ಪೆಟ್ರೋಲ್ ಕಲಬೆರಕೆಯ ಮಹಾ ಜಾಲ ಪತ್ತೆ : 8 ಜನರ ಬಂಧನ
ಬೆಂಗಳೂರು : ಕಲಬೆರಕೆ ಪೆಟ್ರೋಲ್‌ನ ಬೃಹತ್ ಜಾಲವೊಂದನ್ನು ಬೆಂಗಳೂರು ಪೊಲೀಸರು ಪತ್ತೆಹಚ್ಚಿದ್ದು, ಈ ಸಂಬಂಧ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 12 ಸಾವಿರ ಲೀಟರ್ ಕಲಬೆರಕೆ ಮಾಡುವ ದ್ರಾವಣವನ್ನೂ ವಶಪಡಿಸಿಕೊಂಡಿದ್ದಾರೆ.
ಕಲಬೆರಕೆ ಪೆಟ್ರೋಲ್ ಹಗರಣಕ್ಕೆ ಸಂಬಂಧಿಸಿದಂತೆ ಸಂಜಯನಗರ ಹಾಗೂ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಎರಡು ಪೆಟ್ರೋಲ್ ಬಂಕ್‌ಗಳನ್ನು ಮುಚ್ಚಲಾಗಿದೆ. ಕೈಗಾರಿಕೆಗಳಲ್ಲಿ ಬಳಸುವ 12 ಸಾವಿರ ರುಪಾಯಿ ಮೊತ್ತದ ಬಿಳಿ ಪೆಟ್ರೋಲ್, ಕಲಬೆರಕೆಯಾದ 15 ಸಾವಿರ ಲೀಟರ್ ಪೆಟ್ರೋಲ್ ಹಾಗೂ ಪೆಟ್ರೋಲ್ ಟ್ಯಾಂಕರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಟ್ಯಾಂಕರ್ ಚಾಲಕ ಮುಂಬಯಿಯ ಸಂತೋಷ್ ಸಿಂಗ್, ಪೆಟ್ರೋಲ್ ಬಂಕ್ ಮಾಲಿಕ ಮೊಹಮ್ಮದ್ ಮಸೂದ್, ಆತನ ಸೋದರ ಮಹಮದ್ ಮಕ್ಸೂದ್, ಬಂಕ್ ಕ್ಯಾಷಿಯರ್ ಕುಮಾರ್, ಕೆಲಸಗಾರರಾದ ಪೂವಯ್ಯ, ಮುರಳಿ ಹಾಗೂ ಅರುಣ್ ಎಂಬುವವರೇ ಬಂಧಿತ ಆರೋಪಿಗಳು.
ವ್ಯಕ್ತಿಯಾಬ್ಬರು ನೀಡಿದ ಸುಳಿವಿನ ಮೇಲೆ ಕಾರ್ಯಪ್ರವೃತ್ತರಾದ ಸಂಜಯನಗರ ಪೊಲೀಸರು ಎಂ.ಜಿ. ರಸ್ತೆಯಲ್ಲಿರುವ ಟ್ರಿನಿಟಿ ಸರ್ವೀಸ್ ಸ್ಟೇಷನ್ ಹಾಗೂ ಸಂಜಯನಗರದ ಫೌಜಿದಾರ್ ಸರ್ವೀಸ್ ಸ್ಟೇಷನ್‌ಗಳ ಮೇಲೆ ದಾಳಿ ಮಾಡಿ ಈ ಜಾಲವನ್ನು ಬಯಲಿಗೆಳೆದರು.
ಬಿಳಿ ಪೆಟ್ರೋಲ್ ಬೆರೆಸಿದ ಪೆಟ್ರೋಲ್ ಬಳಸುವ ವಾಹನಗಳಿಂದ ದಟ್ಟವಾದ ಹೊಗೆ ಹೊರಹೊಮ್ಮುತ್ತದೆ. ಇದು ಬಹಳ ಅಪಾಯಕಾರಿಯಾಗಿದ್ದು, ವಾಯು ಮಾಲಿನ್ಯ ಅಧಿಕವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಆರೋಪಿಗಳು ಮೊದಲು ಬಿಳಿ ಪೆಟ್ರೋಲ್ ಕೊಳ್ಳುವ ಬಂಕ್ ಹುಡುಕಿ, ಮೊದಲು ಬಂಕ್‌ನ ಟ್ಯಾಂಕ್‌ಗೆ ಪೆಟ್ರೋಲ್ ತುಂಬಿ, ಅದೇ ದಿನ ಬಿಳಿ ಪೆಟ್ರೋಲ್ ತುಂಬುತ್ತಿದ್ದರು.
ಟ್ಯಾಂಕರ್ ಅನ್ನು ನೆಲ ಮಂಗಲ ಬಳಿ ನಿಲ್ಲಿಸಿ, ಕಲಬೆರಕೆ ಮಾಡುವ ಬಂಕ್‌ಗಳನ್ನು ಸಂಪರ್ಕಿಸುತ್ತಿದ್ದರು. ಮೇ 25ರಂದು ಟ್ರಿನಿಟಿ ಬಂಕ್‌ಗೆ 8 ಸಾವಿರ ಲೀಟರ್ ಕಲಬೆರಕೆ ಪೆಟ್ರೋಲ್ ಪೂರೈಸಲಾಗಿತ್ತು. 26ರಂದು ರಾತ್ರಿ ಸಂಜಯನಗರ ಪೆಟ್ರೋಲ್ ಬಂಕ್‌ಗೆ ಪೂರೈಸಲು ಕಲಬೆರಕೆ ಸಿದ್ಧತೆ ನಡೆಯುತ್ತಿದ್ದಾಗ ಪೊಲೀಸರು ಈ ತಂಡವನ್ನು ಹಿಡಿದರು ಎಂದು ಪೊಲೀಸ್ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ಸಂಜಯ ನಗರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಈ ಜಾಲದಲ್ಲಿ ಭಾಗಿಗಳಾಗಿರುವ ಇನ್ನೂ ಹಲವು ಆರೋಪಿಗಳ ಪತ್ತೆಕಾರ್ಯ ಮುಂದುವರಿದಿದೆ.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications