ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದಲ್ಲಿ ಜೀವನ ವಿಜ್ಞಾನ ಪುಸ್ತಕ ಮಾಲೆ ಪ್ರಕಟಣೆ

By Staff
|
Google Oneindia Kannada News

ಬೆಂಗಳೂರು: ವಿದ್ಯಾರ್ಥಿಗಳ ವೈಯಕ್ತಿಕ ವ್ಯಕ್ತಿತ್ವದ ವಿಕಸನಕ್ಕೆ ನೆರವಾಗುವ ಜೀವನ ವಿಜ್ಞಾನ ಪುಸ್ತಕ ಮಾಲೆಯ ಕನ್ನಡ ಆವೃತ್ತಿ ಬಿಡುಗಡೆಗೆ ಸಿದ್ಧವಾಗಿದೆ. ಆಚಾರ್ಯ ಮಹಾಪ್ರಾಯ ಎಜುಕೇಷನ್‌ ಟ್ರಸ್ಟ್‌ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟಿಸಿರುವ ಈ ಪುಸ್ತಕ ಮಾಲೆಯನ್ನು ಶ್ರೀ ಆದಿಚುಂಚನಗಿರಿ ಮಠದ ಬಾಲ ಗಂಗಾಧರ ನಾಥ ಸ್ವಾಮಿಗಳ ಒತ್ತಾಸೆಯ ಮೇಲೆ ಕನ್ನಡಕ್ಕೆ ಅನುವಾದಿಸಲಾಗಿದೆ.

ಈ ಪುಸ್ತಕ ಮಾಲೆಯನ್ನು ಜೂನ್‌ 1ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಬಿಡುಗಡೆ ಮಾಡುವರು ಮಹಾಪ್ರಾಯ ಎಜುಕೇಷನ್‌ ಟ್ರಸ್ಟ್‌ನ ಆಡಳಿತ ಮಂಡಳಿ ಸದಸ್ಯ ಲಲಿತ್‌ ಜೈನ್‌ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಜೀವನ ವಿಜ್ಞಾನ ಪುಸ್ತಕ ಮಾಲೆಯಲ್ಲಿ ಒಟ್ಟು 12 ಪುಸ್ತಕಗಳಿವೆ. 1ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈ ಪುಸ್ತಕಗಳು ಉಪಯುಕ್ತವಾಗಿವೆ. ಉತ್ತರ ಭಾರತದ ನಾಲ್ಕು ರಾಜ್ಯಗಳಲ್ಲಿ ಇದನ್ನು ಪಠ್ಯವೆಂದೂ ಪರಿಗಣಿಸಿದ್ದಾರೆ ಎಂದೂಅವರು ಹೇಳಿದರು.

ಒಂದೊಂದು ಪುಸ್ತಕದ ಮುಖಬೆಲೆ 20 ರುಪಾಯಿಗಳಾಗಿದ್ದು, ಕೊಳ್ಳಬಯಸುವ ಸಾರ್ವಜನಿಕರಿಗೆ ಶೇ.50ರ ರಿಯಾಯಿತಿಯಲ್ಲಿ ಪುಸ್ತಕ ದೊರಯಲಿದೆ ಎಂದ ಅವರು, ಆದಿಚುಂಚನಗಿರಿ ಮಠದ ಶಾಲೆಗಳಲ್ಲಿ ಪಠ್ಯದ ಜತೆಗೆ ಈ ಪುಸ್ತಕ ಮಾಲೆಯ ವಿಷಯಗಳನ್ನೂ ಭೋದಿಸಲಾಗುತ್ತದೆ ಎಂದರು.

ಸನ್ಮಾನ : ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಓಸ್ವಾಲ್‌ ಪರಿಷತ್‌ ವತಿಯಿಂದ ಆದಿ ಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳಿಗೆ ವಿದ್ಯಾ ಸಾಮ್ರಾಟ್‌ ಎಂಬ ಗೌರವ ನೀಡಿ ಸನ್ಮಾನಿಸಲಾಗುವುದು ಎಂದೂ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X