Get Updates
Get notified of breaking news, exclusive insights, and must-see stories!

ಯಶವಂತಪುರ- ಜಯನಗರಫ್ಲೈಓವರ್‌ ಯೋಜನೆ ಕ್ಯಾನ್ಸಲ್‌

ಬೆಂಗಳೂರು : ಮೇಲ್ಮಟ್ಟದ ಹಗುರ ರೈಲು ಯೋಜನೆ ಜಾರಿಗೆ ತರಬೇಕೆಂಬ ಯೋಚನೆಗೆ ಅಡ್ಡಿ ಬರುತ್ತದೆಂಬ ಕಾರಣಕ್ಕೆ ಯಶವಂತಪುರ- ಜಯನಗರ ನಡುವಿನ 250 ಕೋಟಿ ರುಪಾಯಿ ವೆಚ್ಚದ ಫ್ಲೈಓವರ್‌ ನಿರ್ಮಾಣದ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.

ಜಯನಗರ 4ನೇ ಬ್ಲಾಕ್‌ನಿಂದ ಶುರುವಾಗಿ ಆರ್‌.ವಿ.ಟೀಚರ್ಸ್‌ ಕಾಲೇಜು, ಜೆ.ಸಿ.ರಸ್ತೆ, ಮಿಷನ್‌ ರಸ್ತೆ, ನೃಪತುಂಗ ರಸ್ತೆ, ಶೇಷಾದ್ರಿ ರಸ್ತೆ, ಪ್ಲಾಟ್‌ಫಾರಂ ರಸತೆ, ಸಂಪಿಗೆ ರಸ್ತೆ ಮೂಲಕ ತುಮಕೂರು ರಸ್ತೆಯನ್ನು ಸಂಪರ್ಕಿಸುವ ಉದ್ದನೆಯ ಫ್ಲೈ ಓವರ್‌ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಯೋಜನೆಯ ಸಾಧ್ಯತಾ ವರದಿ ಸಿದ್ಧಪಡಿಸಲು 50 ಲಕ್ಷ ರುಪಾಯಿ ಸುರಿಯಲಾಗಿತ್ತು.

ಈ ಯೋಜನೆ ಕೈಬಿಡಲು ಮತ್ತೊಂದು ಕಾರಣವನ್ನೂ ಸರ್ಕಾರ ಕೊಟ್ಟಿದೆ. ಕರ್ನಾಟಕ ರಸ್ತೆ ನಿರ್ಮಾಣ ನಿಗಮ ಬೆಂಗಳೂರಿನ ವಿವಿಧ ಭಾಗಗಳನ್ನು ಸಂಪರ್ಕಿಸಲು 22 ಮಿನಿ ಫ್ಲೈ ೕವರ್‌ಗಳನ್ನು ನಿರ್ಮಿಸಲಿದೆ. ನಗರಕ್ಕೆ ಉದ್ದದ ಫ್ಲೈ ಓವರ್‌ ಒಗ್ಗುವುದಿಲ್ಲ ಎಂದು ನಿಗಮ ಹೇಳಿರುವ ಕಾರಣಕ್ಕೆ ಯಶವಂತಪುರ- ಜಯನಗರ ಫ್ಲೈಓವರ್‌ ಯೋಜನೆಯನ್ನು ಕೈಬಿಡಲಾಗಿದೆ. ಜೊತೆಗೆ ಈ ಯೋಜನೆಯ ಜಾರಿಗೆ ಸಂಪನ್ಮೂಲದ ಕೊರತೆಯೂ ಇದೆಯಂತೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+