Get Updates
Get notified of breaking news, exclusive insights, and must-see stories!

ಆರ್‌ಟಿಪಿಎಸ್‌ ಆವರಣದಲ್ಲಿ ಬೆಂಕಿ, ಪರಿವರ್ತಕ ಭಸ್ಮ

ರಾಯಚೂರು : ಇಲ್ಲಿನ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ 10.30ಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕೇಂದ್ರದ 220 ಕೆ.ವಿ. ಮತ್ತು 400 ಕೆ.ವಿ. ವಿದ್ಯುತ್‌ ಪರಿವರ್ತಕದ ಕೆಲ ಭಾಗಗಳು ಹಾನಿಗೊಳಗಾಗಿವೆ.

ಆವರಣದ 50 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ನೀಲಗಿರಿ ಗಿಡಗಳು ಸುಟ್ಟುಹೋಗಿವೆ. ಬೆಂಕಿ ಉರಿಯ ಪ್ರಭಾವ ತೀವ್ರವಾಗಿದ್ದ ಕಾರಣ ವಿದ್ಯುದುತ್ಪಾದನೆಯನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು. ಸಿಬ್ಬಂದಿಯೆಲ್ಲಾ ಬೆಂಕಿ ಆರಿಸುವ ಕಾರ್ಯದಲ್ಲಿ ನಿರತರಾದರು. ವಿದ್ಯುತ್‌ ಸರಬರಾಜು ವಾಹಕದ ‘ಬಸ್‌’, ವಿದ್ಯುತ್‌ ನಿಯಂತ್ರಕವೂ ಸುಟ್ಟಿದೆ. ಕೇಂದ್ರದ 4 ವಾಹನಗಳು ಹಾಗೂ ರಾಯಚೂರು ಅಗ್ನಿಶಾಮಕ ದಳದ 2 ವಾಹನಗಳು 5 ತಾಸು ಹೆಣಗಾಡಿ ಬೆಂಕಿ ನಂದಿಸಿದವು. ಮಧ್ಯಾಹ್ನ ಸುಮಾರು 3ಗಂಟೆಯವರೆಗೆ ಬೆಂಕಿ ಆರಿಸುವ ಕೆಲಸ ನಡೆಯಿತು.

ನಂತರ 2 ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆಯನ್ನು ಪುನಃ ಶುರುಮಾಡಲಾಯಿತು. ಸೇಡಂ, ಮುನಿರಾಬಾದ್‌, ದಾವಣಗೆರೆ ವಿಭಾಗಕ್ಕೆ ಈ ಅಪಘಾತದ ಕಾರಣ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಸುಟ್ಟಿರುವ ಪರಿವರ್ತಕ ಇನ್ನಿತರ ಬಿಡಿಭಾಗಗಳಿಂದ ಸುಮಾರು 1.5 ಲಕ್ಷ ರುಪಾಯಿ ನಷ್ಟ ಸಂಭವಿಸಿದೆ. ಬಿಡಿಭಾಗಗಳ ಜೋಡಣೆ ಕಾರ್ಯ ಬುಧವಾರ ಮಾಡಲಾಗುತ್ತದೆ ಎಂದು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಹತ್ತಲು ಏನು ಕಾರಣ ಎಂಬುದು ಇನ್ನೂ ತಿಳಿದುಬಂದಿಲ್ಲ.

ಅನಿಯಮಿತ ವಿದ್ಯುತ್‌ ನಿಲುಗಡೆ : ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ 5 ಘಟಕಗಳಲ್ಲಿ , ಕೈಗಾದ ಒಂದು ಘಟಕದಲ್ಲಿ ಹಾಗೂ ನೈವೇಲಿಯಲ್ಲಿ ವಿದ್ಯುತ್‌ ಉತ್ಪಾದನೆ ಪೂರ್ಣ ಸ್ಥಗಿತಗೊಂಡಿರುವುದರಂದ ಬೆಂಗಳೂರು ನಗರವೂ ಸೇರಿದಂತೆ ರಾಜ್ಯದಲ್ಲಿ ಅನಿಯಮಿತ ವಿದ್ಯುತ್‌ ನಿಲುಗಡೆ ಮಾಡಲಾಗುವುದು ಎಂದು ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ ಪ್ರಕಟಣೆ ಹೊರಡಿಸಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+