆ ಮಾಡುವುದು ಅವರ ಪ್ರಯತ್ನದ ಉದ್ದೇಶ.
ಉದಾಹರಣೆಗೆ ಯುರೋಪಿಯನ್ ಆಯೋಗದ ಭಾರತದಲ್ಲಿನ ರಾಯಭಾರಿ ಮೈಕೇಲ್ ಕ್ಯಾಲಿಯೋಯೆುಟ್ ಬೆಂಗಳೂರಿಗೆ 32 ಕಿಮೀ ದೂರದ ಬಿಡದಿಯಲ್ಲಿ ಈ ಉದ್ದೇಶದ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಭಾರತ ಹಾಗೂ ಯುರೋಪ್ ಸಂಘಟನೆಗಳ ಸಹಕಾರದಿಂದ ಸಮಾಜದ ದುರ್ಬಲ ವರ್ಗದವರಿಗೆ ಆಧುನಿಕ ತಂತ್ರಜ್ಞಾನದ ಫಲಗಳು ದೊರೆಯುವಂತಾಗುವುದು ಬಹಳ ಮುಖ್ಯವಾದುದು ಎನ್ನುತ್ತಾರೆ ಮೈಕೇಲ್. ಅವರ ಉದ್ದೇಶ ಈಡೇರಲಿ.
(ಐಎಎನ್‌ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications