ನಿಮ್ಮ ಕೈಯ್ಯಲ್ಲಿದೆಸ್ವಚ್ಛ ಬೆಂಗಳೂರು
ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಧಿಕಾರಕ್ಕೆ ಬಂದ ಪ್ರಾರಂಭದ ದಿನಗಳಲ್ಲಿ ಹಂಚಿಕೊಳ್ಳುತ್ತಿದ್ದ ಕನಸು- ಬೆಂಗಳೂರನ್ನು ಸಿಂಗಪೂರ್ ಆಗಿಸುವುದು. ಈಚೆಗೆ ಕೃಷ್ಣ ಸಿಂಗಪೂರ್ ಸುದ್ದಿಯೆತ್ತುತ್ತಿಲ್ಲ . ಈ ಮುನ್ನ ಒಂದಿಬ್ಬರು ಪಾಲಿಕೆಯ ಆಯುಕ್ತರು ಬೆಂಗಳೂರನ್ನು ಶುದ್ಧೀಕರಿಸುವಲ್ಲಿ ಆಸಕ್ತಿ ತೋರಿದರೂ, ಅವಧಿಗೆ ಮುನ್ನವೇ ಅವರು ಎತ್ತಂಗಡಿಯಾದರು. ಅದೆಲ್ಲ ಹಳೆಯ ಕಥೆ. ಈಗ ಪ್ರೇಮಾ ಕಾರ್ಯಪ್ಪ - ಅಶೋಕ್ ದಳವಾಯಿಯವರ ಸರದಿ. ಬೆಂಗಳೂರು ಮತ್ತೊಮ್ಮೆ ಶುದ್ಧೀಕರಣಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಿದೆ- ಸ್ವಚ್ಛ ಬೆಂಗಳೂರು- 2 , ‘ಶುಚಿಮಿತ್ರ’ ದ ಮೂಲಕ.
ಸ್ವಚ್ಛ ಹಾಗೂ ಸುಂದರ ಬೆಂಗಳೂರು ಎನ್ನುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಶತಾಯಗತಾಯ ಜಾರಿಯಾಗಿಸಲು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಅಂಜೆಂಡಾ ಕಾರ್ಯಪಡೆ (ಬಿಎಟಿಎಫ್) ಕೈ ಬೆಸೆದಿವೆ. ಶನಿವಾರ ಶುಚಿಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೇಯರ್ ಪ್ರೇಮಾ ಕಾರ್ಯಪ್ಪ ವಿಶ್ವಾಸದಿಂದ ಮಾತನಾಡಿದರು. ಇದೊಂದು ಸಾಮೂಹಿಕ ಕಾರ್ಯಕ್ರಮ. ಸಾರ್ವಜನಿಕರೂ ಭಾಗಿಯಾದಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ಅವರು ಹೇಳಿದರು.
ಮೇಯರ್ ಅವರು ಹೇಳುವಂತೆ, ಶುಚಿಮಿತ್ರ ಕಾರ್ಯಕ್ರಮ ನಡೆಯುವುದು ಸಾರ್ವಜನಿಕರ ಸಹಕಾರದೊಂದಿಗೆ. ಈಗಾಗಲೇ ಸಾಮಾಜಿಕ ಕಳಕಳಿಯಿರುವ 84 ಮಂದಿ ಸ್ವಯಂ ಸೇವಕ ಶುಚಿಮಿತ್ರರು ನಗರವನ್ನು ಸ್ವಚ್ಛವಾಗಿಡುವ ದೀಕ್ಷೆ ಕೈಗೊಂಡಿದ್ದಾರೆ. 6 ತಿಂಗಳ ಅವಧಿಯಲ್ಲಿ ಈ ಕಾರ್ಯಕರ್ತರು ತಂತಮ್ಮ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಲು ಸಹಕರಿಸುವ ಜೊತೆಗೆ, ಸ್ವಚ್ಛತಾ ಕಾರ್ಯದ ಉಸ್ತುವಾರಿ ವಹಿಸುವರು. ಪೌರ ಕಾರ್ಮಿಕರ ಆಗಮನ ಹಾಗೂ ಅವರ ಕೆಲಸದ ಕುರಿತು ನಿಗಾ ವಹಿಸುವುದು ಶುಚಿಮಿತ್ರರ ಜವಾಬ್ದಾರಿ.
ನಿಮ್ಮ ನೆರವಿಗೆ ಹೆಲ್ತ್ ನೆಟ್- ಹೆಲ್ಪ್‌ಲೈನ್
ಶುಚಿಮಿತ್ರ ಕಾರ್ಯಕ್ರಮದ ಜೊತೆಗೆ- ನಾಗರಿಕರ ಕುಂದುಕೊರತೆಗಳಿಗೆ ಸ್ಪಂದಿಸುವ ವಿವಿಧ ಇಲಾಖೆಗಳ ನಡುವೆ ಕೊಂಡಿಯಾಗಿರುವ ಹೆಲ್ತ್‌ನೆಟ್ ಹಾಗೂ ಹೆಲ್ತ್‌ಲೈನ್‌ಗಳಿಗೂ ಮೇಯರ್ ಚಾಲನೆ ನೀಡಿದರು . ಇನ್ಫೋಸಿಸ್‌ನ ಸುಧಾಮೂರ್ತಿ ಅವರು ನೀಡಿರುವ 40 ಲಕ್ಷ ರುಪಾಯಿಗಳ ಕೊಡುಗೆಯಿಂದ ಆರಂಭವಾಗಿರುವ ಹೆಲ್ತ್‌ನೆಟ್, ವ್ಯರ್ಥ ಸಾಮಗ್ರಿಗಳ ವಿಲೇವಾರಿ ವಿಷಯದಲ್ಲಿ ವಿವಿಧ ಇಲಾಖೆಗಳನ್ನು ಸಂಪರ್ಕಿಸುತ್ತದೆ. ಮೊಬೈಲ್ ಸೆಟ್ ಒಳಗೊಂಡ ರೇಡಿಯೋ ಪೇಜಿಂಗ್ ಈ ಕಾರ್ಯಕ್ರಮದ ವಿಶೇಷ.
ದೂರು ಕೊಡಲು 9845024365 ಸಂಖ್ಯೆ ಸಂಪರ್ಕಿಸಿ
ಕಸ ವಿಲೇವಾರಿ ಸೇರಿದಂತೆ ನಾಗರಿಕರ ಕುಂದು ಕೊರತೆಗಳನ್ನು ತ್ವರಿತ ಗತಿಯಲ್ಲಿ ಪರಿಹರಿಸಲು ರೂಪಿತವಾಗಿರುವ ಕಾರ್ಯಕ್ರಮ- ಹೆಲ್ಪ್‌ಲೈನ್. ನಾಗರಿಕರು ತಮ್ಮ ದೂರುಗಳನ್ನು 9845024365 ಸಂಖ್ಯೆಗೆ ಸಂಪರ್ಕಿಸಿದ 12 ಗಂಟೆಯಾಳಗೆ ಕೆಲಸ ಆಗಿರುತ್ತದೆ. ಮಹಾನಗರ ಪಾಲಿಕೆ, ಬಿಎಟಿಎಫ್ ಹಾಗೂ ಏರ್‌ಟೆಲ್ ಸಂಸ್ಥೆಗಳು ಹೆಲ್ಪ್‌ಲೈನ್ ಯಶಸ್ಸಿಗಾಗಿ ಒಟ್ಟುಗೂಡಿವೆ.
ಸ್ವಚ್ಛ ಬೆಂಗಳೂರೆನ್ನುವುದನ್ನು ಕಾರ್ಯಕ್ರಮ ಎನ್ನುವುದಕ್ಕಿಂತ ಆಂದೋಲನ ಎನ್ನುವುದು ಅರ್ಥಪೂರ್ಣ. ಇದರಡಿಯಲ್ಲಿ ಪರಿಸರವನ್ನು ಚೊಕ್ಕಟವಾಗಿಡುವ ಕುರಿತು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಲಾಗುವುದು. ಕಸ ಸಂಗ್ರಹಣೆ, ವಿಲೇವಾರಿಯನ್ನು ಹೆಚ್ಚು ಸಮರ್ಪಕಗೊಳಿಸಲಾಗುವುದು. ಒಟ್ಟಿನಲ್ಲಿ ಸುಂದರ ಬೆಂಗಳೂರು ಆದೋಲನದ ಉದ್ದೇಶ. ಸ್ವಚ್ಛ ಬೆಂಗಳೂರಿನ ಪ್ರಮುಖ ಧ್ಯೇಯೋದ್ದೇಶಗಳು-
- ಕಸ ಬೇರ್ಪಡಿಸುವಿಕೆ ಹಾಗೂ ಮನೆ ಬಾಗಿಲಿಗೆ ಹೋಗಿ ಕಸ ಸಂಗ್ರಹಣೆ
- ದ್ವಿತೀಯ ತ್ಯಾಜ್ಯ ಸಂಗ್ರಹಣೆ
- ತಳ್ಳುಗಾಡಿ ಹಾಗೂ ಸಾಗಾಣಿಕೆ ವಾಹನಗಳ ಬಳಕೆಯನ್ನು ಕನಿಷ್ಠಗೊಳಿಸುವುದು
- ನಾಗರಿಕ ಶಿಸ್ತುಪಾಲನೆಗಾಗಿ ಕಡಿಮೆ ಸಂಖ್ಯೆಯ ಕಸದಬುಟ್ಟಿಗಳ ಬಳಕೆ
- ಕಸ ರಹಿತ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳು
- ತ್ಯಾಜ್ಯ ಉತ್ಪಾದನೆಯನ್ನು ಕನಿಷ್ಠಗೊಳಿಸುವುದು ಹಾಗೂ ಕಸವನ್ನು ವಿಕೇಂದ್ರೀಕರಣಗೊಳಿಸುವುದು ಜನರಿಂದಲೇ ಯಶಸ್ಸು ಕಾಣಬೇಕಾದ ಶುಚಿಮಿತ್ರ ಕಾರ್ಯಕ್ರಮಕ್ಕೆ ನಿಮ್ಮ ಅಗತ್ಯವೂ ಇದೆ. ಶುಚಿಮಿತ್ರರಾಗಿ ನೋಂದಾಯಿಸಿಕೊಳ್ಳುವವರು ಕೆಳಗಿನ ವ್ಯಕ್ತಿಗಳನ್ನು ಮಾಹಿತಿಗಾಗಿ ಸಂಪರ್ಕಿಸಬಹುದು-
ಡಾ. ಲೋಕೇಶ್, ಹೆಲ್ತ್ ಆಫೀಸರ್ (ಪೂರ್ವ) - ಫೋನ್ : 5583204
ಡಾ. ಕುಮಾರಸ್ವಾಮಿ, ಹೆಲ್ತ್ ಆಫೀಸರ್(ಪಶ್ಚಿಮ) - ಫೋನ್ : 3444286
ಡಾ.ನಾಗರಾಜ್, ಹೆಲ್ತ್ ಆಫೀಸರ್ (ದಕ್ಷಿಣ)- ಫೋನ್ : 2223668
ಸೂಸಾೖ , ಬಿಎಟಿಎಫ್- ಫೋನ್ :5583689 / 690
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications