Get Updates
Get notified of breaking news, exclusive insights, and must-see stories!

ದೆಹಲಿಯಲ್ಲಿ ಹನುಮಂತ, ಅಸ್ಸಾಂನಲ್ಲಿ ಜಾಂಬವಂತ !

ನಾಲ್‌ಬರಿ : ದೆಹಲಿಯಲ್ಲಿ ಕಪಿ ಮಾನವನ ಚೇಷ್ಟೆಯಾದರೆ, ಅಸ್ಸಾಂನಲ್ಲಿ ಇಗೋ ಬಂದಿದ್ದಾನೆ ಜಾಂಬವಂತ !

ಶನಿವಾರ ಅಸ್ಸಾಂನ ತುಂಬೆಲ್ಲಾ ಕರಡಿ ಮಾನವನ ಸುದ್ದಿಯೇ ಆಡುತ್ತಿತ್ತು. ಸುಮಾರು 20 ಜನರಿಗೆ ಈ ಕರಡಿ ಮಾನವ ತರಚು ಗಾಯಗಳನ್ನು ಮಾಡಿದ್ದಾನಂತೆ. ಪೊಲೀಸರು ಈ ವಿಷಯವನ್ನು ತಿಳಿಸಿದ್ದಾರೆ. ಪೊಲೀಸರಿಗೆ ಈ ವಿಷಯದಲ್ಲಿ ಕಟ್ಟೆಚ್ಚರ ವಹಿಸಿ, ಜಿಲ್ಲಾಡಳಿತಗಳಿಂದ ವರದಿಗಳನ್ನು ತರಿಸಿಕೊಂಡು, ಪರಿಸ್ಥಿತಿ ಪ್ರಕೋಪಕ್ಕೆ ತಿರುಗದಂತೆ ನೋಡಿಕೊಳ್ಳುವಂತೆ ಆದೇಶಿಸಲಾಗಿದೆ ಎಂದು ಅಸ್ಸಾಂನ ಆರೋಗ್ಯ ಸಚಿವ ಭೂಮಿದಾರ್‌ ಬರ್ಮನ್‌ ಶನಿವಾರ ತಿಳಿಸಿದ್ದಾರೆ.

ಬರ್ಮನ್‌ ನಾಲ್‌ಬರಿ ಜಿಲ್ಲೆಗೆ ಭೆಟ್ಟಿ ಕೊಟ್ಟು , ಪೊಲೀಸರೊಡನೆ ಈ ಬಗ್ಗೆ ಚರ್ಚಿಸಿದ್ದಾರೆ. ನಾನು ವೈಯಕ್ತಿಕವಾಗಿ ಇವನ್ನೆಲ್ಲಾ ನಂಬುವುದಿಲ್ಲ. ಹಾಗಂತ ಸ್ಥಳೀಯ ಜನ ತಾವು ಅನುಭವಿಸಿದ ತೊಂದರೆ ಹೇಳಿಕೊಂಡರೆ ಅದನ್ನು ಕಡೆಗಣಿಸುವ ಹಾಗೂ ಇಲ್ಲ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎನ್ನುತ್ತಾರೆ ಬರ್ಮನ್‌.

ಜಾಂಬವಂತ ಏನೇನು ಮಾಡಿದ ಅಂತ ಅದನ್ನು ಅನುಭವಿಸಿದವರ ಮಾತಲ್ಲೇ ಕೇಳಿ...

  • ರಮಣಿ ನಾಥ್‌, ಶಾಲಾ ಶಿಕ್ಷಕ, ತಿಹು ಗ್ರಾಮ- ಧಡ್‌ ಅಂತ ರಾತ್ರಿ ಸದ್ದಾಯಿತು. ಯಾವುದೋ ಕಪ್ಪು ಆಕಾರ, ಕರಡಿಯನ್ನೇ ಹೋಲುತ್ತಿತ್ತು. ಇನ್ನೇನು ನಮ್ಮ ಮೇಲೆ ಎರಗಬೇಕು ಅನ್ನುವಷ್ಟರಲ್ಲಿ ದೀಪ ಹಾಕಿದೆವು. ಅಷ್ಟರಲ್ಲಿ ಅದು ಮಂಗಮಾಯ ! ನಾವು ಬಚಾವ್‌.
  • ಅದೇ ಹಳ್ಳಿಯ ರಮೇಶ್‌- ಇದ್ದಕ್ಕಿದ್ದಂತೆ ಏನೋ ಬಂತು. ಕಪ್ಪಗಿತ್ತು. ತರಚು ಗಾಯ ಮಾಡಿತು. ಕರಡಿಯೇ ಇದ್ದ ಹಾಗಿತ್ತು. ಜಮ ಜಮಾಯಿಸಿ, ಏನದು ಅಂತ ನೋಡುವಷ್ಟರಲ್ಲಿ ಕರಗಿಹೋದಂತಾಯಿತು.
  • ಮಾಲಬಿಕ ದಾಸ್‌, ಗೃಹಿಣಿ- ಬಾಗಿಲುಗಳನ್ನು ಮುಚ್ಚಿದರೂ ಕರಡಿ ಮಾನವ ಅವನ್ನು ತೂರಿಕೊಂಡೇ ಬರುತ್ತಾನಂತೆ. ರಾತ್ರಿ ಹೊತ್ತು ನಿದ್ದೆಯೇ ಹತ್ತುತ್ತಿಲ್ಲ.
ನಾಲ್‌ಬರಿ ಜಿಲ್ಲಾಧಿಕಾರಿ ಬಿ.ಕಲ್ಯಾಣ್‌ ಚಕ್ರವರ್ತಿ ಈಗ ತರಾತುರಿಯಲ್ಲಿದ್ದಾರೆ. ದೆಹಲಿಯಲ್ಲಿ ಮಂಗಮಾನವ ಮೇನಿಯಾ ತಂದಿರುವ ಕುತ್ತು ಅಸ್ಸಾಂಗೂ ಬಾರದಿರಲಿ ಎಂಬ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಚುರುಕುಗೊಳಿಸಿ, ಜನಮನ ಕದಡದಂತೆ ಎಚ್ಚರ ವಹಿಸುತ್ತಿದ್ದಾರೆ. ಪೊಲೀಸರನ್ನು ಜನರಲ್ಲಿ ಜಾಗೃತಿ ಮೂಡಿಸಲು ನಿಯೋಜಿಸಲಾಗಿದೆ. ಗಸ್ತು ತಿರುಗುತ್ತಾ ಜನರ ಭ್ರಮೆ ಹೋಗಲಾಡಿಸಲು ಪೊಲೀಸರು ಹೆಣಗಾಡುತ್ತಿದ್ದಾರೆ. ಕರಡಿ ಮಾನವನೂ ಇಲ್ಲ, ಏನೂ ಇಲ್ಲ. ಜನರ ಭ್ರಾಂತಿಯಿದು ಎನ್ನುತ್ತಾರೆ ಕಲ್ಯಾಣ್‌ ಚಕ್ರವರ್ತಿ.

ನಾಥ್‌ಕುಚಿ, ದೋಲಾಯ್‌ಗಾಂವ್‌ ಹಾಗೂ ಪಹ್ಲ ಗ್ರಾಮದ ಜನರಲ್ಲಿ ಜಾಂಬವಂತನ ಭೀತಿಯಿದ್ದು, ನಿದಿರೆಯಿಲ್ಲದ ರಾತ್ರಿಗಳು ಹೆಚ್ಚಾಗುತ್ತಿವೆಯಂತೆ.

(ಎಎಫ್‌ಪಿ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+