ಮೆಜೆಸ್ಟಿಕ್‌ನಿಂದ ವಿಜಯನಗರಕ್ಕೆಫ್ಲೈಓವರ್-ಸೋಮಣ್ಣ ಕನಸು
ಬೆಂಗಳೂರು : ಮೆಜೆಸ್ಟಿಕ್‌ನಿಂದ ವಿಜಯನಗರಕ್ಕೆ ಫ್ಲೈಓವರ್ ನಿರ್ಮಿಸುವುದು ನನ್ನ ಜೀವನದ ಕನಸು ಎಂದು ಶಾಸಕ ವಿ.ಸೋಮಣ್ಣ ಮಂಗಳವಾರ ಹೇಳಿದ್ದಾರೆ.
ವಿನಾಯಕ ಬಡಾವಣೆ (35ನೇ ವಾರ್ಡ್) ಯಲ್ಲಿ ಹೊಸ ವಾರ್ಡ್ ಕಚೇರಿ ಮತ್ತು ಬಸ್ ನಿಲ್ದಾಣ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಮೆಜೆಸ್ಟಿಕ್‌ನ ಶಾಂತಲಾ ಸಿಲ್ಕ್ ಹೌಸ್‌ನಿಂದ ವಿಜಯನಗರಕ್ಕೆ ಮೇಲ್ಸೇತುವೆ ನಿರ್ಮಿಸಲು ನಾನು ಸಚಿವನಾಗಿದ್ದಾಗ ಪ್ರಯತ್ನಿಸಿದ್ದೆ. ಸೋಮಣ್ಣ ಎಲ್ಲಾ ಹಣವನ್ನೂ ಬಿನ್ನಿಪೇಟೆ ಉದ್ಧಾರಕ್ಕೇ ಬಳಸುತ್ತಾರೆ ಎಂಬ ಅಪವಾದ ಬರಕೂಡದೆಂದು ಹಿಂದಕ್ಕೆ ಸರಿದೆ ಎಂದರು ಸೋಮಣ್ಣ.
ಸುಮಾರು 12 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೊಸ ವಾರ್ಡ್ ಕಚೇರಿಯಿಂದ ನಾಗರಿಕರ ಕುಂದು ಕೊರತೆಗೆ ತ್ವರಿತ ಪರಿಹಾರ ದೊರಕಲಿದೆ. ರಾಜ್ಯದಲ್ಲೇ ಬಿನ್ನಿಪೇಟೆಯನ್ನು ಮಾದರಿ ವಿಧಾನಸಬಾ ಕ್ಷೇತ್ರವನ್ನಾಗಿ ಮಾಡುವ ಉದ್ದಿಶ್ಯ ನನ್ನದು. ಸುಮಾರು 50 ಕೋಟಿ ರುಪಾಯಿ ವೆಚ್ಚದ ಹಲವಾರು ಅಭಿವೃದ್ಧಿ ಕಾಮಗಾರಿಗಳು ಈಗ ಜಾರಿಯಲ್ಲಿವೆ. ಕಾವೇರಿ 4ನೇ ಹಂತದ ಕುಡಿಯುವ ನೀರಿನ ಯೋಜನೆಗೂ ಸದ್ಯದಲ್ಲೇ ಚಾಲನೆ ದೊರೆಯಲಿದೆ ಎಂದು ಸೋಮಣ್ಣ ಹೇಳಿದರು.
ಮೇಯರ್ ಪ್ರೇಮಾ ಕಾರ್ಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಮೇಯರ್ ಬಿ.ಎಸ್.ಪುಟ್ಟರಾಜು, ಮಾಜಿ ಮೇಯರ್ ಕೆ.ಎಚ್.ಎನ್.ಸಿಂಹ ಮೊದಲಾದವರು ಹಾಜರಿದ್ದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications