ದೆಹಲಿಯ ಆರ್ಥಿಕ ವ್ಯವಸ್ಥೆಯ ಜುಟ್ಟಿಡಿದಿರುವ ಮಂಗ ಮಾನವ
ನವದೆಹಲಿ : ರಾಜಧಾನಿಯಲ್ಲಿ ವ್ಯಾಪಕವಾಗಿರುವ ‘ಮಂಕಿ ಫೋಬಿಯಾ’ , ಜನತೆಯ ಮಾನಸಿಕ ಸ್ವಾಸ್ಥ್ಯವನ್ನು ಹಾಳು ಮಾಡುವುದು ಮಾತ್ರವಲ್ಲದೆ- ಆರ್ಥಿಕ ವ್ಯವಸ್ಥೆಯಲ್ಲೂ ವ್ಯತ್ಯಯ ಉಂಟು ಮಾಡಿದೆ . ಮಂಗ ಮಾನವನ ಹಾವಳಿಯ ಭಯದಿಂದಾಗಿ ಆ ಹೊತ್ತಿನ ತುತ್ತನ್ನು ಹೊಂಚಿಕೊಳ್ಳುವವರ ಸ್ಥಿತಿಯಂತೂ ದಾರುಣವಾಗಿದೆ.
ದೆಹಲಿಯಲ್ಲಿ ರಾತ್ರಿಯಾಗುವುದೇ ಇಲ್ಲ ಅನ್ನುವ ಮಾತಿಗೆ ಅಪವಾದ ಎನ್ನುವಂತೀಗ ರಾತ್ರಿ 9 ಕ್ಕೆ ಮುನ್ನವೇ ರಾಜಧಾನಿಯ ಬಹುತೇಕ ಪ್ರದೇಶಗಳು ಮೌನದಲ್ಲಿ ಲೀನವಾಗುತ್ತಿವೆ. ಸಂಜೆಗತ್ತಲಿಗೇ ಮನೆಗಳಿಗೆ ಹಿಂದಿರುಗುವ ಜೇಬುಗಳು ಈಗ ಮೊದಲಿನಂತೆ ಭಾರವಾಗಿಲ್ಲ . ಯಾಕೆಂದರೆ, ಯಾರೂ ಅನವಶ್ಯಕವಾಗಿ ಜೀವವನ್ನು ಅಪಾಯಕ್ಕೆ ಒಡ್ಡಲು ಸಿದ್ಧವಾಗಿಲ್ಲ .
ಉದಾಹರಣೆಗೆ- ಪಶ್ಚಿಮ ದೆಹಲಿಯಲ್ಲಿರುವ ಮದರ್ ಡೈರಿ ಹಾಲಿನ ಬೂತಿನಲ್ಲಿ ಈ ಮೊದಲು ರಾತ್ರಿ ಹನ್ನೊಂದು ಕಳೆದರೂ ದೀಪ ಆರುತ್ತಿರಲಿಲ್ಲ . ಆದರೀಗ, ಬಹು ಮುಂಚೆಯೇ ಬೂತ್‌ನ ಮಾಲೀಕ ಬೀಗ ಜಡಿದುಕೊಂಡು ಮನೆಯತ್ತ ಸಾಗುತ್ತಾನೆ. ಆತನ ಮನೆ ಬೂತ್‌ನಿಂದ ಸ್ವಲ್ಪ ದೂರದಲ್ಲಿದೆ. ಗೊತ್ತಿದ್ದೂ , ವೃಥಾ ರಿಸ್ಕ್ ತಗೊಳ್ಳೋದೇಕೆ ಅನ್ನುವುದು ಆತ ಬೇಗ ಬಾಗಿಲು ಮುಚ್ಚುವುದಕ್ಕೆ ನೀಡುವ ಕಾರಣ.
ಬೂತ್‌ನಲ್ಲಿನ ವ್ಯಾಪಾರವೂ ಮೊದಲಿನಂತಿಲ್ಲ . ಸಂಜೆ ವೇಳೆಯಲ್ಲಿ ಅಪಾರ ಗ್ರಾಹಕರನ್ನು ಆಕರ್ಷಿಸುತ್ತಿದ್ದ ಐಸ್‌ಕ್ರೀಂ ಇನ್ನಿತರೆ ಉತ್ಪನ್ನಗಳು ಬೇಡಿಕೆ ಕಳಕೊಂಡು ಮಂಕಾಗಿವೆ. ಇದೇ ಸ್ಥಿತಿ ಇತರೆ ಸಂಜೆ ವ್ಯಾಪಾರಿಗಳಿಗೂ.
ರಾತ್ರಿಯೆಂಬುದು ಹಿಂದೆಂದೂ ಇಷ್ಟು ಭಯಾನಕವಾಗಿರಲಿಲ್ಲ
ಬೇಸಗೆಯ ಧಗೆಯಿಂದಾಗಿ ಗಾಳಿಗೆ ಮಯ್ಯಾಡ್ಡಿ ಟೆರೇಸ್‌ನಲ್ಲಿ ಮಲಗುತ್ತಿದ್ದವರನ್ನೂ ಮಂಗ ಮಾನವ ಭೂತವಾಗಿ ಕಾಡುತ್ತಿದೆ. ಕಂಪನಿಯಾಂದರಲ್ಲಿ ಅಕೌಂಟೆಂಟ್ ಆಗಿರುವ ರಾಜೇಶ್‌ಗೀಗ ಮನೆಯಾಳಗೆ ನಿದ್ದೆಯೇ ಬರುತ್ತಿಲ್ಲ . ಅದಕ್ಕೂ ಮುಖ್ಯವಾಗಿ ತನ್ನ ಮಗನ ಸಂಜೆಪಾಠ ರದ್ದಾದ ಬಗ್ಗೆ ಆತನಿಗೆ ವಿಷಾದ. ಇದೇ ಪರಿಸ್ಥಿತಿ ಎಲ್ಲ ವಿದ್ಯಾರ್ಥಿಗಳದು. ಬಹುತೇಕ ಎಲ್ಲ ವಿದ್ಯಾರ್ಥಿಗಳು ಸಂಜೆ ನಂತರದ ಮನೆಯಾಚೆಯ ಚಟುವಟಿಕೆಗಳಿಗೆ ನಮಸ್ಕಾರ ಹೇಳಿದ್ದಾರೆ. ಸಂಜೆಯ ನಂತರ ಮನೆಯೆಂಬ ಜೈಲಿನೊಳಗೇ ಎಲ್ಲ ಚಟುವಟಿಕೆಗಳೂ.
ಇದೇ ರೀತಿ ರಿಕ್ಷಾವಾಲಾ, ತರಕಾರಿಯಮ್ಮ, ಹೂವಾಡಗಿತ್ತಿ .. ಮುಂತಾದವರೆಲ್ಲ ತಮ್ಮ ಆದಾಯದಲ್ಲಿ ಕಡಿತ ಕಂಡಿದ್ದಾರೆ. ಇವರೆಲ್ಲರಿಗಿಂತ ರೋಗಿಗಳ ಸ್ಥಿತಿ ಹೆಚ್ಚು ಚಿಂತಾಜನಕ. ಸಂಜೆಯ ನಂತರ ಆರೋಗ್ಯದಲ್ಲಿ ಏರುಪೇರಾದರೆ ಚಿಕಿತ್ಸೆಗೆ ವೈದ್ಯರನ್ನು ಹುಡುಕುವುದೇ ಕಷ್ಟ . ಅಕ್ಷರಶಃ ಅವರ ಪರಿಸ್ಥಿತಿ- ನಾಯಿಪಾಡು. ಕನಿಷ್ಠ , ಔಷಧಿ ಅಂಗಡಿಗಳು ಕೂಡ ಅವರಿಗೆ ಸುಲಭಕ್ಕೆ ಸಿಕ್ಕುವಂತಿಲ್ಲ .
ದೆಹಲಿಯೆಂಬ ಮಾಯಾನಗರಿಯಿಂದು, ಮಂಗ ಮಾನವ ಎನ್ನುವ ಬೆದರಿಕೆಯಾಳಗೆ ಬದುಕುತ್ತಿದೆ. ಇದರ ಹಿಂದಿನ ರಹಸ್ಯ ಬೇಗ ಬಗೆಹರಿಯದಿದ್ದಲ್ಲಿ , ಅನೇಕ ಮಂದಿಯ ಆ ಹೊತ್ತಿನ ತುತ್ತಿಗೆ ಸಂಚಕಾರವಾಗುವುದು ನಿಶ್ಚಿತ . ಬಡವರ ತುತ್ತಿನಚೀಲಕ್ಕೆ ತೊಂದರೆಯಾಗದಿರಲಾದರೂ, ಮಂಗ ಮಾನವ ರಹಸ್ಯ ಬೇಗ ಕೊನೆಯಾಗಬೇಕು. ಒಳ್ಳೆಯದಾಗಲೆಂದೇ ಹಾರೈಸುವ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications