Get Updates
Get notified of breaking news, exclusive insights, and must-see stories!

ಬೆಂಗಳೂರು ಭಾರತದ ನವ ತಂತ್ರಜ್ಞಾನದ ‘ಪವರ್‌ ಹೌಸ್‌’- ನಾಸ್ದಾಕ್‌

ಬೆಂಗಳೂರು : ಭವಿಷ್ಯದಲ್ಲಿ ಜಾಗತಿಕ ಶಕ್ತಿಯಾಗಿ ಭಾರತ ಹೊರ ಹೊಮ್ಮುವ ಬಗ್ಗೆ ಯಾವುದೇ ಅನುಮಾನ ಉಳಿದಿಲ್ಲವೆಂದು ಅಭಿಪ್ರಾಯಪಟ್ಟಿರುವ ವಿಶ್ವದ ಬಹುದೊಡ್ಡ ಸ್ಟಾಕ್‌ ಎಕ್ಸ್‌ಚೇಂಜ್‌ ಹುದ್ದರಿ ನಾಸ್ದಾಕ್‌, ಈ ನಿಟ್ಟಿನಲ್ಲಿ ಬೆಂಗಳೂರನ್ನು ವಿಶೇಷವಾಗಿ ಹೆಸರಿಸಿದೆ.

ಇತ್ತೀಚೆಗಷ್ಟೇ ಭಾರತದಲ್ಲಿ ತನ್ನ ಕಚೇರಿಯನ್ನು ಪ್ರಾರಂಭಿಸಿರುವ ನಾಸ್ದಾಕ್‌, ಭಾರತ ಕುರಿತಾದ ತನ್ನ ವಿಶೇಷ ವರದಿಯಲ್ಲಿ ಈ ಮೆಚ್ಚುಗೆ ಮಿಶ್ರಿತ ಆಶಾಭಾವನೆಯನ್ನು ವ್ಯಕ್ತಪಡಿಸಿದೆ. ಹಲವು ಕ್ಷೇತ್ರದಲ್ಲಿನ ಭಾರತದ ಸಾಧನೆಯನ್ನು ಹೆಕ್ಕಿ ತೋರಿಸಿರುವ ನಾಸ್ದಾಕ್‌, ಈ ನಿಟ್ಟಿನಲ್ಲಿ ಅತ್ಯಂತ ಯಶಸ್ವಿ ಕ್ಷೇತ್ರವಾದ ಮಾಹಿತಿ ತಂತ್ರಜ್ಞಾನದ ಗೆಲುವನ್ನು ಹೆಸರಿಸಿದೆ.

ಭಾರತದ ಕೈಗಾರಿಕಾ ಬೆಳವಣಿಗೆ ಸಂಬಂಧಿಸಿದಂತೆ ಪ್ರಸ್ತಾಪಿಸಿರುವ ವರದಿ, ಈ ನಿಟ್ಟಿನಲ್ಲಿ ಬೆಂಗಳೂರು ಸೇರಿದಂತೆ ಭಾರತದ ಏಳು ನಗರಗಳನ್ನು ಹೆಸರಿಸಿದೆ. ದೆಹಲಿ, ಕೋಲ್ಕತಾ, ಮುಂಬಯಿ, ಹೈದರಾಬಾದ್‌, ಪುಣೆ ಹಾಗೂ ಚೆನ್ನೈ ನಾಸ್ದಾಕ್‌ನ ಗಮನಕ್ಕೆ ಬಿದ್ದ ಇತರ ನಗರಗಳು.

ಬೆಂಗಳೂರನ್ನು ಭಾರತದ ಸಿಲಿಕಾನ್‌ ವ್ಯಾಲಿಯೆಂದು, ಹೊಸ ತಂತ್ರಜ್ಞಾನದ ಪವರ್‌ ಹೌಸ್‌ ಎಂದು ನಾಸ್ದಾಕ್‌ ವಿಶೇಷವಾಗಿ ಬಣ್ಣಿಸಿದೆ. ಚಮಕಿನ ಷಾಪಿಂಗ್‌ ಮಳಿಗೆಗಳು, ಹೊಸ ನಮೂನೆಯ ರೆಸ್ಟೋರೆಂಟ್‌ಗಳು ಹಾಗೂ ದೇಶದ ಅತ್ಯುನ್ನತ ಉದ್ಯಾನಗಳನ್ನು ಹೊಂದಿರುವ ಬೆಂಗಳೂರು ದೇಶದ ಹೊಸ ಪೀಳಿಗೆಯ ಶ್ರೀಮಂತ - ಮಧ್ಯಮ ವರ್ಗದವರಿಗೆ ಚುಂಬಕವಾಗಿದೆ ಎಂದಿದೆ ನಾಸ್ದಾಕ್‌ ವರದಿ.

36 ಪುಟಗಳ ನಾಸ್ದಾಕ್‌ನ ವರದಿ, ಸರ್ಕಾರದ ಪಾತ್ರ ಸೇರಿದಂತೆ ದೇಶದ ವಿವಿಧ ವಿಭಾಗ ವಿಷಯಗಳ ಸಂಬಂಧಿಸಿದಂತೆ ಆಳ ಅಧ್ಯಯನ ನಡೆಸಿದೆ. ಸಾಫ್ಟ್‌ವೇರ್‌ ಹಾಗೂ ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೆ ಭವಿಷ್ಯದ ಜೈವಿಕ, ಫಾರ್ಮಾಸ್ಯೂಟಿಕಲ್ಸ್‌ ಹಾಗೂ ಟೆಲಿ ಕಮ್ಯುನಿಕ್ಶೇನ್ಸ್‌ ಕ್ಷೇತ್ರಗಳ ಸಾಧ್ಯಾಸಾಧ್ಯತೆಗಳನ್ನೂ ವರದಿ ಪ್ರಸ್ತಾಪಿಸಿದೆ. ದೇಶದ ಇತ್ತೀಚಿನ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಇನ್ಫೋಸಿಸ್‌ ಹಾಗೂ ಸತ್ಯಂ ಇನ್ಫೋ ವೇಗಳ ಯಶೋಗಾಥೆಯನ್ನೂ ವರದಿ ಬಣ್ಣಿಸಿದೆ.

ಭಾರತದ ಐಟಿ ಪಿತಾಮಹ ದೇವಾಂಗ್‌ ಮೆಹ್ತಾ ಅವರ ಸಂದರ್ಶನವನ್ನೂ ಹೊಂದಿರುವ ನಾಸ್ದಾಕ್‌ನ ವರದಿ ಕೊನೆಯದಾಗಿ ಹೇಳುವುದಿಷ್ಟು - ‘ಭಾರತದ್ದು ಗಣನೀಯ ರೋಮಾಂಚಕ ಗಾಥೆ. ಅದರೊಂದು ಭಾಗವಾಗಿ ಭಾಗಿಯಾಗಲು ನಮಗೆ ಹರ್ಷವೆನಿಸುತ್ತದೆ.’

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+