Get Updates
Get notified of breaking news, exclusive insights, and must-see stories!

ಅಮೆರಿಕೆ ಹಿನ್ನಡೆಯ ಕಡಲಲ್ಲಿ ಭಾರತದ ನಗೆಯ ಹಾಯಿದೋಣಿ

* ಜಾರ್ಜ್‌ ವರ್ಗೀಸ್‌

ನವದೆಹಲಿ : ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಎನಿಸಿಕೊಳ್ಳಲು ಭಾರತಕ್ಕೆ ಬಯಸದೆಯೇ ಭಾಗ್ಯ ಒದಗಿಬಂದಿದೆ. ಆ ಭಾಗ್ಯ ಯಾವುದು ಅಂದಿರಾ ? ಅಮೆರಿಕೆಯಲ್ಲಿನ ಆರ್ಥಿಕ ಸ್ಥಿತಿಯ ಹಿನ್ನಡೆ !

ಭಾರತದ ಐಟಿ ರೇಸ್‌ನಲ್ಲಿ ಭಾಗಿಯಾಗಿರುವ ಸ್ಪರ್ಧಿಗಳ ಈ ಹೊತ್ತಿನ ಲೆಕ್ಕಾಚಾರ ಏನೆಂದರೆ, ಸ್ಪರ್ಧೆ ಕಡಿಮೆಯಾಗಿದೆ. ಕಣದಲ್ಲಿ ಹೆಚ್ಚು ಮಂದಿ ಇಲ್ಲ. ಓಡಿದೋರು ಹಾಳಾದರು, ಉಳಿದಿರೋರು ಬದುಕಿದರು. ಅಂದರೆ, ಯೂರೋಪ್‌ ಹಾಗೂ ಅಮೆರಿಕದ ಮಾರಾಟಕ್ಕಿರುವ ಕಂಪನಿಗಳನ್ನೆಲ್ಲಾ ಕೊಂಡುಕೊಂಡು, ಆ ಸಂಪತ್ತನ್ನೆಲ್ಲಾ ಕ್ರೋಢೀಕರಿಸಿದರೆ ಭಾರತ ನಂಬರ್‌ ಒನ್‌ ಐಟಿ ಸರ್ವಿಸ್‌ ಕಂಪನಿಯಾಗಿ ಜಾಗತಿಕ ನಕಾಶೆಯಲ್ಲಿ ಗುರ್ತಿಸಿಕೊಳ್ಳುತ್ತದೆ !

ಒಂದು ಕಾಲದಲ್ಲಿ ಆಕಾಶದಲ್ಲಿ ಹಾರಾಡುತ್ತಿದ್ದ ರಿಯಲ್‌ ಎಸ್ಟೇಟ್‌ ಎಂಬ ಗಾಳಿಪಟ ಹರಿದು, ಧುತ್ತೆಂದು ಕೆಳಕ್ಕೆ ಬಿತ್ತಲ್ಲ. ಹಾಗಾಗಿದೆ ಇವತ್ತಿನ ಐಟಿ ಪರಿಸ್ಥಿತಿ. ಆದರೆ ಮಾಂಜಾ ಕೊಡುವ ಗಾಳಿಪಟಗಳು ಇಲ್ಲದ್ದರಿಂದ ಗಾಳಿಪಟ ಹಾರಿಸುವನೇ ಜಾಣ ! ಅಮೆರಿಕದ ಕಂಪನಿಗಳನ್ನು ಸೇರಿಸಿಕೊಳ್ಳುವ ಯೋಚನೆಯನ್ನೂ ಬಹುತೇಕರು ಮಾಡದ ಈ ಹೊತ್ತಿನಲ್ಲಿ ಭಾರತದ ಐಟಿ ಪರಿಣತರು ತಲೆ ಓಡಿಸಿ, ಅವನ್ನೆಲ್ಲಾ ಬುಟ್ಟಿಗೆ ಹಾಕಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

ಪ್ರಿನ್ಸಿಪಲ್‌ ಅನಾಲಿಸ್ಟ್‌ ಇಯಾನ್‌ ಬರ್ಟ್ಯಾಮ್‌ ಹೇಳುತ್ತಾರೆ- ಈಗ ಐಟಿಯ ಸ್ಥಿತಿಯ ಒಳದೊಗರುಗಳನ್ನು ತುಂಬಲು ಹಣ ಹರಿಸಲು ಮುಂದೆ ಬರುವ ಮಂದಿ ಬಹಳ ಕಡಿಮೆ. ಬಂದವರಿಗೆ ಮುಂದೆ ಆ ದೊಗರುಗಳೆಲ್ಲಾ ಚಿನ್ನದ ಖನಿಗಳಾದರೂ ಆಶ್ಚರ್ಯವಿಲ್ಲ. ಈ ಕಾರಣ ಭಾರತಕ್ಕೆ ಉತ್ತಮ ಮಾರುಕಟ್ಟೆ ಸಿಕ್ಕಂತೆಯೇ ಆಗಿದೆ.

ಅಮೆರಿಕೆಯಲ್ಲಿ ಐಟಿ ಮಂದಿ ವೆಚ್ಚ ಕಡಿತದಲ್ಲಿ ನಿರತರಾಗಿರುವುದು ವಿಪ್ರೋದಂಥ ಉತ್ತಮ ಗುಣಮಟ್ಟದ ಕಂಪನಿಗಳ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ನಮಗಿದು ಟೆಸ್ಟಿಂಗ್‌ ಟೈಮ್‌ ಆದರೂ ಕೂಡ ಅವಕಾಶಗಳ ಮಹಾಪೂರವೂ ಹೌದು ಎನ್ನುತ್ತಾರೆ ವಿಪ್ರೋದ ಅಧ್ಯಕ್ಷ ಅಜೀಂ ಪ್ರೇಂಜಿ.

ಭಾರತಕ್ಕೇ ಏಕೆ ಈ ಅವಕಾಶ, ಬೇರೆ ದೇಶಗಳಿಗೆ ಯಾಕಿಲ್ಲ ?

  • ಅರಳು ಹುರಿದಂತೆ ಇಂಗ್ಲಿಷ್‌ ಮಾತಾಡುವ ಐಟಿ ಪರಿಣತರು ಭಾರತದಲ್ಲಿ ಹೆಚ್ಚು.
  • ಭಾರತದ ಸಾಫ್ಟ್‌ವೇರ್‌ ಬ್ರಾಂಡ್‌ ಇಕ್ವಿಟಿ ಈಗಾಗಲೇ ಮನೆಮಾತು.
  • ವಿಪ್ರೋ, ಇನ್ಫೋಸಿಸ್‌, ಎನ್‌ಐಐಟಿ, ಸತ್ಯಂ, ಟಿಸಿಎಸ್‌ ಕಂಪನಿಗಳು ಎಸ್‌ಇಐ ಮಟ್ಟದ ಕ್ವಾಲಿಟಿ 5 ಪ್ರಮಾಣ ಪತ್ರ ಪಡೆದ ಕಂಪನಿಗಳ ಯಾದಿಯಲ್ಲಿರುವ ಜಗತ್ತಿನ ಕೆಲವೇ ಕಂಪನಿಗಳ ಪೈಕಿ ಗುರ್ತಿಸಿಕೊಂಡಿರುವುದು.
  • ವೈಟುಕೆ ಸಮಸ್ಯೆ ಬಂದಾಗ ಜಗತ್ತು ನೋಡಿದ್ದು ಭಾರತವನ್ನ . ಆ ಸಮಸ್ಯೆ ಬಗೆಹರಿಸುವಲ್ಲಿ ಭಾರತದ ಐಟಿ ಪರಿಣತರ ಪಾಲು ಹಿರಿದು.
  • ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಟ್ರ್ಯಾಕ್‌ ರೆಕಾರ್ಡ್‌ ಬಲು ಚೆನ್ನಾಗಿದೆ.
  • ಸೇವೆಯಲ್ಲಿ ಪ್ರಾಮಾಣಿಕತೆ, ಸಮಯಪ್ರಜ್ಞೆ, ವೇಗ ಮೆರೆದಿರುವುದು.
ಭಾರತದ ಈ ಅಸೆಟ್‌ಗಳನ್ನು ಐಟಿ ಕ್ಷೇತ್ರದ ವಿಶ್ಲೇಷಕರೇ ಪಟ್ಟಿ ಮಾಡಿದ್ದಾರೆ. ಇದಕ್ಕೆ ಅವರು ದಾಖಲೆ, ಪುರಾವೆಗಳನ್ನೂ ತೋರುತ್ತಾರೆ. ನಗುತ್ತಾರೆ. ಇಂಥಾ ಅವಕಾಶ ಯಾವಾಗಲೂ ಸಿಗೋದಿಲ್ಲ ಸ್ವಾಮಿ ಅಂತಾರೆ. ಹುಚ್ಚು ಮುಂಡೆ ಮದುವೇಲಿ ಉಂಡೋನೇ ಜಾಣ ಸ್ವಾಮಿ ಎಂಬ ಗಾದೆಯನ್ನೂ ಉದುರಿಸುತ್ತಾರೆ.

ಅಮೆರಿಕೆಯಲ್ಲಿ ಐಟಿ ಟೈಟಾನಿಕ್‌ ಮುಳುಗಿತು ಎಂಬ ಸೊಲ್ಲುಗಳ ನಡುವೆಯೂ ನಮ್ಮಲ್ಲಿ ನಗೆಯ ಹಾಯಿದೋಣಿ ನಡೆಸುವ ಹರಿಕಾರರು ಐಟಿಗೆ ಜೀವ ತುಂಬುತ್ತಿದ್ದಾರೆ. ಏನಂತೀರಿ?

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+