Get Updates
Get notified of breaking news, exclusive insights, and must-see stories!

ಕೊಲ್ಲಿ ರಾಷ್ಟ್ರಗಳಲ್ಲಿ ಇಂಡೋ- ಗಲ್ಫ್‌ ಡಾಟ್‌ಕಾಂ ಮೇಳ

ಬೆಂಗಳೂರು : ಭಾರತೀಯ ತಂತ್ರಜ್ಞಾನವನ್ನು ಕೊಲ್ಲಿ ರಾಷ್ಟ್ರಗಳಿಗೆ ಪರಿಚಯಿಸಿ ಜನಪ್ರಿಯಗೊಳಿಸುವ ಉದ್ದೇಶದಿಂದ ಇಂಡೋ- ಗಲ್ಫ್‌ ಡಾಟ್‌ಕಾಂ ಮೇಳವನ್ನು ಮುಂದಿನ 6 ತಿಂಗಳಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಏರ್ಪಡಿಸಲು ಎಲೆಕ್ಟ್ರಾನಿಕ್ಸ್‌ ಹಾಗೂ ಕಂಪ್ಯೂಟರ್‌ ಸಾಫ್ಟ್‌ವೇರ್‌ ರಫ್ತು ಉತ್ತೇಜನ ಮಂಡಳಿ ನಿರ್ಧರಿಸಿದೆ.

ಕೊಲ್ಲಿ ರಾಷ್ಟ್ರಗಳಲ್ಲಿ ಈ ಮೇಳ ನಡೆಸಲು ಉದ್ದೇಶಿಸಲಾಗಿದ್ದರೂ, ಸ್ಥಳ ಇನ್ನೂ ನಿರ್ಧಾರಿಸಬೇಕಾಗಿದೆ ಎಂದು ಮಂಡಳಿಯ ಪ್ರಾದೇಶಿಕ ಮುಖ್ಯಸ್ಥ ಎಚ್‌.ಎ. ನಾಗರಾಜರಾವ್‌ ಸುದ್ದಿಗಾರರಿಗೆ ತಿಳಿಸಿದರು. ಇತ್ತೀಚೆಗಷ್ಟೇ 13 ಕಂಪನಿಗಳ ಪ್ರತಿನಿಧಿಗಳೊಂದಿಗೆ ಮಧ್ಯಪೂರ್ವ ರಾಷ್ಟ್ರಗಳಿಗೆ ನೀಡಿದ ಭೇಟಿ ಯಶಸ್ವಿಯಾಗಿದ್ದು , ಆ ರಾಷ್ಟ್ರಗಳಿಂದ 50 ದಶಲಕ್ಷ ರುಪಾಯಿ ವಹಿವಾಟು ನಿರೀಕ್ಷಿಸಲಾಗುತ್ತಿದೆ ಎಂದರು.

ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ಪ್ರಾರಂಭಿಸಲು ಬಹರೈನ್‌ ಉದ್ದೇಶಿಸಿದ್ದು , ಮುಂದಿನ ಮೂರು ತಿಂಗಳಲ್ಲಿ ಈ ಕಚೇರಿ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ನಾಗರಾಜರಾವ್‌ ಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+