ಸಾಗರದಾಚೆ ಕಾಂಗ್ರೆಸ್ ಸಂಪರ್ಕಗಳ ಬಲಪಡಿಸಲು ಸೋನಿಯಾ ಸಜ್ಜು
ಲಂಡನ್ : ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನಗೊಳಿಸಲು ಹೆಣಗುತ್ತಿರುವ ಪಕ್ಷದ ಮುಂದಾಳು ಸೋನಿಯಾಗಾಂಧಿ ದೇಶದೊಳಗೆ ಮಾತ್ರವಲ್ಲದೆ, ಯುರೋಪ್ ರಾಷ್ಟ್ರಗಳಲ್ಲಿನ ಕಾಂಗ್ರೆಸ್ ಪಕ್ಷದ ಸಂಪರ್ಕಗಳನ್ನು ಬಲಪಡಿಸಲು ನಿಶ್ಚಯಿಸಿದ್ದಾರೆ. ಈ ನಿಟ್ಟಿನಲ್ಲಿ ಬರುವ ಜೂನ್ ತಿಂಗಳಲ್ಲಿ ಅವರು ಬ್ರಿಟನ್ ಹಾಗೂ ಅಮೇರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ.
ಸಾಗರದಾಚೆಯ ಭಾರತೀಯ ಕಾಂಗ್ರೆಸ್ (ಐಓಸಿ)ನ ಅತಿಥಿಯಾಗಿ ಸೋನಿಯಾಗಾಂಧಿ ಅವರು ಜೂನ್ 22 ರಂದು ಎರಡು ದಿನಗಳ ಭೇಟಿಗಾಗಿ ಇಂಗ್ಲೆಂಡ್‌ಗೆ ಆಗಮಿಸುವರು. ಇದೇ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಭೆ ಹಾಗೂ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವರು. ಈ ವಿಷಯವನ್ನು ಐಓಸಿಯ ಅಧ್ಯಕ್ಷ ಬಲ್ವಂತ್ ಕಪೂರ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಜೂನ್ 24 ರಂದು ನ್ಯೂಯಾರ್ಕ್‌ಗೆ ತೆರಳುವ ಸೋನಿಯಾ, ಮರುದಿನ ವಾಷಿಂಗ್ಟನ್‌ಗೆ ಭೇಟಿ ಕೊಡುವರು. ಆನಂತರ ಐಸ್‌ಲ್ಯಾಂಡ್‌ಗೆ ತೆರಳುವ ಅವರು- ನಾಲ್ಕು ದಿನಗಳ ಕಾಲ ಐಸ್‌ಲ್ಯಾಂಡ್ ಪ್ರಧಾನಿಗಳ ಅತಿಥಿಯಾಗಿರುವರು ಎಂದು ಕಪೂರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಕಾಂಗ್ರೆಸ್‌ನ ಮುಖಂಡ ಹಾಗೂ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಅವರು, ಸೋನಿಯಾ ಅವರು ಬೇರೆ ಬೇರೆ ದೇಶಗಳಲ್ಲಿ ಕಾಂಗ್ರೆಸ್‌ನ ಬೇರುಗಳನ್ನು ಬಲಪಡಿಸಲು ಉದ್ದೇಶಿಸಿದ್ದಾರೆ ಎಂದರು. ಈ ನಿಟ್ಟಿನಲ್ಲಿ ಈಗಾಗಲೇ ಚೀನಾ, ಶ್ರೀಲಂಕಾ, ವಿಯಾಟ್ನಾಂ, ಇರಾಕ್‌ಗಳಿಗೆ ಪಕ್ಷದ ನಿಯೋಗಗಳನ್ನು ಸೋನಿಯಾ ಕಳುಹಿಸಿದ್ದಾರೆ ಹಾಗೂ ಸ್ವತಃ ತಾವೇ ಹಾಂಕಾಂಗ್‌ಗೆ ಭೇಟಿ ಕೊಟ್ಟಿದ್ದಾರೆ ಎಂದು ಖುರ್ಷಿದ್ ಹೇಳಿದರು.
ದೇಶೀಯ ವ್ಯವಹಾರಗಳಲ್ಲಿ ಬಿಜೆಪಿ ಮುಳುಗಿಹೋಗಿದ್ದರೆ, ಪ್ರತಿ ಪಕ್ಷವಾದ ಕಾಂಗ್ರೆಸ್ ಜಾಗತಿಕ ದೃಷ್ಟಿಕೋನವನ್ನು ಹೊಂದಿದೆ. ಪಕ್ಷದ ನಾಯಕಿಯಾಗಿ ವಿದೇಶೀ ಸಂಬಂಧಗಳನ್ನು ಬಲಪಡಿಸಲು ಸೋನಿಯಾ ಪ್ರಯತ್ನಿಸುತ್ತಿದ್ದಾರೆ ಎಂದು ಖುರ್ಷಿದ್ ತಿಳಿಸಿದರು. ಲಂಡನ್‌ಗೆ ಆಗಮಿಸುವ ಮುನ್ನ ತಮ್ಮ ಪಕ್ಷದ ಇನ್ನೊಬ್ಬ ಮುಖಂಡ ಜೈರಾಂ ರಮೇಶ್ ಅವರೊಂದಿಗೆ ಜರ್ಮನಿಗೆ ಭೇಟಿ ಕೊಟ್ಟಿದ್ದ ಖುರ್ಷಿದ್, ಅಲ್ಲಿನ ಕ್ರಿಶ್ಚಿಯನ್ ಡೆಮೊಕ್ರಟಿಕ್ ಯೂನಿಯನ್ ಮತ್ತು ಸೋಶಿಯಲಿಸ್ಟ್ ಪಾರ್ಟಿಗಳೊಂದಿಗೆ ಮಾತುಕತೆ ನಡೆಸಿದ್ದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications