ಭೂಕಂಪ ಸಂತ್ರಸ್ತ ನಿಧಿ ಸಂಗ್ರಹ : ಹೃತಿಕ್, ಐಶ್ವರ್ಯಾ ಜೊತೆ ಕ್ಲಿಂಟನ್ !
ನ್ಯೂಯಾರ್ಕ್ : ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್‌ರೊಂದಿಗೆ ಹಾಲಿವುಡ್ ಹಾಗೂ ಬಾಲಿವುಡ್ ತಾರೆಯರನ್ನು ಒಟ್ಟುಗೂಡಿಸಿ, ಜೂನ್ 12 ರಂದು ಕಾರ್ಯಕ್ರಮವೊಂದನ್ನು ನಡೆಸುವ ಮೂಲಕ ಗುಜರಾತ್ ಭೂಕಂಪ ಸಂತ್ರಸ್ತರಿಗೆ 2 ಮಿಲಿಯನ್ ಡಾಲರ್‌ಗಳ ನಿಧಿಯನ್ನು ಒಟ್ಟುಗೂಡಿಸಿ ಕೊಡಲು ಅಮೇರಿಕನ್ ಇಂಡಿಯನ್ ಫೌಂಡೇಶನ್ ಮುಂದಾಗಿದೆ.
ಬಾಲಿವುಡ್‌ನ ಪ್ರಮುಖ ತಾರೆಗಳಾದ ಹೃತಿಕ್ ರೋಷನ್, ಐಶ್ವರ್ಯಾ ರೈ, ಸಂಜಯ್ ದತ್, ಅಮಿಶಾ ಪಟೇಲ್, ಊರ್ಮಿಳಾ ಮಾತೋಂಡ್ಕರ್ ಹಾಗೂ ಭುವನ ಸುಂದರಿ ಪ್ರಿಯಾಂಕ ಚೋಪ್ರ ನ್ಯೂಯಾರ್ಕ್‌ನಲ್ಲಿ ಕ್ಲಿಂಟನ್ ನೇತೃತ್ವದಲ್ಲಿ ನಡೆಯುವ ರಂಗಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಹಾಲಿವುಡ್‌ನ ಚುಂಬಕಗಳಾದ ಸ್ಟೀವನ್ ಸೀಗಲ್ ಹಾಗೂ ಉಮಾ ಥುರ್‌ಮನ್ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಹೆಚ್ಚೂ ಕಡಿಮೆ ಖಚಿತವಾಗಿದೆ.
50 ಸಾವಿರ ಡಾಲರ್ ಅಥವಾ ಇನ್ನೂ ಹೆಚ್ಚು ಹಣವನ್ನು ಕೊಡುಗೆಯಾಗಿ ನೀಡುವ ದಾನಿಗಳಿಗೆ ಕ್ಲಿಂಟನ್ ಅವರು ಸ್ಮರಣಿಕೆಯನ್ನು ನೀಡಿ ಗೌರವಿಸುವರು. ಎರಡೂವರೆ ತಾಸುಗಳ ಈ ಅದ್ದೂರಿ ಸಮಾರಂಭ, ಪಾಕಿಸ್ತಾನದ ಪ್ರದರ್ಶಕ ರಹತ್ ಫತೇಹ್ ಆಲಿಖಾನ್ ಹಾಗೂ ರೋಹಿತ್ ಬಾಲ್ ಅವರನ್ನೂ ಒಳಗೊಂಡಿದೆ. ಕಾರ್ಯಕ್ರಮದ ಇದಿಷ್ಟೂ ವಿಷಯವನ್ನು ಮೇಳದ ಉಪಾಧ್ಯಕ್ಷ ವಿಕ್ರಮ್ ಚಟ್ವಾಲ್ ಸುದ್ದಿಗಾರರಿಗೆ ತಿಳಿಸಿದರು.
ಅಮೇರಿಕಾದಾದ್ಯಂತ ನೆಲೆಸಿರುವ ಭಾರತೀಯ ಸಮುದಾಯದವರಿಂದ ಭೂಕಂಪ ಸಂತ್ರಸ್ತರಿಗೆ ನಿಧಿ ಸಂಗ್ರಹಿಸುವುದು ಮಾತ್ರವಲ್ಲದೆ- ದೇಶ ಅವರಿಂದ ಏನನ್ನು ನಿರೀಕ್ಷಿಸುತ್ತದೆ ಎನ್ನುವ ಅರಿವನ್ನು ಅವರಲ್ಲಿ ಜಾಗೃತಿಗೊಳಿಸುವ ಅಮೇರಿಕನ್ ಇಂಡಿಯನ್ ಫೌಂಡೇಶನ್ ಗುರಿಯಾಗಿದೆ ಎಂದು ಅದರ ನಿರ್ದೇಶಕ ಪ್ರದೀಪ್ ಕಶ್ಯಪ್ ತಿಳಿಸಿದರು.
(ಇನ್ಫೋ ವಾರ್ತೆ)
| ಮುಖಪುಟ / ಇವತ್ತು... ಈ ಹೊತ್ತು... |
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications